ಬದುಕಿದ್ದಾಗಲೇ ನಾವು ನೆನಪಾಗಬೇಕೆ?

ಬದುಕಿದ್ದಾಗಲೇ ನಾವು ನೆನಪಾಗಬೇಕೆ?

ಕವನ

ಜೀವನವೆಂಬ ಈ ಸಾಗರದಲ್ಲಿ ನಾವಿರುವುದು

ಕೆಲವೇ ದಿನವೆಂಬ ಅರಿವಿದ್ದರೂ ನಾವ್ಯಾಕೆ ಹೀಗೆ

 

ಪ್ರೀತಿ, ಪ್ರೇಮವ ಹಂಚುತ ಬಾಳುವವರು ನಾವು

ಜೊತೆಯಲ್ಲಿ ದ್ವೇಷ ಹಗೆತನವನ್ನು ಏಕೆ ಬೆಳೆಸಬೇಕು

 

ಇರುವಷ್ಟು ದಿವಸ ಸನ್ನಡತೆಯಿಂದ ಬಾಳೋಣ

ಸಾರ್ಥಕವಾಗಿಸೋಣ ಈ ಜನುಮವ

 

ಈ ಲೋಕವನ್ನು ತೊರೆದ ಮೇಲೂ ನಮ್ಮನ್ನು

ಸದಾಕಾಲ ನೆನಪಿಸಿಕೊಳ್ಳುವಂತಾಗಬೇಕೆ ಹೊರತು

 

ಇನ್ನೂ ಬದುಕಿರುವಾಗಲೇ ನಾವು
ಬರಿಯ ನೆನಪಾಗಿ ಉಳಿದುಬಿಡಬೇಕೇ?

 

ಅತ್ರಾಡಿ ಸುರೇಶ ಹೆಗ್ಡೆ ಅವರು ಕಳುಹಿಸಿದ ಒಂದು ಸಂದೇಶದಿಂದ ಪ್ರೇರಿತನಾಗಿ ಬರೆದದ್ದು. ಧನ್ಯವಾದಗಳು ಹೆಗ್ಡೆ ಅವರೇ.

 

Comments