ಪ್ರೇಮ ಪರ್ವ
ಪ್ರೇಮ ಪರ್ವ
ಒಂದೇ ಒಂದು ತಿಂಗಳಾದರೂ ಸುಂದರವಾಗಿತ್ತು
ಸುಂದರಿಯವಳ ಕೆಂದುಟಿಗಳಲಿ ಮಂದಹಾಸವಿತ್ತು ||
ಅದು ಬಲು ಸುಂದರವಾಗಿತ್ತು ||
ಪಗಡೆಯಲವಳ ಸೋಲಿಸಲಾಗದೆ ದಣಿದಿಹ ದಿನವಿತ್ತು
ಸೊಗಸಿನಳವಳ ಮೀರಿಸಲಾಗದೆ ಮನ ಮರುಳಾಗಿತ್ತು
ನಗುವಿನ ಪ್ರಶ್ನೆಗೆ ನಗುವಿನ ಉತ್ತರ ಅನುದಿನ ಸಾಗಿತ್ತು
ನಗುವಿನ ಮರೆಯಲಿ ದುಗುಡಗಳಿದ್ದರು ಪ್ರೇಮವು ಬೆಸೆದಿತ್ತು
ಸುಂದರ ಪ್ರೇಮವು ಬೆಸೆದಿತ್ತು ||
ಗೆಲುವಿನ ಹಂಬಲ ಬದುಕಿನ ಕಾತರ ಇಬ್ಬರಲು ಇತ್ತು
ಒಲವಿನ ಉಡುಗೊರೆಗಂದೇ ಒಲವಲಿ ಉತ್ತರ ಮೂಡಿತ್ತು
ಬೆಳೆದನುರಾಗವು ದಿನವಿರುಳೆನ್ನದೆ ಮನದಲಿ ತುಂಬಿತ್ತು
ಮಳೆಗಾಲದ ಮಲೆನಾಡಿನ ಜೀವನ ನೆಮ್ಮದಿ ನೀಡಿತ್ತು
ಸುಂದರ ಬದುಕನು ಬಯಸಿತ್ತು ||
ಕವಿಯೆದೆ ತಟ್ಟಿದ ಸುಂದರಿಯಿಂದ ಪ್ರೇರಣೆ ದೊರೆತಿತ್ತು
ನವರಸವಿಲ್ಲದೆ ಶೃಂಗಾರದಲೇ ಪದಗಳು ಮೂಡಿತ್ತು
ಯುವತಿಯ ಮೊಗದಲಿ ಆಶಾಕಿರಣವು ಹೊರಹೊಮ್ಮುತಲಿತ್ತು
ನವ ಸಂದೇಶವ ಪ್ರೇಮದ ಲೋಕಕೆ ನೀಡುವ ತೆರನಿತ್ತು
ಸುಂದರ ಕವಿತೆಯದಾಗಿತ್ತು ||
- ಸದಾನಂದ
Comments
ಉ: ಪ್ರೇಮ ಪರ್ವ
In reply to ಉ: ಪ್ರೇಮ ಪರ್ವ by raghumuliya
ಉ: ಪ್ರೇಮ ಪರ್ವ
In reply to ಉ: ಪ್ರೇಮ ಪರ್ವ by sada samartha
ಉ: ಪ್ರೇಮ ಪರ್ವ
In reply to ಉ: ಪ್ರೇಮ ಪರ್ವ by raghumuliya
ಉ: ಪ್ರೇಮ ಪರ್ವ
ಉ: ಪ್ರೇಮ ಪರ್ವ
In reply to ಉ: ಪ್ರೇಮ ಪರ್ವ by nagarathnavina…
ಉ: ಪ್ರೇಮ ಪರ್ವ
ಉ: ಪ್ರೇಮ ಪರ್ವ
In reply to ಉ: ಪ್ರೇಮ ಪರ್ವ by ananthaveera
ಉ: ಪ್ರೇಮ ಪರ್ವ
ಉ: ಪ್ರೇಮ ಪರ್ವ
In reply to ಉ: ಪ್ರೇಮ ಪರ್ವ by MADVESH K.S
ಉ: ಪ್ರೇಮ ಪರ್ವ