ಬೃಂದಾವನ ಅಂದರೆ ಏನು?

ಬೃಂದಾವನ ಅಂದರೆ ಏನು?

ನ್ನ ಬ್ಲಾಗ್ ನಲ್ಲಿ ಇಂದು ಏನು ಬರೆಯುವುದು ಎಂದು ಯೋಚಿಸುತ್ತಿದ್ದೆ. ಆಗ ನನ್ನ ಸ್ನೇಹಿತರೊಬ್ಬರು ಇಂದು ಬೃಂದಾವನಕ್ಕೆ (ಇದು ಇಲ್ಲಿಯ ಒಂದು ಹೊಟೆಲ್ ) ಹೋಗಿ ಬರುವ ಅಂದರು. ಆಗ ಯೋಚಿಸಿದೆ - ಈ ಬೃಂದಾವನ ಅಂದರೆ ಏನು? ಇದು ಕಾಬಾ, ದರ್ಗಾ, ಸಮಾಧಿ, ಗದ್ದುಗೆಗಳಂತೆಯೇ, ಅಲ್ಲವೇ. ಇದರ ಬಗ್ಗೆ ನನ್ನ ಅನಿಸಿಕೆ ಹೀಗಿದೆ. ನೋಡಿ, ಓದಿ, ತಪ್ಪುಗಳನ್ನು ತಿಳಿಸಿ, ನಾನೂ ತಿಳಿಯುವುದು ಬಹಳಷ್ಟಿದೆ.

ಬೃಂದಾವನ ಮತ್ತು ಮಠ ಕಟ್ಟುವ ಜಾಗ ವಾಸ್ತುವಿನ ಪ್ರಕಾರ ಉತ್ತಮ ಜಾಗ.
ಸ್ವಾಮಿಗಳು ದೇವರ ಅದೀನರಾದಾಗ ಈ ಜಾಗದಲ್ಲಿ ಒಂದು ಹಳ್ಳ ತೋಡಿ ಅಲ್ಲಿ ಮೊದಲಿಗೆ ಸಾಲಿಗ್ರಾಮ ಮತ್ತಿತರೇ ವಿಶೇಷ ಕಲ್ಲುಗಳನ್ನು ಇರಿಸಿ ನಂತರ ಆ ಮೃತ ಶರೀರವನ್ನು ಹಳ್ಳದೊಳಗೆ ಹಾಕಿ ಅದರ ಒಳಗೆ ಇಟ್ಟು ಅದರ ಮೇಲೆ ಮತ್ತೆ ಅಂತಹದೇ ವಿಶೇಷ ಕಲ್ಲುಗಳನ್ನು ಇರಿಸಿ ಮಣ್ಣು ಮುಚ್ಚಿ ಅದರ ಮೇಲೆ ತುಳಸಿ ಗಿಡವನ್ನು ನೆಡುವರು. ಇಲ್ಲಿ ಒಂದು ವಿಶೇಷತೆ ಅಂದ್ರೆ ಸಾಮಾನ್ಯವಾಗಿ ಆ ಮೃತರ ತಲೆಬುರುಡೆ ಒಡೆಯುವವರೆಗೂ ತಲೆಯ ಮೇಲೆ ತೆಂಗಿನಕಾಯಿಗಳನ್ನು ಒಡೆಯುವರು. ಯಾಕೆ ಅಂದ್ರೆ ಮನುಷ್ಯ ಜೀವ ತ್ಯಾಗ ಮಾಡುವಾಗ ಆತ್ಮ ಬೇರೆ ಬೇರೆ ರಂಧ್ರಗಳಿಂದ ಹೊರಗೆ ಹೋಗುವುದಂತೆ. ವ್ಯಕ್ತಿ ಸತ್ತಾಗ ವೀಕ್ಷಿಸಿ, ಕೆಲವರ ಬಾಯಿ ತೆರೆದಿರುತ್ತದೆ, ಕೆಲವರ ಕಣ್ಣು ತೆರೆದಿರುತ್ತದೆ, ಕೆಲವರಿಗೆ ಮಲ ಮೂತ್ರ ವಿಸರ್ಜನೆ, ಇತ್ಯಾದಿ ಆಗಿರುತ್ತದೆ. ಅಂದರೆ ಅವರ ಆತ್ಮ ಆ ರಂಧ್ಯಗಳ ಮೂಲಕ ಹೊರ ಹೋಗಿರುತ್ತದಂತೆ. ಧಾರ್ಮಿಕ ಶ್ರೇಷ್ಠರಿಗೆ ಈ ಆತ್ಮ ಬ್ರಹ್ಮರಂಧ್ರದ ಮೂಲಕ ಹೋಗುವುದಂತೆ. ಈ ಬ್ರಹ್ಮರಂಧ್ರ ಇರೋದು ತಲೆಯ ಮಧ್ಯ ಭಾಗದಲ್ಲಿ. ತಲೆಯ ಮಧ್ಯ ಭಾಗ ಒಡೆದಿರುತ್ತದೋ ಇಲ್ಲವೋ, ಅದರ ದ್ಯೋತಕವಾಗಿ ಈ ತೆಂಗಿನಕಾಯಿಗಳನ್ನು ಒಡೆದು ತಲೆಬುರುಡೆ ಸೀಳುವರು.

Rating
No votes yet

Comments