ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಬಾನಂಚಲಿ ಸೂರ್ಯನ
ಹೆಣ ತೇಲುವಾಗ
ಚಂದ್ರನ ತೊಟ್ಟಿಲು
ತೂಗುತ್ತಿತ್ತು.
************
ನಿನ್ನ ಮರೆತು
ಮಾಡುವುದೇನಿದೆ?
ಒಂಟಿತನದ ಯಾತನೆ
ನೀಗಲು ನೀನು ಕೊಟ್ಟ
ನೋವುಗಳಾದರೂ ಇರಲಿ.
****************
ನೀ ಕಟ್ಟಿಕೊಟ್ಟ
ನೆನಪಿನ ಬುತ್ತಿಯೊಂದೆ
ಸಾಕು ಜೀವನದ
ಪಯಣ ಮುಗಿಸಲು.
****************
ಬಾನಲಿ ಹಾರುವ
ಹಕ್ಕಿಗೆ ಗೊತ್ತಿತ್ತೆ?
ತಾ ಬೀಳಿಸಿದ ಬೀಜ
ಸೂಜಿಗಲ್ಲ ಪೊಟರೆಯೊಳಗೆ
ಶ್ವಾಸ ಪಡೆದು
ಹೆಮ್ಮರವಾಗುವುದೆಂದು?
*****************
ನೋವುಗಳಿಗೇನೂ ದುಃಖವಿಲ್ಲ
ಕಳೆದುಕೊಂಡ ಸುಖಗಳಿಗೆ ಬೇಸರವಿದೆ.
******************
ಕ್ಷಣಿಕ ಕಾಮನಬಿಲ್ಲು
ಕವಿಯ ಕೇಳಿತ್ತು
" ನಾನು ಹೀಗೆ ಶಾಶ್ವತವಾಗಿರಲೇ?'
ಕವಿ ಉತ್ತರಿಸಿದ:
" ಕವಿತೆಯಾಗಿ ನೀನು ನನ್ನ
ಎದೆಯ ಹಾಳೆಯಲ್ಲಿ
ಸದಾ ಬಂಧಿ".
**************
ಜೀವನವೇ ಇಷ್ಟೊಂದು ಕಾಡದಿರು
ಸಾವು ಕೂಡ ಮುನಿಸಿಕೊಂಡೀತು.
****************
ಪ್ರೀತಿ ಕುಲುಮೆಯಲಿ
ಬೆಂದ ಮೇಲೂ ಸುತ್ತಿಗೆಯೇಟು!
**************
ಬದುಕು ನುಡಿಸುವ
ಎಲ್ಲ ರಾಗಗಳನ್ನು
ಕೇಳಬೇಕೆಂದುಕೊಂಡವನಿಗೆ
ನನ್ನ- ನಿನ್ನೆದೆಯ
ಪಿಸುಮಾತೇ ಕೇಳಲಿಲ್ಲ!
*****************
ಬಿಸಿಲ ಬೆತ್ತೆಲೆಗೆ
ನೆರಳ ಬಟ್ಟೆ
ತೊಡಿಸುವವರಾರೂ ಇಲ್ಲ.
****************
ಯಾರ ಹಾದಿ
ಯಾರು ಕಾಯುವರು?
ಹೇಳುವುದು ಕಷ್ಟ.
ಸತ್ತವರಿಗೂ ನೆಮ್ಮದಿಯಿಲ್ಲ
ಹಾಳು ಬದುಕೆಂದರೆ
ಸಾವಿಗೂ ಇಷ್ಟ!
************
ಯಾರು ಯಾರೋ
ಬಿಡಿಸಿಟ್ಟ ಚಿತ್ತಾರ
ಎದೆಯ ಪರದೆಯ ಮೇಲೆ
ಬರಿ ನೋವುಗಳ ಸತ್ಕಾರ
*****************
ಅನಾಥ
ಕಣ್ಣುಗಳಲಿನ
ಯಾಚನೆ
ಬದುಕಿನ
ತಿರುಳಿಗೊಂದು
ಸೂಚನೆ.
************
ಸಾವಿನೊಳಗೆ
ನೆಟ್ಟ ಸಸಿಯೊಂದು
ಮತ್ತೆ ಚಿಗುರಬಲ್ಲುದೆ?
***********
ಹಾಳೂರ ಎದೆಯಲ್ಲಿ
ಮಾತುಗಳಿಗೂ ಬರ
ಅರ್ಥಕ್ಕೆ ನಿಲುಕದ
ಪದಗಳಿಗೂ ಬಡಿದಿದೆ ಗರ.
Rating
Comments
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by kamath_kumble
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by manju787
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by ravi kumbar
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by ravi kumbar
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by manju787
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by ksraghavendranavada
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by partha1059
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by gopinatha
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by vani shetty
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by nagarathnavina…
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by gopaljsr
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by prasannakulkarni
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by raghumuliya
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.
In reply to ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು. by kamala belagur
ಉ: ಎದೆಯಲ್ಲೇ ಉಳಿದಿದ್ದ ಕೆಲ ಹನಿಗಳು.