ಕೊನೆಯ ಬೇಡಿಕೆ
ಕವನ
ಓ ತಾಯೆ,ಕನ್ನಡಾಂಬೆ,
ಬೆಳ್ಳಿ ಜರಿಯಂಚಿನ ದಿವ್ಯ ವಸ್ತ್ರಾನ್ವಿತೆಯೇ,
ನೀನು ಕಣ್ಣೋಡಿಸಿ ನೋಡದ
ನಿರ್ಭಾಗ್ಯ ಮಕ್ಕಳು ನಾವು,
ಕಾಸರಗೋಡಿನವರು.
ಮೊದಲು ಮಹಾಬಲಶಾಲಿಗಳಾಗಿದ್ದೆವು,
ಉತ್ಸಾಹ ಉಲ್ಲಾಸಗಳ ಪ್ರತೀಕವಾಗಿದ್ದೆವು,
ಈಗ ನಿನಗಾಗಿ ಕುಣಿದೂ,ದಣಿದೂ
ಕುಬ್ಜರಾಗಿದ್ದೇವೆ-
ನಿನ್ನೆದುರು ಮಾತ್ರವಲ್ಲ ತಾಯೀ-
ಎಲ್ಲರೆದುರೂ!
ನಿನ್ನಲ್ಲಿ ಕೊನೆಯ ಪ್ರಾರ್ಥನೆ ತಾಯೆ,
ನಿನಗೆ ಬೇಡದ ಮಕ್ಕಳನ್ನು
ಮಲಯಾಳ ಮಾತೆಗೆ ಮಾರಿ
ಸ್ವರ್ಣದಾಭರಣಗಳ ಕೊಂಡು ತೊಡು,
ನಿನ್ನ ದಿವ್ಯಮೂರ್ತಿಯನ್ನೊಮ್ಮೆ
ನೋಡಿ,ಆನಂದಿಸಿ
ಕಣ್ಮುಚ್ಚಿ ಕೃತಾರ್ಥರಾಗುತ್ತೇವೆ ನಾವು.
Comments
ಉ: ಕೊನೆಯ ಬೇಡಿಕೆ
In reply to ಉ: ಕೊನೆಯ ಬೇಡಿಕೆ by kpbolumbu
ಉ: ಕೊನೆಯ ಬೇಡಿಕೆ
ಉ: ಕೊನೆಯ ಬೇಡಿಕೆ
ಉ: ಕೊನೆಯ ಬೇಡಿಕೆ