ಪ್ರೀತಿಯ ನಾ ನಿರೀಕ್ಷಿಸುವೆ

ಪ್ರೀತಿಯ ನಾ ನಿರೀಕ್ಷಿಸುವೆ

ಕವನ

ಕನಸುಗಳ ಕೋಟೆಗಳ ಕಟ್ಟಿ ಕಟ್ಟಿ ಸೋತು ನಾ ನಿಂತಿದ್ದೆ..


ಎಲ್ಲಿಂದಲೋ ನೀ ಬಂದು ಮತ್ತೆ ಆಸೆಗಳ ಚಿಗುರಿಸಿದೆ..


 


ಖಾಲಿಯಾಗಿದ್ದ ಮನದರಮನೆಯ ತುಂಬಲು ನೀ ಬಂದೆ..


ನಿನಗಾಗಿಯೇ ಬರೆದಿಟ್ಟಿದ್ದ ಪಟ್ಟವ ಭಗವಂತ..


 


ಬರಿದಾಗಿದ್ದ ಬಾಳಿನೊಳು ನೀ ಬಂದೆ ಹೊಸ ಅಲೆಯಾಗಿ


ನಿನ್ನಂದವ ನಾ ಕಂಡು ಕ್ಷಣ ಕಾಲ ಮರುಳಾದೆ...


 


ನೀ ನೀಡುವ ಪ್ರೀತಿಯ ಕಂಡು ನಾ ಮೂಕವಿಸ್ಮಿತನಾದೆ..


ನೂರ್ಕಾಲ ಪ್ರೀತಿಯ ನಾ ನಿರೀಕ್ಷಿಸುವೆ

Comments