ರಾಜಕೀಯದಿಂದ ಪ್ರವಾಸಿ ತಾಣದೆಡೆಗೆ

0

ರಾಜಕೀಯ ಜಿದ್ದಾಜಿದ್ದಿ, ಪ್ರತಿಭಟನೆಗಳಿಗೆ ಪ್ರಸಿದ್ದವಾಗಿದ್ದ ಶಿಕಾರಿಪುರ, ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ತಾಲ್ಲೂಕಿನ ಚಿತ್ರಣ ಬದಲಾಗುತ್ತಿದೆ. ಎಲ್ಲೆಡೆ ಅಭಿವೃದ್ದಿ ಕಾರ್ಯಗಳು ನಡೆಯುತ್ತಲೇ ಇದೆ. ಪಟ್ಟಣದ ಇತಿಹಾಸ ಪ್ರಸಿದ್ದ ಹುಚ್ಚರಾಯಸ್ವಾಮಿ ದೇವಸ್ಥಾನವನ್ನು ಆಧುನೀಕರಣಗೊಳಿಸಲಾಗಿದೆ. ಇದರ ಪಕ್ಕದಲ್ಲೇ ಇರುವ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಸಲುವಾಗಿ ಕೋಟ್ಯಾಂತರ ರೂಗಳ ವೆಚ್ಚದಲ್ಲಿ, ಸುಂದರ ಉದ್ಯಾನವನ, ಪ್ರವಾಸಿ ಮಂದಿರ, ಕಲ್ಯಾಣಿ, ಬೋಟಿಂಗ್ ಅಲ್ಲದೆ ವಿಶೇಷವಾದ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ. ಇದರ ಉಳುವ ಯೋಗಿಯ ನೋಡಲ್ಲಿ ಗೀತೆಯ ನೀರಿನ ನೃತ್ಯ ಎಲ್ಲರನ್ನೂ ಮೈಮರೆಸುತ್ತದೆ. ಇದರ ಪಕ್ಕದಲ್ಲೇ ರಾಘವೇಂದ್ರ ರಾಯರ ಮಠ, ದತ್ತಾತ್ರೇಯ ಮಠವೂ ಇದೆ.

ಇದಲ್ಲದೆ ಬಳ್ಳಿಗಾವಿಯ ಕೇದಾರೇಶ್ವರ, ಬಂದಳಿಕೆ, ಶಿವನಪಾದಗಳಲ್ಲಿ ಇರುವಂತಹ ದೇವಸ್ಥಾನಗಳಿಗೆ ವಿಶೇಷವಾದ ಮೆರಗನ್ನು ನೀಡಲಾಗುತ್ತಿದೆ. ಇದೀಗ ಬದಲಾಗಿರುವ ಶಿಕಾರಿಪುರಕ್ಕೆ, ರಾಜ್ಯದ ಅನೇಕ ಕಡೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಂತೂ ಶಿಕಾರಿಪುರ ಪ್ರವಾಸಿ ಕೇಂದ್ರವಾಗಿರುವುದು ಹರ್ಷ ಮೂಡಿಸಿದೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಷ್ಟಾದರೂ.. ಸದ್ಯದ ಮುಖ್ಯಮಂತ್ರಿಗಳ ಊರಲ್ವೇ? ತಾಲ್ಲೂಕನ್ನ ಜಿಲ್ಲೆಯಾಗಿಸಲು ಏನೇನು ಮಾಡಬೇಕೋ ಅದೆಲ್ಲವನ್ನೂ ಸದ್ಯದ ಗುರಿಯಾಗಿರಿಸಿರುವಾಗ, ಇದೆಲ್ಲದರ ಅವಶ್ಯಕತೆ ಹೆಚ್ಚಿಗೆ ಇದೆ ಅಲ್ವೇ? ನಿಮ್ಮೊಲವಿನ, ಸತ್ಯ..:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವು ಹೇಳಿದ್ದು ಸತ್ಯ. ಆದರೆ ಮಾಡಬೇಕೆಂಬ ಇಚ್ಛಾ ಶಕ್ತಿ ಇದೆಯೆಲ್ಲಾ ಅದಕ್ಕೆ ಸಂತಸ ಪಡಬೇಕು. ಎಲ್ಲಾ ಮುಖ್ಯಮಂತ್ರಿಗಳು ಇದೇ ರೀತಿ ಮಾಡಿದ್ದರೆ ಇವತ್ತು ಅವರವರ ಕ್ಷೇತ್ರಗಳು ಅಭಿವೃದ್ದಿ ಹೊಂದಿರತಿತ್ತು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ.. ಈ ಮಾತನ್ನ ನಾನು ಬಹುಜನರ ಬಾಯಲ್ಲಿ ಕೇಳುತ್ತಿದ್ದೇನೆ.. ಅದರಲ್ಲೂ ಶಿವಮೊಗ್ಗೆಯ ಜನರ ಬಾಯಲ್ಲಿ ಹೆಚ್ಚು.. (ಅಂದರೆ.. ನಾನು ಸೇರಿ.. ಅಂತ.. ಅದು ರಹಸ್ಯವಾಗಿರಲಿ..ಹ..ಹ.. :)) ಧರ್ಮಸಿಂಗ್‌ರ ಊರಿನ ಬಗ್ಗೆ ಹೀಗೆ ಅವರು ಮುಖ್ಯಮಂತ್ರಿಯಾದರೂ ಅವರ ಊರು ಪಾಳು ಬಿದ್ದಿದೆ ಅಂತ ಕೇಳಿದ್ದೆ.. ಜೆ.ಹೆಚ್. ಪಟೇಲ್ ಹೊನ್ನಾಳಿಗೆ ಹೆಚ್ಚಿನದ್ದನೇನು ಮಾಡಿಲಿಲ್ಲ ಅನ್ಕೋತೀನಿ.. ಇನ್ನೂ ಉಳಿದವರ ಕತೆಗಳು ಹೇಗೇಗಿದೆಯೋ.. ಆದರೆ, ಶಿಕಾರಿಪುರ, ಜಿಲ್ಲೆಯಾದರೆ.. ಶಿವಮೊಗ್ಗದ ಪ್ರಗತಿಗೆ ಅಡ್ಡಗಾಲಾಗದಿರಲಿ ಅಂತ ಬಯಸುತ್ತೇನೆ.. :) ನಿಮ್ಮೊಲವಿನ, ಸತ್ಯ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಂದರ ಚಿತ್ರಗಳೊಂದಿಗೆ ಮಾಹಿತಿಯುಕ್ತ ಬರಹ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸುರೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಂದರ ಚಿತ್ರಗಳು ಧನ್ಯವಾದಗಳು - ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ರಾಮಮೋಹನ್್ರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.