ಉತ್ಪಾತವಾಗಬೇಕಿದೆ ಈಗ...

0

 

 "ನನ್ನೊಳಗೆ ಒಂದು ಭಾರಿ ಉತ್ಪಾತವಾಗದೆ, ಬುದ್ಧನನ್ನು ಹಿಡಿಯುವ ಸಾಧ್ಯತೆ ಇಲ್ಲ ಅನಿಸಿತು" 

                                                                  ಎಚ್. ಎಸ್. ವೆಂಕಟೇಶಮೂರ್ತಿ 
 
ಉತ್ಪಾತವಾಗಬೇಕಿದೆ ಈಗ 
ಮನೆಗಳಲ್ಲಿ ಗುಡಿಗಳಲ್ಲಿ 
ಚರ್ಚು ಮಸೀದಿಗಳಲ್ಲಿ 
ಮತ್ತೆಲ್ಲಕ್ಕಿಂತ ಹೆಚ್ಚಾಗಿ 
ನಮ್ಮ ಮನಗಳಲ್ಲಿ. 
 
ಹಸಿದ ಹೊಟ್ಟೆಗಳ 
ನರಳಾಟ ಕೇಳದೆ 
ಕಂತೆ ಕಂತೆ ನೋಟು 
ಹುಂಡಿಗೋ, ಜೋಳಿಗೆಗೋ
ಡಬ್ಬಿಗೋ ಹಾಕಿ  
ದೈವ ಸಂಪನ್ನವಾದ ಹಾಗೆ 
ಹುಸಿ ತೃಪ್ತಿಯಲ್ಲಿರದಂತೆ 
ಉತ್ಪಾತವಾಗಬೇಕಾಗಿದೆ ಈಗ. 
 
ಅನಾಥ ಕಣ್ಣಲಿ 
ಜಿನುಗುವ ಹನಿಗಳ 
ಒರೆಸದೆ ವರ್ಷಕ್ಕೊಮ್ಮೆ 
ಹಣ್ಣು- ಬಟ್ಟೆ ಕೊಟ್ಟು 
ಬೀಗದಿರುವಂತೆ 
ಉತ್ಪಾತವಾಗಬೇಕಾಗಿದೆ ಈಗ. 
 
ಸಾವಿರ ಒಸಾಮರು 
ಸತ್ತು ನರಿಮೊಗದ 
ಒಬಾಮರು ಹುಟ್ಟಿದರೂ 
ಸುಳ್ಳು ಸಾಂತ್ವನದ ಬದುಕ 
ನೆಚ್ಚಿಕೊಳ್ಳದಂತೆ 
ಉತ್ಪಾತವಾಗಬೇಕಿದೆ ಈಗ. 
 
ಭಾವ ಲೋಕದ 
ತಲ್ಲಣಗಳಿಗೆ ಕಿವುಡಾಗಿ
ಸುಳ್ಳೇ ನಿರ್ಲಿಪ್ತವಾಗಿರದಂತೆ 
ಶೋಷಣೆಯ ಹಲ 
ಮುಖವಾಡಗಳು ಜಯಭೇರಿ 
ಹೊರಟಿರುವಾಗ ಸುಮ್ಮನಿರದಂತೆ 
ಉತ್ಪಾತವಾಗಬೇಕಿದೆ ಈಗ. 
 
ಇದೆಲ್ಲಕ್ಕಿಂತ ಮಿಗಿಲಾಗಿ 
ಮನುಷ್ಯತ್ವದ ಹಲವು 
ಸೊಗಸಾದ ಗುಣಗಳ 
ಮರೆತು ಇರಲಾರದಂತೆ 
ಉತ್ಪಾತವಾಗಬೇಕಾಗಿದೆ ಈಗ 
ನಿಮ್ಮಲ್ಲಿ, ನನ್ನಲ್ಲಿ 
ಮುಂದುವರೆದು.... 
ನಮ್ಮ ಎಳೆಯರಿಗೆ 
ನಾವು ಕಟ್ಟಿಕೊಡುತ್ತಿರುವ 
ಕನಸುಗಳಲ್ಲಿ..........
 
 
 
 
 
 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಳ್ಳೆಯ ಆಶಯಗಳನ್ನೊಳಗೊ೦ಡ ಸ೦ದೇಶಾತ್ಮಕ ಕವನ ಕು೦ಬಾರರೇ.. ಓದುತ್ತಾ ಹೋದ೦ತೆ ಕುವೆ೦ಪುರವರ “ ಬಾ ಇಲ್ಲಿ ಅವತರಿಸು ಇ೦ದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ“ ಗೀತೆಯ ನೆನಪಾಗುತ್ತಾ ಹೋಯಿತು! ಮೊದಲ ಬಾರಿಗೆ ಹಳಿ ಬದಲಿಸಿದ್ದೀರಿ.. ಒಳ್ಳೆಯದಾಗಲಿ.. ನಿಮ್ಮ ಕಾವ್ಯ ಕೃಷಿ ಮು೦ದುವರೆಯಲಿ... ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ನಮಸ್ಕಾರಗಳು ರಾಘು ಸಾರ್. ನನ್ನದೇ ಭಾವನೆಯ ಚಿಪ್ಪು ಒಡೆದು ಹೊರಬಂದಾಗ ಮೂಡಿದ ಕವಿತೆ ಇದು. ಮೊನ್ನೆ ನಿಮ್ಮ ಸಲಹೆಯಂತೆ ಈಗ ಸಂತೋಷದಿಂದಿದ್ದೇನೆ. ಈಗ ಆ ವಿಷಾದ ಇಲ್ಲ.