ಶ್ರೀರಾಮ ಲಕ್ಷಣ

ಶ್ರೀರಾಮ ಲಕ್ಷಣ

ಕವನ

 

ಕಲ್ಯಾಣ ಗುಣಪೂರ್ಣನು
ಶ್ರೀ ರಾಮನು |
            ಕಲ್ಯಾಣಗುಣಪೂರ್ಣನು  ||ಪ||

   ಅತುಲ ಪರಾಕ್ರಮಿ ಧರ್ಮಜ್ಞನು 
          ಕೃತಜ್ಞತೆಯ ಗುಣ ಪರಿಪೂರ್ಣನು  ||
ಸತ್ಯಭಾಷಿ ಧೃಢ ವ್ರತನಿಷ್ಟನು
              ಕುಲಾಚಾರ ಚಾರಿತ್ರ್ಯ ಶುದ್ಧನು  ||೧||


  ಸರ್ವ ಚರಾಚರದಲ್ಲಿ ದಯಾಪರ
   ಸಕಲ ವಿದ್ಯೆಗಳಲ್ಲಿ ವಿಶಾರದ ||
     ಸರ್ವಕಾರ್ಯ ಕರ್ತವ್ಯ ದುರಂಧರ
                 ಸಕಲವ ಮೋಹಿಪ ಸುಪ್ರಿಯ ದರ್ಶ ||೨||

     ಆತ್ಮಜ್ಞಾನಿಯಿವ ಜಿತಕ್ರೋದನು
       ರವಿಗತಿ ಮೆರಗಿನ ದ್ಯುತಿವಂತನು
          ಮಾತ್ಸರ್ಯವರಿಯದ ಅನಸೂಯನು
                 ಅನಿಮಿಷರಂಜುವ ಶ್ರೀರಾಮನು  ||೩||
 

(ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿತವಾದ ಶ್ರೀರಾಮನ ಹದಿನಾರು ಗುಣ ವಿಶೇಷತೆಗಳನ್ನು ಅದೇ ಅನುಕ್ರಮಣಿಕೆಯಲ್ಲಿ ಬರೆದಿದೆ.)

                                                                              - ಸದಾನಂದ
 

Comments