ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.

ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.

ಇಂದಿನ  ಕುಮಾರ ವ್ಯಾಸ ಭಾರತದ ಮೂರನೆಯ ಹಾಗೂ ಕೊನೆಯ ಕಂತಿನ "೯ ನೆಯ ಅಭ್ಯಾಸ " ಸಂಪದಿಗರೇ ಆದ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿಯಾಗಿತ್ತು. ತಾಯಿ ಅಜ್ಜಿ ಹಾಗೂ ಮಗಳು ಪಾವನಿ ನಾಲ್ಕು ತಲೆಮಾರು ನೋಡುವ ಭಾಗ್ಯ ನಮ್ಮದಾಗಿತ್ತು ಈ ಸಾರಿ  ಎಂದಿನಂತೆ ಬೆಳಗಿನ ಭೂರಿ ಉಪಹಾರದ ಜತೆಯಲ್ಲಿ.
 

ಈ ಸಾರಿ ಪ್ರಭು ಮೂರ್ತಿಯವರೂ ನನ್ನ ಜತೆ ಬರ್ತೇನೆ ಎಂದಿದ್ದರು . ಸಮಯದ ಪಕ್ಕಾ ಪರಿಪಾಲಕ ಸರಿಯಾಗಿ ಏಳೂಮುಕ್ಕಾಲಿಗೇ ಹಾಜರ್. ನನ್ನ ಕೆಂಪಿ ( ಬಜಾಜ್ ದ್ವಿ ಚಕ್ರಿ) ಯಾಕೋ ತುಂಬಾ ಸಮಯದ ನಂತರ ಅವಳನ್ನು ಆರಿಸಿಕೊಂಡದ್ದಕ್ಕೋ ಏನೋ ಶುರುವಾಗಲು ಸುಮಾರು ಹತ್ತು ಹದಿನೈದು ನಿಮಿಷ ಮೊಂಡಾಟ ತೋರಿದಳು.ಆದರೂ ನಾವು ಪ್ರಸನ್ನರ ಮನೆಗೆ ೯ ಕ್ಕೆ ತಲುಪಿದಾಗ ಅಥಿತಿಗಳು ಬರಲಾರಂಬಿಸಿರಲಿಲ್ಲ..

ನಂತರ ಕುಮಾರ ವ್ಯಾಸ ನ ಕರ್ನಾಟ ಭಾರತ ಕಥಾ ಮಂಜರಿಯಲ್ಲಿ ಗುರುಗಳು ಆರಿಸಿಕೊಂಡದ್ದು ಅರ್ಜುನ ನ ಅಮರಾವತಿಯ ದರ್ಶನ ಹಾಗೂ ಭಾರತ - ಅರ್ಜುನ  ಮತ್ತು ಅನಿಮಿಶ  ನಗರಿಯವಳಾದ ಊರ್ವಶಿಯ ನಡುವಿನ ಕಥೆ.




ಭಾರತದ ನೆಲದ ಭೂಮಿಯ ಬಲವತ್ತರವು ದೇಹ ವಿಶೇಷ ವಿಧಿಯುಳ್ಳ ಗಂಡಿಗೆ ಆಕೆ ತನ್ನ ವಂಶದ ಮೂಲ ತಾಯಿಯಾಗಿ ಕಂಡರೆ ಊರ್ವಶಿಗೆ ಆತ ನೊಬ್ಬ ಗಂಡೆದೆಯ ಗುಣಶೀಲ ರಾಜನಾಗಿ ಕಂಡು ಬಂದಿದ್ದ. ಕುಮಾರವ್ಯಾಸ ಈ ಅತ್ಯಂತ ಕ್ಲಿಷ್ಟ ಸನ್ನಿವೇಷವನ್ನು ಅಷ್ಟೇ ಸುಂದರತೆಯಿಂದ ನವಿರಾಗಿ ಸಹಿತಸ್ಯ ಭಾವಪೂರ್ಣವಾಗಿ ಹೊರಗೆಡಹಿದ್ದಾನೆ.
ಗುರುಗಳು ಈ ಮೇಲಿನ ಪ್ರಸಂಗವನ್ನು ವಿವರಿಸುತ್ತಾ ಸಮಕಾಲೀನ ಸಂಧರ್ಭಕ್ಕೆ ಹೇಗೆ ಪ್ರಸಕ್ತ ಪ್ರಸಂಗವು ಹೊಂದಿಕೊಳ್ಳುತ್ತದೆ ಎಂದು ಅಷ್ಟೇ ಔಚಿತ್ಯಪೂರ್ಣವಾಗಿ ವಿವರಿಸಿದ್ದಾರೆ ಎಂಬುದನ್ನು ನಾನು ಹೇಳುವುದಕ್ಕಿಂತ ನೀವೇ ಮನಸಾರೆ ಆ ಸವಿಯುಣ್ಣುವುದುತ್ತವು.

 

 

 


1.        1.  http://www.youtube.com/watch?v=XEKkIXN0qeo

2.       2.  http://www.youtube.com/watch?v=9xejub9_DWc

3.       3.  http://www.youtube.com/watch?v=QW8O-cP_674

4.       4.  http://www.youtube.com/watch?v=ucbOhOmU0U0

5.      5.   http://www.youtube.com/watch?v=FHVhyYz5KzE

6.       6.  http://www.youtube.com/watch?v=uaGOh8bmJh8

7.       7.  http://www.youtube.com/watch?v=F9WyF7Um9wA

8.      8.   http://www.youtube.com/watch?v=fX_3Ht6lOZE

9.       9.  http://www.youtube.com/watch?v=aHKvOENn_k4

10.   10.  http://www.youtube.com/watch?v=mK27Ouq32Mw

11.   11.  http://www.youtube.com/watch?v=gTWpARKEZ2I

12.   12.  http://www.youtube.com/watch?v=F09UUTEmaMw

 

 

Comments