ಸ್ನೇಹಿತೆ.

ಸ್ನೇಹಿತೆ.

ಕವನ

 ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ನನ್ನ ಒಡನಾಡಿಯಾದೆ.
ಜಾತಿ ಭೇದವನು ತೊರೆದು
ಈ ಜೀವನ ಸಖಿಯಾದೆ.
ಸಿರಿತನ ಬಡತನದ ಹಂಗಿಲ್ಲ
ನಮ್ಮೀ ಸ್ನೇಹಕ್ಕೆ ಸಾಟಿಯಿಲ್ಲ.
ಗೆಳತಿ, ಮಿಡಿಯುತ್ತಿದೆ
ಈ ನನ್ನ ಹೃದಯ
ನಿನ್ನ ಸ್ನೇಹದ ಒಡಲಾಳದಲ್ಲಿ.
ಪ್ರಶಾಂತ ಅಲೆಗಳಾಗಿ
ಮನದ ದಡ ತಲುಪುತ್ತಿವೆ
ಸುಮಧುರ ನೆನಪುಗಳು.
ನಿನ್ನ ಹೆಸರೊಂದೇ ಸಾಕು
ನನ್ನ ಮನ ತಿಳಿಯಾಗಲು.
ಬಾ,ಬರೆಯೋಣ ನಾವಿಬ್ಬರು
ನವ ಸ್ನೇಹ ಚರಿತೆಯನ್ನು.
ಬೆಳಗೋಣ ಸ್ನೇಹವೆಂಬ
ಹಣತೆಯನ್ನು..
 

Comments