ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ 'ಸ್ವರಲೀನ'

4

ಸ್ವರಾಧಿರಾಜ ಪಂಡಿತ ಭೀಮಸೇನ ಜೋಶಿ.

 

ಸ್ವರಾಧಿರಾಜ, ನಾದ ಭಾಸ್ಕರ, ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ ಇಂದು ಬೆಳಿಗ್ಗೆ ೮.೧೫ಕ್ಕೆ ಭೈರವಿ ರಾಗ ಹಾಡುವುದರೊಂದಿಗೆ ಬದುಕಿನ ಕಛೇರಿಗೆ ಇತಿಶ್ರೀ ಹಾಡಿದರು. ಪಂಡಿತ್ ಜೀ ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಡಯಾಬಿಟಿಸ್ ಸ್ವರ ಸಾಮ್ರಾಟ್ ನನ್ನು ಹಿಂಡಿ ಹಿಪ್ಪೆ ಮಾಡಿತ್ತು. ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಅವರು ವಿಧಿವಶರಾದರು.

 

ಉಸಿರಾಟದ ತೊಂದರೆ ಹಾಗೂ ಡಯಾಲಿಸಿಸ್ ಚಿಕಿತ್ಸೆಗಾಗಿ ಪುಣೆಯ ಖಾಸಗಿ ಆಸ್ಪತ್ರೆಗೆ ಅವರನ್ನು ಕಳೆದ ಒಂದು ವಾರದ ಹಿಂದೆ ದಾಖಲಿಸಲಾಗಿತ್ತು. ದಶಕಗಳಿಂದ ಅವರ ಆರೋಗ್ಯದ ಉಸ್ತುವಾರಿ ವಹಿಸಿ ನೋಡಿಕೊಳ್ಳುತ್ತಿರುವ ಡಾ. ಅತುಲ್ ಜೋಷಿ "ಪಂಡಿತ್ ಜೀ ಕೃತಕ ಉಸಿರಾಟದ ಮೇಲಿದ್ದಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಮಾಡುವ ಅಗತ್ಯವಿದೆ. ಅವರ ದೇಹಸ್ಥಿತಿ ಗಂಭೀರವಾಗಿದೆ. ಕಳೆದ ೧೨ ಗಂಟೆಗಳಿಂದ ಹದಗೆಟ್ಟಿರುವ ಅವರ ಆರೋಗ್ಯದ ಯಥಾ ಸ್ಥಿತಿ ಮುಂದುವರೆದಿದೆ. ಕಳೆದ ಡಿಸೆಂಬರ್ ೩೧, ೨೦೧೦ ರಿಂದ ಅವರು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಬಂದಿದ್ದಾರೆ" ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು.

 

ನಾಡಿನಾದ್ಯಂತ ಇರುವ ಪಂಡಿತ್ ಜೀ ಶಿಷ್ಯರು, ಅಭಿಮಾನಿಗಳು ಅವರ ಆರೋಗ್ಯದ ಸ್ಥಿತಿ ಬಗ್ಗೆ ತೀವ್ರ ಕಳವಳಗೊಂಡಿದ್ದರು. ಧಾರವಾಡ- ಕುಂದಗೋಳ, ಗದಗ-ಹೊಂಬಳದ ಜನತೆ ಇನ್ನಿಲ್ಲದ ದುಗುಡದಲ್ಲಿದ್ದರು. ಆತಂಕದಲ್ಲಿಯೇ ನಾವು ಧಾರವಾಡ ಉತ್ಸವ ೨೦೧೦-೧೧ಕ್ಕೆ ನಾವು ನಾಂದಿ ಹಾಡಿದ್ದೆವು. ಸಾಸ್ಕೃತಿಕ ರಾಯಭಾರಿ ನಮ್ಮ ಕೈಬಿಡುವುದಿಲ್ಲ, ಸ್ವರಾಧೀಶ ಈಶ್ವರ ಅವರ ಶಿಷ್ಯರ, ಅಭಿಮಾನಿಗಳ ಕೋರಿಕೆ ಈಡೇರಿಸುತ್ತಾನೆ ಎಂದೇ ನಂಬಿದ್ದೆವು. ಆದರೆ ಹಾಗಾಗಲಿಲ್ಲ.

 

ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ ಅವರು, ಕರ್ನಾಟಕದ ಯಾವುದೇ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಜರುಗಲಿ, ರಾಜ್ಯ ಸರಕಾರ ಎಲ್ಲ ಅಗತ್ಯ ವ್ಯವಸ್ಥೆಯನ್ನು ಕೈಗೊಂಡು ಸಕಲ ಸರಕಾರಿ ಗೌರವ ಮರ್ಯಾದೆಗಳೊಂದಿಗೆ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಲಿದೆ ಎಂದಿದ್ದಾರೆ. ಧಾರವಾಡ, ಗದುಗಿನ ಹೊಂಬಳ, ಕುಂದಗೋಳ ಅವರಿಗಾಗಿ ಕಾಯ್ದಿವೆ. ಅವರ ಪಾರ್ಥಿವ ಶರೀರವನ್ನು ತನ್ನ ಒಡಲಿಗೆ ಹಾಕಿಕೊಳ್ಳುವ ಪುಣ್ಯ ಅದಾವ ಮಣ್ಣಿಗೆ ಕಾಯ್ದಿದೆಯೋ ಅವರ ಸಂಬಂಧಿಕರು ನಿರ್ಧರಿಸಲಿದ್ದಾರೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಜೋಶಿಯವರು, ೧೯೨೨, ರ, ಫೆ. ೪ ರಂದು ಗದಗ ಜಿಲ್ಲೆಯ ರೋಣದಲ್ಲಿ ಜನಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂಸ್ತಾನಿ ಗಾಯನದಲ್ಲಿ ಅವರ ಸಧನೆಗಳು ಮುಗಿಲೆತ್ತರ. ಮೃತರಿಗೆ ಎರಡು ಕುಟುಂಬಗಳಿಂದ ಒಟ್ಟು ೭ ಜನ ಮಕ್ಕಳಿದ್ದಾರೆ. ಜೋಶಿಯವರ ಅಂತ್ಯಕ್ರಿಯೆಯನ್ನು ಪುಣೆಯಲ್ಲಿ ನೆರವೇರಿಸಲಾಗುವುದು ಎಂದು ಅವರ ಪುತ್ರಿ, ಉಷಾ ಹೇಳಿದರು. ಸರಿಯಾದ ಗುರುವನ್ನರಸಿಕೊಂಡು ದೇಶದಾದ್ಯಂತ ಅಲೆದರು. ಮಗನ ಸ್ವಭಾವ ಅವರ ತಂದೆಯವರಿಗೆ ವಿಪರೀತವಾಗಿತ್ತು. ಹಿರಿಯ ಮಗ ಆಫೀಸರ್ ಆಗಲಿ ಎಂಬುವುದ ಅವರ ಆಶೆ. ಸಂಗೀಕ್ಕೆ ಮಾತ್ರ ಹೋಗದಿರಲಿ ಎಂದು ಅವರು ಮಾಡಿದ ಹರಸಾಹಸಗಳೆಲ್ಲಾ ವಿಫಲವಾದವು. ಸಣ್ಣ ವಯಸ್ಸಿನಲ್ಲಿಯೇ ಸಂಗೀತ ಕಲಿಯಲೆಂದುಜೋಶಿಯವರು ನಂತರ ಧಾರವಾಡ ಜಿಲ್ಲೆಗೆ ಹಿಂದಿರುಗಿ ಕುಂದಗೋಳದ ಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರ ಶಿಷ್ಯರಾದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ ಕಿರಾಣಾ ಘರಾನಾದಲ್ಲಿ ಪರಿಣತರಾದ ಭೀಮಸೇನ ಜೋಷಿಯವರು ಕಳೆದ ಆರು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬಂದಿದ್ದರು. ಭಾಗ್ಯದ ಲಕ್ಷ್ಮಿ ಬಾರಮ್ಮ ಭೀಮಸೇನ ಜೋಶಿಯವರ ಅತ್ಯಂತ ಹೆಸರುವಾಸಿಯಾದ ಕೀರ್ತನೆ. ಸಂಗೀತವನ್ನು ಆರಾಧಿಸುತ್ತಾ ಬಂದ ಜೋಶಿಯವರಿಗೆ ಹಿಂದೂಸ್ತಾನಿ ಸಂಗೀತದ ಖಯಾಲ್ ಕೃತಿಗಳ ಹಾಡುಗಾರಿಕೆಗೆ ಪ್ರಸಿದ್ಧರಾದವರು. ಹಾಗೆಯೇ ಕನ್ನಡದಲ್ಲಿ ಭೀಮಸೇನ್ ಜೋಶಿಯವರ ಮುಖ್ಯ ಆಲ್ಬಮ್ ಗಳೆಂದರೆ, ದಾಸವಾಣಿ ಮತ್ತು ಎನ್ನ ಪಾಲಿಸೊ. ಹಿಂದಿ ಭಜನೆಗಳು, ಮರಾಠಿ ಅಭಂಗ ಮತ್ತು ನಾಟ್ಯಗೀತೆಗಳನ್ನು ಸಹ ಬಹಳಷ್ಟು ಹಾಡಿದ್ದಾರೆ. ಪಂಢರೀಚ ರಾಜ ಎಂಬ ಮರಾಠಿ ಗೀತೆ ಮಹಾರಾಷ್ಟ್ರದಲ್ಲಿ ಬಹು ಜನಪ್ರಿಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೊದಲ ಬಾರಿಗೆ ಜೋಶಿಯವರ ಭಾವ ಗೀತೆ ಕೇಳಿ ಆದ ಆನಂದ ಅಷ್ಟಿಷ್ಟಲ್ಲ. "ಉತ್ತರ ಧ್ರುವದಿಂ..." ಎಂಬ ಅದ್ಭುತ ಭಾವ ಗೀತೆಗಳ ಗುಚ್ಚಕ್ಕೆ ಜೋಶಿಯವರೂ ಸೇರಿದಂತೆ ಹುಕ್ಕೇರಿ ಬಾಳಪ್ಪರೂ ದನಿಯಾಗಿದ್ದಾರೆ. ಜೋಶಿಯವರ ಅದ್ಭುತ ಗೀತ ರಸಾನಂದವನ್ನ ನಮ್ಮ ಭಾಷೆಯಲ್ಲಿ ಸವಿಯಲು ಈನ್ನೂ ಚೆಂದ. ಗಾನ ಗಂಧರ್ವನ ಆತ್ಮಕ್ಕೆ ಶಾಂತಿ ಸಿಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

"ನಂಬಿದೆ ನಿನ್ನ ನಾದ ದೇವತೆ.."ಹಾಡಿದ ನಾದ ದೇವತೆ ಇನ್ನಿಲ್ಲ.(ಕೃತಕ ಉಸಿರಾಟ+ಡಯಲಿಸಿಸ್‌ನ ಒದ್ದಾಟದಿಂದ ಬಿಡುವು ಸಿಕ್ಕಿತು.) ನಾವು ಚಿಕ್ಕವರಿದ್ದಾಗ "ಸಂಧ್ಯಾರಾಗ"ಸಿನೆಮಾದ ಈ ಹಾಡನ್ನು "ಗಡಸು" ಧ್ವನಿಯಲ್ಲಿ ಹಾಡಲು ಪ್ರಯತ್ನಿಸುತ್ತಿದ್ದೆವು. ಈ ಕಾಲದ ಹೆಚ್ಚಿನವರಿಗೆ ಸಂಧ್ಯಾರಾಗದ ಈ ಹಾಡಿನ ಬಗ್ಗೆ ಗೊತ್ತಿರಲಿಕ್ಕಿಲ್ಲ. ಜಾನಕಿ, ಬಾಲಮುರಳಿಕೃಷ್ಣ ಹಾಗೂ ಜೋಶಿಯವರ ಕಂಠದಲ್ಲಿ ಹಾಡಲಾಗಿದೆ. ಹಾಡು ಕೇಳದವರು ೩ನ್ನೂ ಕೇಳಿ ನೋಡಿ- http://www.youtube.c... (ಜಾನಕಿಯವರ ಕಂಠದಲ್ಲಿ) http://www.youtube.c... (ಬಾಲಮುರಳಿಯವರ ಕಂಠದಲ್ಲಿ) http://www.youtube.c... ( ಜೋಶಿಯವರ ಕಂಠದಲ್ಲಿ) ಶಾಸ್ತ್ರೀಯ ಸಂಗೀತ ಕಚೇರಿ ಎಂದರೆ ಹೋಗಿ ಕಣ್ಣುಮುಚ್ಚಿ ಕುಳಿತು ಆಸ್ವಾದಿಸುವುದು. ಆದರೆ ಭೀಮಸೇನ್ ಜೋಶಿಯವರ ಕಚೇರಿ ಅಂದರೆ ಡ್ಯಾನ್ಸ್ ಮತ್ತು ಸಂಗೀತ ಎರಡೂ- ಮುಖದ ಭಾವನೆಗಳು, ರಾಗವನ್ನು ಮೇಲಿಂದ ಕೈಯಲ್ಲಿ ಎಳೆದು ಎಳೆದು ತಬ್ಲೆಯವರ ಬಳಿ, ತಬ್ಲೆಯವರ ಬಳಿಯಿಂದ ಎಳೆದು ಮಿಕ್ಸ್ ಮಾಡಿ ಹಾರ್ಮೋನಿಯಂಗೆ..ಹೀಗೆ ನೋಡುತ್ತಾ, ಕೇಳುತ್ತಾ ಟೈಮು ಕಳೆದುದೇ ಗೊತ್ತಾಗುವುದಿಲ್ಲ. ಮೊದಲು ಸಂಗೀತಕ್ಕಾಗಿ ಕಷ್ಟ ಪಟ್ಟರು. ಕೊನೆಗಾಲದಲ್ಲಿ ಹದಗೆಟ್ಟ ಆರೋಗ್ಯದಿಂದಾಗಿ ಕಷ್ಟ ಪಡುವಂತಾಯಿತಲ್ಲಾ.. ಇದೇ ಬೇಸರ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.