ಕಳೆ.....ಕೀಳುವವರು...!!
ಮುಂಜಾನೆ ಫ್ರೆಶ್ ಆಗಿ ಹೊರಟವನಿಗೆ
ದಾರಿಯಲಿ ಪರಿಚಯದ ಮುಖದ ಪ್ರಶ್ನೆ....!
" ಯಾಕೆ ಸೊರಗಿರುವಿರಿ...ಕ್ಷೇಮ ತಾನೆ ?
ಮನದಲ್ಲೇ ಗೊಣಗುತ್ತಾ.....ಅಂದುಕೊಳ್ಳುತ್ತೇನೆ
ಇವರು.......
"ಮುಖದ ಕಳೆ ಕೀಳುವವರು !"
ಆ ದಿನವಿಡೀ ...ಆರೋಗ್ಯದ ಚಿಂತೆಯಲ್ಲೇ...
ಸೋತ ಮುಖ...ಹೊತ್ತು
ಮನೆ ಸೇರಿ ಹೆಂಡತಿಗೆ ಮೊದಲ ಪ್ರಶ್ನೆ..
"ನಾನು ಸೊರಗಿದಂತೆ ಕಾಣುವೆನೆ ?"
ನಲ್ಲೆಯ ಸಾಂತ್ವನದ ಮಾತಿಗೆ ಪುನಃ ಲವಲವಿಕೆ
ಇವಳು...
" ಮನದ 'ಕಳೆ' ಕೀಳುವವಳು
ವಾರದ ಕೊನೆಯವರೆಗೆ ಗಲ್ಲದ ತುಂಬ ಬೆಳೆದ
ತಂತಿಯಂತಹ ಗಡ್ಡ...
ಕ್ಷೌರಿಕನ ಕೈಯಲ್ಲಿ ಮುಖಕೊಟ್ಟು..!
ಮನದಲ್ಲೇ ನಸು ನಕ್ಕು ಕುಳಿತು ಬಿಡುತ್ತೇನೆ !
ಇವನು....
ಮುಖದ 'ಕಳೆ " ಕೀಳುವವನು
ಜೀವನ ಫಸಲು ಸಮೃದ್ಧವಾಗಲು
ಬದುಕಿನಲಿ ಕೀಳುತ್ತಿರಬೇಕು...
ನಮ್ಮ ಮನದ ಕಳೆ ,ಮುಖದ ಕೊಳೆ
ಇನ್ನೊಬ್ಬರ ಮನದ ಕೊಳೆ....ಆದರೆ ಮುಖದ ಕಳೆಯನ್ನಲ್ಲ..!!
Comments
ಉ: ಕಳೆ.....ಕೀಳುವವರು...!!
In reply to ಉ: ಕಳೆ.....ಕೀಳುವವರು...!! by karababu
ಉ: ಕಳೆ.....ಕೀಳುವವರು...!!
ಉ: ಕಳೆ.....ಕೀಳುವವರು...!!
In reply to ಉ: ಕಳೆ.....ಕೀಳುವವರು...!! by Gonchalu
ಉ: ಕಳೆ.....ಕೀಳುವವರು...!!
ಉ: ಕಳೆ.....ಕೀಳುವವರು...!!
In reply to ಉ: ಕಳೆ.....ಕೀಳುವವರು...!! by RAMAMOHANA
ಉ: ಕಳೆ.....ಕೀಳುವವರು...!!
ಉ: ಕಳೆ.....ಕೀಳುವವರು...!!
In reply to ಉ: ಕಳೆ.....ಕೀಳುವವರು...!! by saraswathichandrasmo
ಉ: ಕಳೆ.....ಕೀಳುವವರು...!!
ಉ: ಕಳೆ.....ಕೀಳುವವರು...!!
In reply to ಉ: ಕಳೆ.....ಕೀಳುವವರು...!! by partha1059
ಉ: ಕಳೆ.....ಕೀಳುವವರು...!!
ಉ: ಕಳೆ.....ಕೀಳುವವರು...!!