ಮತ್ತಷ್ಟು ಹನಿಗಳು

5

 ಹರಿದು ಹೋದ ಚಿಂದಿ ಬಟ್ಟೆಗಳಂತೆ

ಉಳಿದಿರುವ ಕಹಿ ನೆನಪುಗಳ

ಹೊರ ಚೆಲ್ಲಿ ಮತ್ತೆ ಮರಳಬೇಕಿದೆ

ಒಂದೊಮ್ಮೆ ಗೆಲುವಾಗಿದ್ದ ಮನಸ್ಸಿನೆಡೆಗೆ.

*******************************

ಪ್ರತಿದಿನವೂ ಹೀಗೆ

ಕನಸುಗಳು ಆತ್ಮಹತ್ಯೆ

ಮಾಡಿಕೊಳ್ಳುತ್ತವೆ ಮನದ

ಆಳ ಬಾವಿಯಲಿ

ಶವ ತೆಗೆಯುವ ಕೆಲಸ

ನನ್ನ ಕರ್ಮ.

******************************

ಗೋಜಲಾದ ಸಿಕ್ಕುಗಳ

ಪೊರಕೆಯಿಂದ ಗುಡಿಸಿ

ಬದುಕಿನ ಮರ್ಮ ಅರಿವುದೆಂತು?

ಮಾತುಗಳ ಗಾಳಿ ಗೋಪುರದಲ್ಲಿ

ಮೌನದ ಪ್ರೀತಿ ವಾತ್ಸಲ್ಯ ತೋರುವುದೆಂತು?

******************************

ಮನಸ್ಸಿಗೆ ಕವಲುಗಳಿರುವಂತೆ

ಆತ್ಮಕ್ಕೂ ಕವಲುಗಳಿರುತ್ತವಾ?

*********************************

ನೀನು ನನ್ನಿಂದ ದೂರವಾಗಿರಬಹುದು

ಆದರೆ ಆತ್ಮ ತೃಪ್ತಿಗೆ ಬರೆದುಕೊಂಡ

ಕವಿತೆಯಾಗಿ ಸದಾ ನನ್ನೊಡನೆ ಇರುವೆ.

*******************************

ನಿನ್ನ ಮರೆತರೂ

ಫಲವಿಲ್ಲ

ರಾತ್ರಿಯ ಕನವರಿಕೆಗಳಲ್ಲಿ

ನೀನು

ಮತ್ತೆ ಪ್ರತ್ಯಕ್ಷ!

************************

ಗೆಳತಿ,

ಮುಂದಿನ ಜನ್ಮವೊಂದಿದ್ದರೆ

ನಾನು ಗೆದ್ದಲಾಗುವೆ

ನೀನು ಹಾವಾಗಿ

ಹಗಲಿರುಳೂ ದುಡಿದು

ಕಟ್ಟಿದ  ನನ್ನ ಅರಮನೆಯಲ್ಲಿ

ಬಲವಂತವಾಗಿಯಾದರೂ ಬಂದು

ನೆಲಸು.

*************************

ಆತ್ಮ ಬೆತ್ತಲಾದರೂ

ಯಾರೂ ಆಗಿಲ್ಲ ಆಪ್ತ

ಭಯದ ಕತ್ತಲಲ್ಲಿ

ನಾನು ಮಾತ್ರ ಪರಿತ್ಯಕ್ತ.

******************************

ಪರಿಚಯವಿಲ್ಲದ

ಹಾದಿಗಳಲ್ಲಿ

ಎಡವಿದಲ್ಲೆಲ್ಲಾ

ಕಲ್ಲು ಮುಳ್ಳುಗಳು.

*******************************

ಕಣ್ಣೀರಿಗೆ ಕರಗದ

ಕಲ್ಲು ಹೃದಯಿ ನಾನಲ್ಲ

ನೋವಿಗೆ ಮಿಡಿಯದ

ನಿರ್ಭಾವುಕನಲ್ಲ

ಭಾವ ವೃತ್ತಿಗಳನ್ನು

ತಡೆಯಬಲ್ಲ ಯೋಗಿಯೂ ಅಲ್ಲ

ನೀನಂದಂತೆ ನಾನು

ಬಂಡೆಗಲ್ಲೇ ಇರಬಹುದು

ಆದರೆ ಪ್ರೀತಿ ನದಿ

ಮೂಡಿಸಿದ ಕಲೆಗಳೆಂದೂ

ಮಾಸಿಲ್ಲ/ ಮಾಸೋಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಲ್ಲವೂ ಸೊಗಸಾದ ಹನಿಗಳೇ.. ಅ೦ತೂ ಬೇಗ ಉದುರಿಸಿ ಬಿಟ್ರಿ.. ನಾವು ಹೆಕ್ಕೊ೦ಡಿದ್ದೂ ಆಯ್ತು! ಅದರಲ್ಲಿಯೂ ೨,೩, ೮ ಮತ್ತು ಕೊನೆಯ ಹನಿಗಳ೦ತೂ ಭಾರೀ ಸೊಗಸಾಗಿವೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ರಾಘು ಸಾರ್. ಕವಿತೆಗಳು ಎದೆಯಿಂದ ಹೊರಬರಲು ಸದಾ ಚಡ ಪಡಿಸುತ್ತಿರುತ್ತವೆ ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿ << ಗೆಳತಿ, ಮುಂದಿನ ಜನ್ಮವೊಂದಿದ್ದರೆ ನಾನು ಗೆದ್ದಲಾಗುವೆ ನೀನು ಹಾವಾಗಿ ಹಗಲಿರುಳೂ ದುಡಿದು ಕಟ್ಟಿದ ನನ್ನ ಅರಮನೆಯಲ್ಲಿ ಬಲವಂತವಾಗಿಯಾದರೂ ಬಂದು ನೆಲಸು. >>ಈ ಹನಿಗಳು ಸೂಪರ್...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟೇಶ್ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹನಿ ಹನಿ............ಸು೦ದರ ಪ್ರೇಮ್ ಕಹಾನಿ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಸಾರ್ ಹಾಗೆ ಸುಮ್ಮನೆ ಕೆಲ ಭಾವಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದಕ್ಕಿಂತ ಒಂದು ಸೂಪರ್ ಹನಿಗಳು ,ಪ್ರತೀ ಹನಿಯ ಭಾವನೆ ಸಾಗರದಷ್ಟೇ ಆಳ ಅನ್ನಿಸಿತು,ಬಹಳ ಸೊಗಸಾಗಿದೆ ರವಿಯವರೇ. ವಂದನೆಗಳೊಂದಿಗೆ ವಾಣಿ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಣಿ ಅವರೇ ನಿಮ್ಮ ಪ್ರೋತ್ಸಾಹ ಇನ್ನೂ ಹೆಚ್ಚು ಬರೆಯುವಂತೆ ಮಾಡುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವೀ ಅವರೇ ಭಾವುಕರಾಗಿ ಬರೆದಿರುವ ನಿಮ್ಮ ಹನಿಗಳು ನಮ್ಮನ್ನು ಮತ್ತಷ್ಟು ಭಾವುಕರನ್ನಾಗಿ ಮಾಡಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಯಂತ್ ಅವರೇ ಹೀಗೆ ಭಾವ ಲೋಕದ ಯಾನ ಸಾಗುತ್ತಲೇ ಇರುತ್ತದೆ. ನಿಮ್ಮ ನುಡಿಗಳಿಗೆ ಋಣಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಯವರೇ, [[ಕನಸುಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ]] ಕನಸುಗಳು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಕೊಲೆಯಾಗುವುದೇ ಹೆಚ್ಚು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ ಸಾರ್ ವಂದನೆಗಳು. ಕನಸುಗಳನ್ನು ಕೊಂದರೂ, ಅವಾಗೆ ಅವು ಆತ್ಮಹತ್ಯೆ ಮಾಡಿಕೊಂಡರೂ ಉಳಿಯುವುದು ಅವುಗಳು ಮೂಡಿಸಿದ್ದ ಭರವಸೆಯ ಶವಗಳು ತಾನೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್, ಬಹಳ ಚೆನ್ನಾಗಿವೆ.ಭಾವನೆಗಳು ಶಬ್ದಗಳಾದಾಗ ಹೀಗೆಯೆ ಅನಿಸಿತು. ಇನ್ನೂ ಬರಲಿ ಹನಿಯ ಸಿ೦ಚನ.ಅಭಿನ೦ದನೆಗಳು ರವಿಕುಮಾರರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ರಘು ಅವರೇ. ಇನ್ನೂ ಹೆಚ್ಚು ಬರೆಯುವೆನೆಂಬ ಭರವಸೆಯೊಂದಿಗೆ. ನಿಮ್ಮವ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರಳಿ ಬರುವುದು ನಮ್ಮ ಜಾಯಮಾನದಲ್ಲೇ ಇಲ್ಲವೇನೋ? ಬದಲಾದ ಸಮಯದಲ್ಲಿ ಗೆಲುವನ್ನು ಪುನಃ ಕಂಡು ಕೊಳ್ಳುವುದು ಮಾತ್ರ ಪರಿಹಾರ ಎಂದು ನನಗನಿಸಿದೆ. ಕೊನೆಯ (ಹನಿ)ಕವಿತೆ ಬಹಳಷ್ಟು ತಟ್ಟಿತು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಬಹುದು ಸಂತೋಷ್. ಆದರೆ ಮರಳಿ ನಮ್ಮ ಸ್ವ ಸ್ಥಾನಕ್ಕೆ ( ಅದು ಮನೆ, ಮನಸು, ಪ್ರೇಮಿ ಇತ್ಯಾದಿ) ಹೋಗುವ ಹುನ್ನಾರವೇ ಬದುಕಲ್ಲವೇ? ನಿಮ್ಮ ಮೆಚ್ಚುಗೆಗೆ ನಮಸ್ತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಯವರೇ ನಿಮ್ಮ ಹನಿಗಳು ಅದ್ಭುತ ವಾಗಿವೆ ನಿಮ್ಮ ಅಭಿಮಾನಿ ನಾನು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥ್ ಸಾರ್ ತುಂಬಾ ದೊಡ್ಡ ಮಾತು ನಿಮ್ಮದು. ನಾನು ಕೂಡ ನಿಮ್ಮ ಅಭಿಮಾನಿ ಎಂದೇ ಹೇಳುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಯವರೆ, ಹನಿ ಹನಿ ಸೇರಿದರೆ ಕೊಳವಂತೆ.... ನಿಮ್ಮಿ ಹನಿಗಳ ಕಂಡಿಲ್ಲ ಈ ಮಾತ ಹೇಳಿದವರು... ಕಂಡಿದ್ದರೆ ಹೇಳುವರು.... "ಹನಿ ಹನಿಯು ಕೊಳವಂತೆ" ನಿಮ್ಮಿ ಹನಿಗಳ ಅಭಿಮಾನಿ.... ಸ್ಪೃಹಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ಪ್ರುಹಿ ಅವರೇ ನಿಮ್ಮ ಅಭಿಮಾನಕ್ಕೆ ಶರಣು. ನಿಮ್ಮ ಹೆಸರು ನಿಸ್ಪ್ರಹ ಪದದ ವಿರುದ್ಧಾರ್ಥಕವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಾಲ್ ಸಾರ್ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿ.. ಸಕ್ಕತ್ತಾಗಿದೆ.. ತುಂಬ ಖುಷಿಯಾಯ್ತು.. !! ನಿಮ್ಮೊಲವಿನ, ಸತ್ಯ.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯಚರಣರೆ ನಿಮ್ಮ ಪ್ರೋತ್ಸಕ್ಕೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಯವರೇ ಉತ್ತಮ ಹನಿಗಳು. ತಮ್ಮ ಕವನಗಳು ತಮ್ಮ ಚಿಂತನೆಯ ಆಳವನ್ನು ಪ್ರತಿನಿಧಿಸುತ್ತವೆ ತಮ್ಮ ಹನಿಗಳಲ್ಲಿ ಸ್ವಲ್ಪ ಮಟ್ಟಿನ ಪ್ರಾಸವನ್ನು(ಪ್ರಯಾಸ ವಾಗದಂತೆ)ಅಲ್ಲಲ್ಲಿ ಬಳಸಿದರೆ ಇನ್ನೂ ಉತ್ತಮವೆನಿಸುತ್ತದೆ.ಅರ್ಥಗೌರವಕ್ಕೆ ಮನ್ನಣೆಯೀಯುವ ಸಹಜ ಪ್ರಾಸದಿಂದ ಕವನದ ಮಾಧುರ್ಯ ಹೆಚ್ಚುವುದೆಂದು ನನ್ನ ಅನಿಸಿಕೆ ಅದು ಸರಿಯೋ ತಪ್ಪೋ ಗೊತ್ತಿಲ್ಲ ಸಲಹೆಯನ್ನು ಮನ್ನಿಸಿ ನಿಮ್ಮ ೩ನೇ ೮ನೇ ಹಾಗೂ ೧೦ನೇ ಹನಿಗಳು ಲಯದಿಂದಾಗಿ ಮತ್ತಷ್ಟು ಮೋಹಕವಾಗಿವೆ. ಉಳಿದವುಗಳೂ ಹಾಗೆಯೇ ಆದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ. ಹರಿದು ಹೋದ ಚಿಂದಿ ಬಟ್ಟೆಗಳಂತೆ ಉಳಿದಿರುವ ಕಹಿ ನೆನಪುಗಳ ಕಂತೆಯ ಹೊರ ಚೆಲ್ಲಿ ಮರಳಬೇಕಿದೆ ಮತ್ತೆ ಒಂದೊಮ್ಮೆ ಗೆಲುವಾಗಿದ್ದ ಮನಸ್ಸಿನತ್ತ(ತ್ತೆ) ಮನದಾಳದ ಭಾವಿಯಲಿ ಕನಸುಗಳ ಆತ್ಮಹತ್ಯೆ ನಡೆಯುತ್ತಿದೆ ಪ್ರತಿನಿತ್ಯ ಶವ ತೆಗೆಯುವ ಕರ್ಮ ನನ್ನದೇಕಂತೆ? ಇವು ನನ್ನ ಅನಿಸಿಕೆಗಳಷ್ಟೇ. ಸರಿ ತಪ್ಪುಗಳ ವಿಮರ್ಶೆಯಲ್ಲ. ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸಲಹೆಗಳಿಗೆ ಪೂರ್ಣ ಸ್ವೀಕಾರವಿದೆ ನಾಗರತ್ನ ಅವರೇ. ಮುಂದೆ ಹಾಗೆ ಬರೆಯಲು ಯೋಚಿಸುವೆ. ಮೆಚ್ಚುಗೆಗೆ ನಮನಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.