ನೀನಿಲ್ಲದೆ.....ನಾವಿಲ್ಲ!!!

ನೀನಿಲ್ಲದೆ.....ನಾವಿಲ್ಲ!!!

 

 

 

 

 

 

 

 

 

 

 

 

 

 

 

 

 

 

 

ನೀನಿಲ್ಲದೆ.....ನಾವಿಲ್ಲ!!!

ನೀನಿಲ್ಲದೇ ನಾವಿಲ್ಲವೋ     /      ನಂದಿಲ್ಲವೋ ಎಲ್ಲಾ ನಿಂದೆಲ್ಲವೋ
ನೀನಿಲ್ಲದೇ ಈ ಬದುಕಿಲ್ಲವೋ /   ನಿನ್ನಿಂದಲೇ ನಮ್ಮ ಬದುಕೆಲ್ಲವೋ        //
 

 


ಸಖನಾದೆ ಹಿತವಾದೆ /  ಹಿತೈಷಿಯೂ ಆದೆ
ಗುರುವಾಗಿ ಪಿತನಂತೆ / ಮಾರ್ಗದರ್ಶಕನಾದೆ
ಬಾಳಾಂಧಕಾರದಲ್ಲೂ  / ಬೆಳಕಂತೆ ನೀನಿಂತು  /  ಬದುಕೆಲ್ಲವನ್ನೂ ನೀ ಉದ್ಧರಿಸುವೇ  /

ಹುರುಳಿಲ್ಲವೋ ಬದುಕು ಬದುಕಲ್ಲವೋ  
ನೀ ನಿಲ್ಲದಾ ಇಹದ ಬದುಕೆಲ್ಲಿಯೋ     //  ನೀನಿಲ್ಲದೇ ನಾವಿಲ್ಲವೋ //

 

 


ರವಿಯಲ್ಲಿ ಬೆಳಕಾಗಿ / ಶಶಿಯಲ್ಲಿ ತಂಪಾಗಿ
 ಒಲವಿನೊಳಲಾಗಿ/ ಇಹದಲ್ಲಿ ಇರವಾಗಿ
 ಎಲ್ಲರೊಳಗೊಂದಾಗಿ /ಪ್ರಕೃತಿಯ ಉಸಿರಾಗಿ

ಬೆಲೆಯಿಲ್ಲವೊ ಮತ್ತೆ ಬೆಳಕಿಲ್ಲವೋ
ನಿನ್ನ ನೆನೆಯದ ಬದುಕೇ ಬದುಕಲ್ಲವೋ //  ನೀನಿಲ್ಲದೇ ನಾನಿಲ್ಲವೋ  //
 

 


ನಿನ್ನ ನೆನಪಿಲ್ಲದೆ ಈ ಇರವಿಲ್ಲವೋ
ಇರವಿಲ್ಲದಾ ಇಹವು ಇಹವಲ್ಲವೋ    
ಇಹವೆಲ್ಲ ಇರವೆಲ್ಲ ನಿನ್ನದೇ ಪರವೆಲ್ಲ /  ಮುನಿಸಿನಾ ಈ ಪರಿಯು ತರವಲ್ಲವೋ /

ತರವಲ್ಲವೋ ಮುನಿಸು ತರವಲ್ಲವೋ
ಇಳೆಯ ಬಾಳಿಗೆ ಪ್ರಳಯ ಗೋಳೆಲ್ಲವೋ  //  ನೀನಿಲ್ಲದೇ ನಾವಿಲ್ಲವೋ   //

 

Rating
No votes yet

Comments