ಚಂದ್ರಯಾನಕೆ ಬಾ, ಸಖೀ!
ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,
ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ;
ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ,
ಚಂದ್ರ ಲೋಕವನೇ ಏರಿ ಸುಖಿಸೋಣ ಬಾ;
ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ,
ನಕ್ಷತ್ರಗಳ ಲೋಕದಲೇ ಕುಣಿಯಬಹುದಲ್ಲ!
ಗಿಡಮರಗಳ ಸುತ್ತಾಡಿ ಹಾಡಬೇಕಿಲ್ಲ ಇನ್ನು,
ಗ್ರಹಗಳ ಸುತ್ತುತ್ತಾ ನಾವು ನಲಿಯಬಹುದಿನ್ನು;
ಇಲ್ಲಿ ನಮಗೆ ದುರುಗುಟ್ಟುವ ಕಣ್ಣುಗಳ ಶನಿಕಾಟ,
ಅಲ್ಲಿ ಗುರು-ಶನಿಗಳಿಗೇ ಮಾಡಬಹುದು ಟಾಟಾ;
ಬೆಳದಿಂಗಳಿಗಾಗಿ ಹುಣ್ಣಿಮೆಯ ನಿರೀಕ್ಷೆ ಇಲ್ಲಿ,
ದಿನ-ರಾತ್ರಿ ಬೆಳದಿಂಗಳ ಸತತ ಸ್ನಾನ ನಮಗಲ್ಲಿ;
ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,
ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ!
***********************
ಭಾರತೀಯ ಆಕಾಶನೌಕೆ "ಚಂದ್ರಯಾನ" ಚಂದ್ರನಲ್ಲಿಗೆ ಹೋದಂದು ಬರೆದ ಕವನ!
Rating
Comments
ಉ: ಚಂದ್ರಯಾನಕೆ ಬಾ, ಸಖೀ!
In reply to ಉ: ಚಂದ್ರಯಾನಕೆ ಬಾ, ಸಖೀ! by kavinagaraj
ಉ: ಚಂದ್ರಯಾನಕೆ ಬಾ, ಸಖೀ!
ಉ: ಚಂದ್ರಯಾನಕೆ ಬಾ, ಸಖೀ!
In reply to ಉ: ಚಂದ್ರಯಾನಕೆ ಬಾ, ಸಖೀ! by Jayanth Ramachar
ಉ: ಚಂದ್ರಯಾನಕೆ ಬಾ, ಸಖೀ!
In reply to ಉ: ಚಂದ್ರಯಾನಕೆ ಬಾ, ಸಖೀ! by asuhegde
ಉ: ಚಂದ್ರಯಾನಕೆ ಬಾ, ಸಖೀ!
In reply to ಉ: ಚಂದ್ರಯಾನಕೆ ಬಾ, ಸಖೀ! by ksraghavendranavada
ಉ: ಚಂದ್ರಯಾನಕೆ ಬಾ, ಸಖೀ!
ಉ: ಚಂದ್ರಯಾನಕೆ ಬಾ, ಸಖೀ!
In reply to ಉ: ಚಂದ್ರಯಾನಕೆ ಬಾ, ಸಖೀ! by ambika
ಉ: ಚಂದ್ರಯಾನಕೆ ಬಾ, ಸಖೀ!