ಮಾತುಪಲ್ಲಟ - ೧೫

ಮಾತುಪಲ್ಲಟ - ೧೫

♫♫♫ಮಾತುಪಲ್ಲಟ - ೧೫♫♫♫

ಇದು ಮಾತುಪಲ್ಲಟ ಸರಣಿಯ ಹದಿನೈದನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ಹಿನ್ದಿ ಭಾಷೆಯ ಇನ್ನೊನ್ದು ಇನಿದಾದ ಹಾಡಿನ ಮಱುಗೆಯ್ಮೆ ಮಾಡಲಾಗಿದೆ.
[ಆಸುಹೆಗ್ಡೆಯವರ ಸಹಕಾರದೊನ್ದಿಗೆ]

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠

ಚಿತ್ರ : ಮೇರೇ ಅಪ್ನೇ♪
ಸಂಗೀತ : ಸಲಿಲ್ ಚೌಧುರಿ♪
ಮೂಲ ಸಾಹಿತ್ಯ : ಎಸ್. ಎಸ್. ಗುಲ್ಜಾರ್♪
ಹಾಡುಗಾರರು : ಕಿಶೋರ್ ಕುಮಾರ್♪
ವಿಡಿಯೋ : http://www.youtube.com/watch?v=DNZ8d0eBNJo

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
♪ಮೂಲ ಸಾಹಿತ್ಯ♪ :

ಕೋಯೀ ಹೋತಾ ಜಿಸ್ಕೋ ಅಪ್ನಾ, ಹಂ ಅಪನಾ ಕೆಹ್ ಲೇತೇ ಯಾರೋಂ |
ಪಾಸ್ ನಹೀಂ ತೋ ದೂರ್ ಹೀ ಹೋತಾ, ಲೇಕಿನ್ ಕೋಯೀ ಮೇರಾ ಅಪನಾ ||

ಆಂಖೋಂ ಮೇಂ ನೀನ್ದ್ ನಾ ಹೋತೀ, ಆಂಸೂ ಹೀ ತೈರ್‍ತೇ ರಹ್ತೇ|
ಖ್ವಾಬೋಂ ಮೇಂ ಜಾಗ್ತೇ ಹಂ ರಾತ್ ಭರ್ |
ಕೋಯೀ ತೋ ಗಂ ಅಪನಾತಾ, ಕೋಯೀ ತೋ ಸಾಥೀ ಹೋತಾ ||

ಭೂಲಾ ಹುವಾ ಕೋಯೀ ವಾದಾ, ಬೀತೀ ಹುಯೀ ಕುಛ್ ಯಾದೇಂ |
ತನಹಾಯೀ ದೊಹರಾತೀ ಹೈಂ ರಾತ್ ಭರ್ |
ಕೋಯೀ ದಿಲಾಸಾ ಹೋತಾ, ಕೋಯೀ ತೋ ಅಪನಾ ಹೋತಾ ||

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠
♪ಮಾತುಪಲ್ಲಟ♪ :

ನನ್ನವರೆಂಬವರ್ ಯಾರೋ ಒಬ್ಬರು, ಇದ್ದರೆ ಇರಲೆನ್ನುವ ಮೋಹ |
ಯಾರೇ ಆದರೂ ನನ್ನವರೆನ್ನಲು, ಇದ್ದರೂ ಇರದಿದ್ದರೂ ಸನಿಹ ||

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠

♪(ಆಸುಹೆಗ್ಡೆಯವರ ಕೊಡುಗೆ)♪ :

ನಾ ನನ್ನವರೆಂದು ಕರೆಯುವುದಕೆ  ಯಾರಾದರೂ ಇರಲೆಂಬಾಸೆ |
ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ ||
 
ಕಂಗಳಲ್ಲಿ ಈಗ ನಿದ್ದೆಯ ಸುಳಿವೇ ಇಲ್ಲ, ಕಣ್ಣೀರಿನದೇ ಈಜಾಟ |
ಕನಸುಗಳ ಲೋಕದಲ್ಲಿಯೇ ನನ್ನದೀಗ ರಾತ್ರಿಯೆಲ್ಲಾ ಅಲೆದಾಟ |
ನನ್ನ ನೋವುಗಳನ್ನೂ ತನ್ನದೆಂಬ ಒಡನಾಡಿ ನನಗಿರಲಿ ಎಂಬಾಸೆ ||
 
ನಾ ನನ್ನವರೆಂದು ಕರೆಯುವುದಕೆ  ಯಾರಾದರೂ ಇರಲೆಂಬಾಸೆ |
ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ ||
 
ಹಳೆಯ ದಿನಗಳ, ಮರೆತ ಮಾತುಗಳ ನೆನಪುಗಳದೇ ತೊಳಲಾಟ |
ಬೈಗು ಬೆಳಗಿನ ನಡುವೆ ನನಗೆ, ಪದೇ ಪದೇ ಏಕಾಂತದ ಕಾಟ |
ನೋವನು ಅರಿತು ಸಾಂತ್ವನ ನೀಡಲು ಜೊತೆಯೊಂದಿಲೆಂಬಾಸೆ ||
 
ನಾ ನನ್ನವರೆಂದು ಕರೆಯುವುದಕೆ  ಯಾರಾದರೂ ಇರಲೆಂಬಾಸೆ |
ಸನಿಹದಲ್ಲಿ ಅಲ್ಲದೇ ಇದ್ದರೂ ದೂರದಲ್ಲಾದರೂ ಇರಲಿ ಎಂಬಾಸೆ ||

♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠♠

Rating
No votes yet

Comments