ರಾಜಕೀಯದಿಂದ ಪ್ರವಾಸಿ ತಾಣದೆಡೆಗೆ

ರಾಜಕೀಯದಿಂದ ಪ್ರವಾಸಿ ತಾಣದೆಡೆಗೆ

ರಾಜಕೀಯ ಜಿದ್ದಾಜಿದ್ದಿ, ಪ್ರತಿಭಟನೆಗಳಿಗೆ ಪ್ರಸಿದ್ದವಾಗಿದ್ದ ಶಿಕಾರಿಪುರ, ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ತಾಲ್ಲೂಕಿನ ಚಿತ್ರಣ ಬದಲಾಗುತ್ತಿದೆ. ಎಲ್ಲೆಡೆ ಅಭಿವೃದ್ದಿ ಕಾರ್ಯಗಳು ನಡೆಯುತ್ತಲೇ ಇದೆ. ಪಟ್ಟಣದ ಇತಿಹಾಸ ಪ್ರಸಿದ್ದ ಹುಚ್ಚರಾಯಸ್ವಾಮಿ ದೇವಸ್ಥಾನವನ್ನು ಆಧುನೀಕರಣಗೊಳಿಸಲಾಗಿದೆ. ಇದರ ಪಕ್ಕದಲ್ಲೇ ಇರುವ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಸಲುವಾಗಿ ಕೋಟ್ಯಾಂತರ ರೂಗಳ ವೆಚ್ಚದಲ್ಲಿ, ಸುಂದರ ಉದ್ಯಾನವನ, ಪ್ರವಾಸಿ ಮಂದಿರ, ಕಲ್ಯಾಣಿ, ಬೋಟಿಂಗ್ ಅಲ್ಲದೆ ವಿಶೇಷವಾದ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ. ಇದರ ಉಳುವ ಯೋಗಿಯ ನೋಡಲ್ಲಿ ಗೀತೆಯ ನೀರಿನ ನೃತ್ಯ ಎಲ್ಲರನ್ನೂ ಮೈಮರೆಸುತ್ತದೆ. ಇದರ ಪಕ್ಕದಲ್ಲೇ ರಾಘವೇಂದ್ರ ರಾಯರ ಮಠ, ದತ್ತಾತ್ರೇಯ ಮಠವೂ ಇದೆ.

ಇದಲ್ಲದೆ ಬಳ್ಳಿಗಾವಿಯ ಕೇದಾರೇಶ್ವರ, ಬಂದಳಿಕೆ, ಶಿವನಪಾದಗಳಲ್ಲಿ ಇರುವಂತಹ ದೇವಸ್ಥಾನಗಳಿಗೆ ವಿಶೇಷವಾದ ಮೆರಗನ್ನು ನೀಡಲಾಗುತ್ತಿದೆ. ಇದೀಗ ಬದಲಾಗಿರುವ ಶಿಕಾರಿಪುರಕ್ಕೆ, ರಾಜ್ಯದ ಅನೇಕ ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಂತೂ ಶಿಕಾರಿಪುರ ಪ್ರವಾಸಿ ಕೇಂದ್ರವಾಗಿರುವುದು ಹರ್ಷ ಮೂಡಿಸಿದೆ.

Comments