ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್
ಅಮೆರಿಕದ ಬಿಲ್ ಗೇಟ್ಸ್ಗೆ
ದುಡ್ಡುಮಾಡುವುದೇ ಕೆಲಸ.
ಅಮೆರಿಕದ ಗಿಲ್ ಬೇಟ್ಸ್ಗೆ
ಮಕ್ಕಳನ್ನು ಮಾಡುವುದೇ ಕೆಲಸ.
ವರುಷಕ್ಕೊಂದು ಹೊಸ ಅವತರಣ
ತರುತ್ತಿದ್ದಾರೆ ಇಬ್ಬರೂ.
ಬಿಲ್ ಗೇಟ್ಸನ ಈಜುಕೊಳ
ಹದಿನೆಂಟು ಮೀಟರ್ ಲಂಬ.
ಗಿಲ್ ಬೇಟ್ಸನ ಮಕ್ಕಳ ಮೀಟರ್
ಹದಿನೆಂಟಾಗಿದೆ ತುಂಬ.
ಮುಂದುವರಿದಿದೆ ಗೇಟ್ಸನ ಯೋಜನೆ
ಹೊಸಹೊಸ ಪಾತಳಿಯತ್ತ.
ಮುಂದುವರಿದಿದೆ ಬೇಟ್ಸನ ಕಾರ್ಖಾನೆ
ಗಿನ್ನಿಸ್ ದಾಖಲೆಯತ್ತ.
Comments
ಉ: ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್
In reply to ಉ: ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್ by asuhegde
ಉ: ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್
ಉ: ಬಿಲ್ ಗೇಟ್ಸ್ ಮತ್ತು ಗಿಲ್ ಬೇಟ್ಸ್