ಶ್ರೀರಾಮ ಲಕ್ಷಣ
ಕವನ
ಕಲ್ಯಾಣ ಗುಣಪೂರ್ಣನು
ಶ್ರೀ ರಾಮನು |
ಕಲ್ಯಾಣಗುಣಪೂರ್ಣನು ||ಪ||
ಅತುಲ ಪರಾಕ್ರಮಿ ಧರ್ಮಜ್ಞನು
ಕೃತಜ್ಞತೆಯ ಗುಣ ಪರಿಪೂರ್ಣನು ||
ಸತ್ಯಭಾಷಿ ಧೃಢ ವ್ರತನಿಷ್ಟನು
ಕುಲಾಚಾರ ಚಾರಿತ್ರ್ಯ ಶುದ್ಧನು ||೧||
ಸರ್ವ ಚರಾಚರದಲ್ಲಿ ದಯಾಪರ
ಸಕಲ ವಿದ್ಯೆಗಳಲ್ಲಿ ವಿಶಾರದ ||
ಸರ್ವಕಾರ್ಯ ಕರ್ತವ್ಯ ದುರಂಧರ
ಸಕಲವ ಮೋಹಿಪ ಸುಪ್ರಿಯ ದರ್ಶ ||೨||
ಆತ್ಮಜ್ಞಾನಿಯಿವ ಜಿತಕ್ರೋದನು
ರವಿಗತಿ ಮೆರಗಿನ ದ್ಯುತಿವಂತನು
ಮಾತ್ಸರ್ಯವರಿಯದ ಅನಸೂಯನು
ಅನಿಮಿಷರಂಜುವ ಶ್ರೀರಾಮನು ||೩||
(ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿತವಾದ ಶ್ರೀರಾಮನ ಹದಿನಾರು ಗುಣ ವಿಶೇಷತೆಗಳನ್ನು ಅದೇ ಅನುಕ್ರಮಣಿಕೆಯಲ್ಲಿ ಬರೆದಿದೆ.)
- ಸದಾನಂದ
Comments
ಉ: ಶ್ರೀರಾಮ ಲಕ್ಷಣ
In reply to ಉ: ಶ್ರೀರಾಮ ಲಕ್ಷಣ by ananthaveera
ಉ: ಶ್ರೀರಾಮ ಲಕ್ಷಣ
ಉ: ಶ್ರೀರಾಮ ಲಕ್ಷಣ
In reply to ಉ: ಶ್ರೀರಾಮ ಲಕ್ಷಣ by prasannakulkarni
ಉ: ಶ್ರೀರಾಮ ಲಕ್ಷಣ
ಉ: ಶ್ರೀರಾಮ ಲಕ್ಷಣ
In reply to ಉ: ಶ್ರೀರಾಮ ಲಕ್ಷಣ by gopaljsr
ಉ: ಶ್ರೀರಾಮ ಲಕ್ಷಣ