ಬೃಂದಾವನ ಅಂದರೆ ಏನು?

0

ನ್ನ ಬ್ಲಾಗ್ ನಲ್ಲಿ ಇಂದು ಏನು ಬರೆಯುವುದು ಎಂದು ಯೋಚಿಸುತ್ತಿದ್ದೆ. ಆಗ ನನ್ನ ಸ್ನೇಹಿತರೊಬ್ಬರು ಇಂದು ಬೃಂದಾವನಕ್ಕೆ (ಇದು ಇಲ್ಲಿಯ ಒಂದು ಹೊಟೆಲ್ ) ಹೋಗಿ ಬರುವ ಅಂದರು. ಆಗ ಯೋಚಿಸಿದೆ - ಈ ಬೃಂದಾವನ ಅಂದರೆ ಏನು? ಇದು ಕಾಬಾ, ದರ್ಗಾ, ಸಮಾಧಿ, ಗದ್ದುಗೆಗಳಂತೆಯೇ, ಅಲ್ಲವೇ. ಇದರ ಬಗ್ಗೆ ನನ್ನ ಅನಿಸಿಕೆ ಹೀಗಿದೆ. ನೋಡಿ, ಓದಿ, ತಪ್ಪುಗಳನ್ನು ತಿಳಿಸಿ, ನಾನೂ ತಿಳಿಯುವುದು ಬಹಳಷ್ಟಿದೆ.

ಬೃಂದಾವನ ಮತ್ತು ಮಠ ಕಟ್ಟುವ ಜಾಗ ವಾಸ್ತುವಿನ ಪ್ರಕಾರ ಉತ್ತಮ ಜಾಗ.
ಸ್ವಾಮಿಗಳು ದೇವರ ಅದೀನರಾದಾಗ ಈ ಜಾಗದಲ್ಲಿ ಒಂದು ಹಳ್ಳ ತೋಡಿ ಅಲ್ಲಿ ಮೊದಲಿಗೆ ಸಾಲಿಗ್ರಾಮ ಮತ್ತಿತರೇ ವಿಶೇಷ ಕಲ್ಲುಗಳನ್ನು ಇರಿಸಿ ನಂತರ ಆ ಮೃತ ಶರೀರವನ್ನು ಹಳ್ಳದೊಳಗೆ ಹಾಕಿ ಅದರ ಒಳಗೆ ಇಟ್ಟು ಅದರ ಮೇಲೆ ಮತ್ತೆ ಅಂತಹದೇ ವಿಶೇಷ ಕಲ್ಲುಗಳನ್ನು ಇರಿಸಿ ಮಣ್ಣು ಮುಚ್ಚಿ ಅದರ ಮೇಲೆ ತುಳಸಿ ಗಿಡವನ್ನು ನೆಡುವರು. ಇಲ್ಲಿ ಒಂದು ವಿಶೇಷತೆ ಅಂದ್ರೆ ಸಾಮಾನ್ಯವಾಗಿ ಆ ಮೃತರ ತಲೆಬುರುಡೆ ಒಡೆಯುವವರೆಗೂ ತಲೆಯ ಮೇಲೆ ತೆಂಗಿನಕಾಯಿಗಳನ್ನು ಒಡೆಯುವರು. ಯಾಕೆ ಅಂದ್ರೆ ಮನುಷ್ಯ ಜೀವ ತ್ಯಾಗ ಮಾಡುವಾಗ ಆತ್ಮ ಬೇರೆ ಬೇರೆ ರಂಧ್ರಗಳಿಂದ ಹೊರಗೆ ಹೋಗುವುದಂತೆ. ವ್ಯಕ್ತಿ ಸತ್ತಾಗ ವೀಕ್ಷಿಸಿ, ಕೆಲವರ ಬಾಯಿ ತೆರೆದಿರುತ್ತದೆ, ಕೆಲವರ ಕಣ್ಣು ತೆರೆದಿರುತ್ತದೆ, ಕೆಲವರಿಗೆ ಮಲ ಮೂತ್ರ ವಿಸರ್ಜನೆ, ಇತ್ಯಾದಿ ಆಗಿರುತ್ತದೆ. ಅಂದರೆ ಅವರ ಆತ್ಮ ಆ ರಂಧ್ಯಗಳ ಮೂಲಕ ಹೊರ ಹೋಗಿರುತ್ತದಂತೆ. ಧಾರ್ಮಿಕ ಶ್ರೇಷ್ಠರಿಗೆ ಈ ಆತ್ಮ ಬ್ರಹ್ಮರಂಧ್ರದ ಮೂಲಕ ಹೋಗುವುದಂತೆ. ಈ ಬ್ರಹ್ಮರಂಧ್ರ ಇರೋದು ತಲೆಯ ಮಧ್ಯ ಭಾಗದಲ್ಲಿ. ತಲೆಯ ಮಧ್ಯ ಭಾಗ ಒಡೆದಿರುತ್ತದೋ ಇಲ್ಲವೋ, ಅದರ ದ್ಯೋತಕವಾಗಿ ಈ ತೆಂಗಿನಕಾಯಿಗಳನ್ನು ಒಡೆದು ತಲೆಬುರುಡೆ ಸೀಳುವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆ ಮೃತ ಶರೀರವನ್ನು ಹಳ್ಳದೊಳಗೆ ಹಾಕಿ

ಹಿಂದೂ ಸಂಪ್ರದಾಯದಲ್ಲಿ ಮೃತ ಶರೀರವನ್ನು ದಹಿಸುತ್ತಾರಲ್ಲವೆ?
'ಬೃಂದಾವನ' 'ಸಮಾಧಿ'ಯಾಗಿರಲಿಕ್ಕಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದೇ? ಇದರ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ ಆದರೆ 'ಸತ್ತವರ ನೆರಳು' ನಾಟಕದಲ್ಲಿ ಸ್ವಾಮೀಜಿಯವರು ಧರ್ಮದರ್ಶಿಗಳ ವಹಿವಾಟಿನ ಬಗ್ಗೆ ಸೊಲ್ಲೆತ್ತಿದಾಗ, ಸ್ವಾಮೀಜಿಯವರು ಸಮಾಧಿಯಾಗಲು ಇಚ್ಛಿಸಿದ್ದಾರೆ ಎಂದು ಭಕ್ತರಿಗೆ ಧರ್ಮದರ್ಶಿಗಳು ಹೇಳಿ ಅವರ ದೇಹದ ಮೇಲೆ ಬೃಂದಾವನವನ್ನೂ ಕಟ್ಟುತ್ತಾರೆ. ಅಲ್ಲವಾ? ಇದರ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸಿ. ನನಗೆ ಅಷ್ಟು ಗೊತ್ತಿಲ್ಲ. ಮೇಲಿನ ಪೋಸ್ಟನ್ನು ತಿದ್ದುತ್ತೇನೆ. ಇದರಿಂದ ಯಾರಿಗೂ ನೋವಾಗಬಾರದು. --- ತವಿಶ್ರೀನಿವಾಸ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ಬೃಂದಾವನ' ಮಹಾಭಾರತದಲ್ಲಿ ಬರುವ ಬೃಂದಾವನವೂ ಆಗಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೃಂದಾವನ ಶಬ್ದಕ್ಕೆ ಮೂರು ಅರ್ಥಗಳಿವೆ - ೧. ತುಳಸಿ ಕಟ್ಟೆ ೨. ಗೋಕುಲದ ಬಳಿಯ ಪವಿತ್ರ ಸ್ಥಳ (ಶ್ರೀಕೃಷ್ಣ ಬೆಳೆದ ಸ್ಥಳ) ೩. ವೈಷ್ಣವ ಸಂನ್ಯಾಸಿಗಳ ಸಮಾಧಿ ಸಿಗೋಣ, ಪವನಜ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಿಟಕಿಗಳು ೯೮ರಲ್ಲಿ ಯುನಿಕೋಡ್ ಕೆಲಸ ಮಾಡುತ್ತೆ -- ಮಾತು-ಕಥೆಯನ್ನ ಬೇರೆ ಎಲ್ಲಾದರು copy-paste ಮಾಡಿ ಹಾಕಿ.. FAQ ನಲ್ಲು ಹಾಕ್ಬೌದು.

ನನ್ನ ಬಹಳಶ್ಟು ಸ್ನೇಹಿತರಿಗೆ ತಿಳಿಸಬೇಕಾಗಿದೆ ಇದರ ಬಗ್ಗೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜನಸಾಮಾನ್ಯರು ಸತ್ತರೆ ದಹಿಸುವುದು ಸಾಮಾನ್ಯ. ಸ್ವಾಮಿಗಳನ್ನು ಸಮಾಧಿ ಮಾಡುತ್ತಾರೆ. ಸಿಗೋಣ, ಪವನಜ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

kela hiMdoo janaaMgagaLalli, satta ella vyaktigaLalli hooLuttaare. udaaharaNege, namma okkaliga janaaMgadalli ellarannoo hooLuttEve. dahanavu nammalli caaltiyallilla. vyaktige 'tonnu' ityaadi sOMku rOgagaLiddare, bahaLa aparoopavaagi suDuvuduMTu. itara hiMduLida vargagaLaada, kuruba, maDivaaLa modalaada janaaMgagaLalli, liMgaayitaralli hooLuvudE pracalita. idu bayalu seemeyalli bahaLa saamaanya eMbudu nanna anisike. EkeMdare, malenaaDinalliruva okkaligaralli, sattavarannu suDuttaare. haagaagi, vaidika dharmada prabhaava heccaagiruvalli maatra dahana paddhati kaMDu baruttade. uLidaMte hooLuvudE pracalita. ee samaadhigaLannu saamanyavaagi guDDe, samaadhi eMdu kareyuttaare. hiMde, samaadhi kaTTuvudu aShTu pracalitaviralilla, ittittalaagi samaadhigaLannu kaTTi, tuLasi neDuvudakke praaraMbhisiddaare.( hooLuvavaralli). (edit) ಕನ್ನಡ ಅವತರಣಿಕೆ ಹೀಗಿದೆ - ಕೆಲ ಹಿಂದೂ ಜನಾಂಗಗಳಲ್ಲಿ, ಸತ್ತ ಎಲ್ಲ ವ್ಯಕ್ತಿಗಳನ್ನು ಹೂಳುತ್ತಾರೆ. ಉದಾಹರಣೆಗೆ, ನಮ್ಮ ಒಕ್ಕಲಿಗ ಜನಾಂಗದಲ್ಲಿ ಎಲ್ಲರನ್ನೂ ಹೂಳುತ್ತೇವೆ. ದಹನವು ನಮ್ಮಲ್ಲಿ ಚಾಲ್ತಿಯಲ್ಲಿಲ್ಲ. ವ್ಯಕ್ತಿಗೆ 'ತೊನ್ನು' ಇತ್ಯಾದಿ ಸೋಂಕು ರೋಗಗಳಿದ್ದರೆ, ಬಹಳ ಅಪರೂಪವಾಗಿ ಸುಡುವುದುಂಟು. ಇತರ ಹಿಂದುಳಿದ ವರ್ಗಗಳಾದ, ಕುರುಬ, ಮಡಿವಾಳ ಮೊದಲಾದ ಜನಾಂಗಗಳಲ್ಲಿ, ಲಿಂಗಾಯಿತರಲ್ಲಿ ಹೂಳುವುದೇ ಪ್ರಚಲಿತ. ಇದು ಬಯಲು ಸೀಮೆಯಲ್ಲಿ ಬಹಳ ಸಾಮಾನ್ಯ ಎಂಬುದು ನನ್ನ ಅನಿಸಿಕೆ. ಏಕೆಂದರೆ, ಮಲೆನಾಡಿನಲ್ಲಿರುವ ಒಕ್ಕಲಿಗರಲ್ಲಿ, ಸತ್ತವರನ್ನು ಸುಡುತ್ತಾರೆ. ಹಾಗಾಗಿ, ವೈದಿಕ ಧರ್ಮದ ಪ್ರಭಾವ ಹೆಚ್ಚಾಗಿರುವಲ್ಲಿ ಮಾತ್ರ ದಹನ ಪದ್ಧತಿ ಕಂಡು ಬರುತ್ತದೆ. ಉಳಿದಂತೆ ಹೂಳುವುದೇ ಪ್ರಚಲಿತ. ಈ ಸಮಾಧಿಗಳನ್ನು ಸಾಮನ್ಯವಾಗಿ ಗುಡ್ಡೆ, ಸಮಾಧಿ ಎಂದು ಕರೆಯುತ್ತಾರೆ. ಹಿಂದೆ, ಸಮಾಧಿ ಕಟ್ಟುವುದು ಅಷ್ಟು ಪ್ರಚಲಿತವಿರಲಿಲ್ಲ, ಇತ್ತಿತ್ತಲಾಗಿ ಸಮಾಧಿಗಳನ್ನು ಕಟ್ಟಿ, ತುಳಸಿ ನೆಡುವುದಕ್ಕೆ ಪ್ರಾರಂಭಿಸಿದ್ದಾರೆ.( ಹೂಳುವವರಲ್ಲಿ).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೋಹಿತ್, ಸಾಧ್ಯವಾದಷ್ಟು ಕನ್ನಡ ಲಿಪಿಯಲ್ಲೆ ಬರೆಯಲು ಪ್ರಯತ್ನಿಸಿ. ನೀವು ವಿಂಡೋಸ್ ಉಪಯೋಗಿಸುತ್ತಿದ್ದರೆ ಬರಹ ಡೌನ್ಲೋಡ್ ಮಾಡಿ ಬರಹ ಡೈರೆಕ್ಟ್ ಉಪಯೋಗಿಸಿ. ಲಿನಕ್ಸ್ ಉಪಯೋಗಿಸುತ್ತಿದ್ದಲ್ಲಿ [kn:Wikipedia:Kannada_Support] ನೋಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

nannadu 98 PC. Unicode enter maaDalaaguttilla. haagaagi kaMglishnalli bardaddu.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯುನಿಕೋಡ್ ಓದಲಿಕ್ಕೆ ಹೇಗೆ ಆಗುತ್ತಿದೆ, ಮತ್ತೆ? ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

unicode font copy maaDikoMDirOdriMda Odalu saadhyavaaguttide. aadaaroo aksharagaLannu kUDisi Oduvudu bahaLa samaya hiDiyuttade.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೋಹಿತ್ ಅವರಿಗೆ ಸಹಾಯ ಮಾಡಲು ಇಂಗ್ಲೀಶಿನಲ್ಲಿ ಬರೆಯುತ್ತೇನೆ- If you already have IE (any version), fully uninstall it (backup your bookmarks, if you need them). Then install IE6 with Arabic support (adding Arabic support later on does not help many times, I dont know why). This will add the proper matching rendering engine (USP10.DLL file) for opentype fonts. After that you will not have the problem of glyphs not joining properly. Then you can try the IBM IME link given by me. Let me know the results. ಸಿಗೋಣ, ಪವನಜ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವನಜರವರೆ, ಧನ್ಯವಾದಗಳು. ೯೮ ನಲ್ಲೆ ಯುನಿಕೋಡ್ನಲ್ಲೆ ನೇರವಾಗಿ ಕನ್ನಡದಲ್ಲಿ ಟೈಪ್ ಮಾಡಲು ಸಾಧ್ಯವಾಗಿದೆ. ಆದರೆ ನೀವು ತಿಳಿಸಿದಂತೆ ಮಾಡಿದ ನಂತರವೂ ಫಾಂಟ್ಗಳು ಕಟ್ ಅಗ್ತಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮಲ್ಲಿ ಇರುವ ಕನ್ನಡ ಓಪನ್ ಟೈಪ್ ಫಾಂಟ್ ಯಾವುದು -ತುಂಗ, ಸಂಪಿಗೆ, ಮಲ್ಲಿಗೆ, ಕೇದಗೆ, Arial Unicode MS, JanaKannada??? ಸಂಪಿಗೆ, Arial Unicode MS, ಇತ್ಯಾದಿಗಳಲ್ಲಿ ಸ್ವಲ್ಪ ತೊಂದರೆ ಇದೆ. ಹೊಸ ತುಂಗ ಫಾಂಟ್ ಬಳಸಿ. ಅಗತ್ಯ ಇದ್ದರೆ ನನಗೆ (pavanaja at vishvakannada dot com) ವಿ-ಪತ್ರ ಕಳುಹಿಸಿ. ಸಿಗೋಣ, ಪವನಜ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮಿಂದ ಒಮ್ಮೆ ಪಡೆದಿದ್ದ ತುಂಗ ಫಾಂಟನ್ನೇ ಬಳಸುತ್ತಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವನಜರವರೆ, ಮನಃಪೂರ್ವಕ ಧನ್ಯವಾದಗಳು. ಈಗ ನನ್ನ ೯೮ ಪಿಸಿಯಲ್ಲಿ ನಾನು ಸರಾಗವಾಗಿ ಕನ್ನಡ ಯುನಿಕೋಡ್ ಓದಲು, ಟೈಪ್ ಮಾಡಲು ಸಾಧ್ಯವಾಗಿದೆ. ಹರಿಪ್ರಸಾದ್, ನನಗಂತೂ ೯೮ನಲ್ಲಿ ಕನ್ನಡ ಯುನಿಕೋಡ್ ಟೈಪ್ ಮಾಡಲು, ಓದಲು ರೋಮಾಂಚನವಾಗುತ್ತಿದೆ. ರೋಹಿತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೊಮ್ಮೆ ಅಭಿನಂದನೆಗಳು. ವಿನ್ ೯೮ ರಲ್ಲಿ ಕನ್ನಡ ಎನೇಬಲ್ ಮಾಡಿದ ಸಂಗತಿಯನ್ನು ಹಾಗೂ ಹೇಗೆ ಎನೇಬಲ್ ಮಾಡುವುದೆಂಬುದನ್ನು ಸಂಪದದ ನಿಮ್ಮ ಬ್ಲಾಗಿನಲ್ಲಿ ಬರೆಯಲು ಸಾಧ್ಯವೇ? ಬಹಳಷ್ಟು ಮಂದಿ ೯೮ ಉಪಯೋಗಿಸುತ್ತಿರುವುದರಿಂದ ಹಲವರಿಗೆ ಉಪಯೋಗವಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ವಿಷಯ ನೆನಪಿಟ್ಟುಕೊಳ್ಳಿ. ವಿಂಡೋಸ್ 98ರ ಎಲ್ಲ ತಂತ್ರಾಂಶಗಳಲ್ಲಿ ಐ.ಬಿ.ಎಂ.ನವರ ಸವಲತ್ತನ್ನು ಬಳಸಿ ಕನ್ನಡ ಯುನಿಕೋಡ್ ಬೆರಳಚ್ಚು ಸಾಧ್ಯವಿಲ್ಲ. IE ಬ್ರೌಸರ್‍ನಲ್ಲಿ ಕನ್ನಡದ ಓಪನ್ ಟೈಪ್ ಫಾಂಟ್‍ಗೆ ರೆಂಡರಿಂಗ್ ಇಂಜಿನ್ ಇರುವ ಕಾರಣ ಅದು ಕನ್ನಡದ ಪಠ್ಯವನ್ನು ಸರಿಯಾಗಿ ತೋರಿಸುತ್ತದೆ. ಐ.ಬಿ.ಎಂ.ನವರ ಸವಲತ್ತು ಕೇವಲ ಬೆರಳಚ್ಚಿಗೆ ಇರುವುದು. ಪಠ್ಯವನ್ನು ಸರಿಯಾಗಿ ತೋರಿಸುವುದು ಆಯಾ ತಂತ್ರಾಂಶದ ಕೆಲಸ. ಆದುದರಿಂದ IE ಗೆ ಮಾತ್ರ ಈ ಸವಲತ್ತು ಸದ್ಯಕ್ಕೆ ಉಪಯುಕ್ತ. ನಾನು Yudit ನಲ್ಲೂ ಪ್ರಯತ್ನಿಸಿ ಸೋತಿದ್ದೇನೆ. ಸಿಗೋಣ, ಪವನಜ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನ್ ೯೮ರಲ್ಲಿ ಯುನಿಕೋಡ್ ಕನ್ನಡ ಟೈಪ್ ಮಾಡಿದ್ದಕ್ಕೆ ರೋಹಿತ್ ರವರಿಗೆ ಅಭಿನಂದನೆಗಳು ;) ನಿಮ್ಮಂತೆಯೇ ಉಳಿದವರೂ ಯುನಿಕೋಡ್ ಬಳಸುವರೆಂದು ಆಶಿಸೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಂಡೋಸ್ 98 ರಲ್ಲಿ ಕನ್ನಡ ಯುನಿಕೋಡ್ ಬೆರಳಚ್ಚು ಮಾಡಲು ನೀವು ಐ.ಬಿ.ಎಂ.ನವರ ಸವಲತ್ತನ್ನು ಬಳಸಬಹುದು. ಅದು ದೊರೆಯುವ ತಾಣದ ವಿಳಾಸ - [:http://www.alphawork.... ನಿಮ್ಮ ಗಣಕದಲ್ಲಿ ಕನ್ನಡದ ಓಪನ್ ಟೈಪ್ ಫಾಂಟ್ ಇರತಕ್ಕದ್ದು. ನೀವು ಈಗಾಗಲೇ ಕನ್ನಡ ಯುನಿಕೋಡ್ ಲೇಖನಗಳನ್ನು ಓದುತ್ತಿರುವುದರಿಂದ ಅವು ನಿಮ್ಮಲ್ಲಿ ಇವೆಯೆಂದು ತೀರ್ಮಾನಿಸಬಹುದು. ಸಿಗೋಣ, ಪವನಜ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಂದೊಮ್ಮೆ ಐ.ಬಿ.ಎಂ.ನವರು PC-DOS 7.0 ಎಂಬ ಕಾರ್ಯಾಚರಣ ವ್ಯವಸ್ಥೆ (operating system) ಬಿಡುಗಡೆ ಮಾಡಿದ್ದರು (ಯಾರಿಗಾದರು ಇದು ಗೊತ್ತಿತ್ತೆ?). ಆ ಸಂದರ್ಭದಲ್ಲಿ ಕಂಪ್ಯೂಟರ್ ಸಂಬಂಧಿ ಪತ್ರಿಕೆಯೊಂದರಲ್ಲಿ ಇದರ ವಿಮರ್ಶೆ ಪ್ರಕಟವಾಗಿತ್ತು. ಆ ಲೇಖನದಲ್ಲಿ ಬಳಸಿದ ಒಂದು ಸಾಲು ನೆನಪಾಗುತ್ತಿದೆ - "Trust IBM to do this. Make a world class software and nobody notices that". ಸಿಗೋಣ, ಪವನಜ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಹನವು "ಎಲ್ಲ" ಹಿಂದೂಗಳ ಸಂಪ್ರದಾಯವಲ್ಲ. ವೀರಶೈವ ಮೊದಲಾದವರು, ಸಾಮಾನ್ಯರು ಮತ್ತು ಸ್ವಾಮಿಗಳು, ಶರೀರವನ್ನು ಸಮಾಧಿ ಮಾಡುವ ಸಂಪ್ರದಾಯವನ್ನೇ ಉಳಿಸಿಕೊಂಡಿದ್ದಾರೆ. ಸ್ಕಾಂದ, ಶಿವ ಪುರಾಣಗಳಲ್ಲಿ ವೃಂದಾ ಎಂಬಾಕೆ ಕಾಲನೇಮಿಯ ಮಗಳು, ಜಲಂಧರನ ಹೆಂಡತಿ, ಮಹಾಪತಿವ್ರತೆ. ಜಲಂಧರ ಒಮ್ಮೆ ಪಾರ್ವತಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದನಂತೆ. ನಂತರ ಶಿವನೊಡನೆ ಯುದ್ಧದಲ್ಲೂ ತೊಡಗಿದ್ದನಂತೆ. ವೃಂದೆಯ ಪಾವಿತ್ರ್ಯದ ಕಾರಣದಿಂದ ಶಿವ ಅವನನ್ನು ಗೆಲ್ಲಲಾಗಲಿಲ್ಲವಂತೆ. ಪಾರ್ವತಿಯು ವೃಂದೆಯ ಪಾತಿವ್ರತ್ಯವನ್ನು ಭಂಗಪಡಿಸುವಂತೆ ವಿಷ್ಣುವನ್ನು ಕೋರಿದಳೆಂದೂ, ವಿಷ್ಣು ಜಲಂಧರನ ರೂಪದಿಂದ ಹೋಗಿ ವೃಂದೆಯ ಪಾತಿವ್ರತ್ಯಕ್ಕೆ ಭಂಗ ತಂದನೆಂದೂ, ಜಲಂಧರ ಸತ್ತನೆಂದೂ ಕಥೆ. ರಾಕ್ಷಸನ ಹತ್ಯೆಗಾಗಿ ಬಲಿಯಾದ ಮುಗ್ಧ ಪತಿವ್ರತೆಗೆ ಪರಿಹಾರ ಎಂಬಂತೆ ಅವಳಿಗೆ ಪೂಜೆ ಸಲ್ಲುವ ವರ ಸಂದಿತು ಎಂಬುದು ಪುರಾಣಗಳ ಕಥೆ. ವೃಂದಾವನ ಹಾಗೆ ಪತಿವ್ರತೆಯರಿಗೆ ಪವಿತ್ರವಾದದ್ದು ಎಂಬ ನಂಬಿಕೆ ಬೆಳೆದಿದ್ದೀತು. ಏನಿದ್ದರೂ ಇದು ಪುರಾಣದ ಕಥೆ. ವೃಂದಾವನ ಎಂಬುದು ಪಾವಿತ್ರ್ಯದ ಸಂಕೇತವಾಗಿಯೇ ನಮ್ಮ ನಡುವೆ ಬೆಳೆದುಬಂದಿದೆ. ಆಧ್ಯಾತ್ಮಿಕ ಹಂಬಲದ ಕುರುಹು ಆಗಿದೆ. "ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು, ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು" ಎಂಬ ಅಡಿಗರ ಪದ್ಯ ನೆನಪಿಸಿಕೊಳ್ಳಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.