ಸಂಧ್ಯಾರಾಗ - ಮೌನರಾಗದೊಂದಿಗೆ ಮುಕ್ತಾಯ

ಸಂಧ್ಯಾರಾಗ - ಮೌನರಾಗದೊಂದಿಗೆ ಮುಕ್ತಾಯ

ಸಂಧ್ಯಾರಾಗ - ಮೌನರಾಗದೊಂದಿಗೆ ಮುಕ್ತಾಯ
ನಮಸ್ಕಾರ.
ನನ್ನ ಅಂಕಣದ ಮೊದಲ ಲೇಖನ. ಈ ಲೇಖನ ಒಂದು ಕಾದಂಬರಿಯ ಬಗ್ಗೆ ನನ್ನ ಅನಿಸಿಕೆಗಳು.
ಕಾದಂಬರಿಯ ಕರ್ತೃವಿನ ಬಗ್ಗೆ.
ಈ ಕಾದಂಬರಿಯನ್ನು ನನಗೆ ಓದಲು ಪ್ರೇರೇಪಿಸಿದ್ದು ಕರ್ನಾಟಕದ ಬರ್ನಾಡ್ ಶಾ ಎಂದೇ ಹೆಸರುವಾಸಿಯಾದ ಬೀChi ಯವರು. ವಾಸ್ತವ್ಯ್ಯದಲ್ಲಿ ಅವರು ನಮ್ಮೊಂದಿಗಿಲ್ಲದಿದ್ದರು ಅವರ ಹಾಸ್ಯಗಳು, ಅವರ ಹಾಸ್ಯ ಭಾಷಣದಿಂದ ಕೊಡುತ್ತಿದ್ದ ಅರ್ಥಗರ್ಭಿತವಾದ ಸಂದೇಶಗಳು ಇನ್ನೂ ನಮ್ಮೊಂದಿಗಿವೆ ಎಂದು ಭಾವಿಸುತ್ತೇನೆ. ನಾನು ಇವರ ಬಗ್ಗೆ ಈ ಅಂಕಣದಲ್ಲಿ ಹೇಳಲು ಇಷ್ಟಪಡುವುದಿಲ್ಲ.  ಇವರು ಕನ್ನಡವನ್ನು ನೀಚ ಭಾಷೆಎಂದು , ಆಂಗ್ಲವನ್ನು ಉಚ್ಹ ಭಾಷೆಎಂದು ಭಾವಿಸಿದ್ದ ಸಮಯದಲ್ಲಿ  ಅಕಸ್ಮಾತ್ತಾಗಿ ಓದಿದ ಕಾದಂಬರಿಯಿಂದ ಅವರು ಕನ್ನಡದ ಬರ್ನಾಡ್ ಶಾ ಎಂದೇ ಹೆಸರುವಾಸಿಯಾದರು. ಆ ಕಾದಂಬರಿಯ ಹೆಸರೆ ಸಂಧ್ಯಾರಾಗ.  ಬರೆದವರು ಅ. ನ. ಕೃ. (ಅರಕಲಗೂಡು ನರಸಿಂಹ ರಾವ್ ಕೃಷ್ಣ ರಾವ್)  ಇವರನ್ನು ಬೀಚಿ, ಅವರ ಗುರುಗಳೆಂದು ಭಾವಿಸುತ್ತಾರೆ. ಮುಂದೆ ಇವರೀರ್ವರ ಭೇಟಿಯಾಗುತ್ತದೆ ಮತ್ತು ಅದೇ ಗುರು - ಶಿಷ್ಯ ರ ಸಂಬಂಧವೂ ಮುಂದುವರೆಯುತ್ತದೆ. ಕನ್ನಡ ಕಂಡ ಕಣ್ಮಣಿಗಳಲ್ಲಿ ಇವೆರೀರ್ವರು ಇದ್ದಾರೆ ಎಂದರೆ ಉತ್ಪ್ರೇಕ್ಷೆಯಾಗಲಾರದು.

 

ಸಂಧ್ಯಾರಾಗದ ಜೊತೆ ನನ್ನ ಪಯಣ :
 
 ಇದನ್ನು ನಾನು ಬೀChi ಯವರ "ನನ್ನ ಭಯಾಗ್ರಫಿ" ಓದಿದಾಗಿನಿಂದಲೂ ಓದಲೂ ಕಾತುರದಿಂದ ಕಾಯುತ್ತಿದ್ದೆ. ಸಂಧ್ಯಾರಾಗ ಕಾದಂಬರಿಯ ಪ್ರತೀ ಸಿಕ್ಕಿರಲಿಲ್ಲ, ಕೊನೆಗೂ ಸಿಕ್ಕಿತು. ಆ ಪ್ರತಿಯೂ ಆಕಸ್ಮಿಕವಾಗಿಯೇ ಸಿಕ್ಕಿದ್ದು. ಮೊನ್ನೆ ನಾನು ಮತ್ತು ನನ್ನ ಸ್ನೇಹಿತ (ಭರತ) ರಘು ದಿಕ್ಷಿತ್ LIVE ಸಂಗೀತ ಕೇಳಲು ಡಿ.ವಿ. ಗುಂಡಪ್ಪ ರಸ್ತೆಗೆ ಹೋಗಿದ್ದೆವು. ನಿಜವಾಗಿಯೂ RD ಹಾಡುಗಳೂ ತುಂಬಾ ಚೆನ್ನಾಗಿತ್ತು, ನಂತರ ಯಥಾ ಪ್ರಕಾರ ನಾವಿಬ್ಬರೂ ಅಲ್ಲಿ ಇದ್ದ ತಿಂಡಿ ಮಳಿಗೆಗಳಿಗೆ ಭೇಟಿ ಕೊಟ್ವಿ, ನೋಡೋಕ್ಕೆ ಅಷ್ಟೊಂದು ಆಕರ್ಷಕವಾಗಿರಲಿಲ್ಲ. ಮನೆಗೆ ಹಿಂದುರುಗುವಾಗ ನನ್ನ ಕಣ್ಣನ್ನು ಆಕರ್ಷಿಸಿದ್ದು ಒಂದು ಮಳಿಗೆ ಅದೂ ಕನ್ನಡ ಪುಸ್ತಕಗಳ ಮಳಿಗೆ, ಹಾಗಾಗಿ ಹಾಗೇ ಒಂದು ಕಣ್ಣಾಡಿಸಿದೆ. ನನಗೆ ಬೇಕಾದ ಕಾದಂಬರಿ ಕೊನೆಗೂ ದೊರೆಯಿತು. ಕೊನೆಗೂ  ಸಂಧ್ಯಾರಾಗ ದೊರೆತದ್ದು ರಾಗಗಳ ಅಂಚಿನಲ್ಲೇ.
 
 ಮನೆಗೆ ತಲುಪಿದಾಗ ರಾತ್ರಿ ೧೧.೦೦. ಚಪಾತಿ - ಪಲ್ಲ್ಯ ತಿಂದು ನಾನು ಅಕ್ಕನ ಮನೆಗೆ ಹೋದೆ ಭರತ ಅವರ ಮನೆಗೆ ಹೋದ. ನಮ್ಮ ಅಕ್ಕನ ಹತ್ತಿರ "ಕಾಡು ಹರಟೆ" ಹೊಡೆದು ಸಂಧ್ಯಾರಾಗ ಓದಲು ಶುರು ಮಾಡಿದೆ.
ಮೊದಲು ಅದರಲ್ಲಿ ಇರುವ ಪಾತ್ರಗಳ ಪರಿಚಯ, ಹಾಗೆ ಕತೆ ಪ್ರಾರಂಭವಾಗುತ್ತೆ. ಒಂದು ಬ್ರಾಮ್ಹಣ ಕುಟುಂಬ, ಆದರೆ ಬಡ ಬ್ರಾಮ್ಹಣ ಕುಟುಂಬವಲ್ಲ ಆ ಊರಿಗೆ "ಕಷ್ಟಬಂದಾಗ ವೆಂಕಟರಮಣ" ನಾಗಿರುತ್ತಾನೆ ಈ ಮನೆಯ ಯಜಮಾನ. ಆಗಿನ ಕಾಲದಲ್ಲಿ ಬ್ರಾಮ್ಹಣ ಎಂದರೆ ಕಡು ಬಡವ ಅನ್ನುವ ಚಿತ್ರಣವಿಲ್ಲ ಇ ಕತೆಯಲ್ಲಿ. ನೀವು ಆಗಿನ ಯಾವುದೇ ಕಾದಂಬರಿ ಓದಿದರೂ ಆಗಿನ ಸಾಮಾಜಿಕ ಕಟ್ಟುಪಾಡುಗಳನ್ನು ಗ್ರಹಿಸಬಹುದು. (ಉದಾ : ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ಜಾತಿ ಭೇದ(ಇದು ಈಗಲೂ ಇದೇ)  
 
ಊರಿಗೇ ಆಲದ ಮರದಂತಿದ್ದ ಮನೆಯಲ್ಲಿ, ಇನ್ನೂ ರೆಂಬೆ ಕೊಂಬೆಗಳು ಇರಲಿಲ್ಲ. ಹೆಂಡತಿ, ತಾಯಿ ಮತ್ತು ಇನ್ನಿತರ ಹಿತೈಷಿಗಳ ಒತ್ತಾಯದ ಮೇಲೆ ಮನೆಯ ಯಜಮಾನ ಎರಡನೇ ಮದುವೆಯಾಗಲು ಒಪ್ಪುತ್ತಾನೆ. ಇಲ್ಲಿ ನನಗೆ ೨ ಸಂಗತಿಗಳು ಆಶ್ಚರ್ಯವೆನಿಸಿತು. ೧. ಈ ವಿಷಯವನ್ನು ಪ್ರಸ್ತಾಪಿಸಿದ್ದು ಯಜಮಾನನ ಮಡದಿಯೇ ೨. ಯಜಮಾನ ಒಪ್ಪದೇ  ಇದ್ದಾಗ ಸಂತೈಸಲು ಇತ್ತ ಸಮಜಾಯಿಷಿ ಮಾತ್ರ ನನಗೆ ಹುಚ್ಚು ಹಿಡಿಸಿತು, ಮಡದಿ ಹೇಳುತ್ತಾಳೆ , ನನಗೂ ವಯಸ್ಸಾಯಿತು ಇನ್ನ ಮಕ್ಕಳಾಗುವ ಸೂಚನೆ ಇಲ್ಲ ಅನ್ನಿಸುತ್ತದೆ, ಅದಕ್ಕೆ ದಯವಿಟ್ಟು ನೀವು ಮದುವೆ ಆಗಬೇಕು ನಮ್ಮ ವಂಶ ಉದ್ದಾರವಾಗುವುದು ನನ್ನಿಂದ ನಿಲ್ಲುವುದು ಬೇಡ ಅಂತ ಹೇಳುತ್ತಾಳೆ. ಈ ಮಾತನ್ನು ಹೇಳುವಾಗ ಅವಳ ವಯಸ್ಸು ೨೫.(ಅವಳು ಈ ಮಾತನ್ನು ಹೇಳೋದಕ್ಕೆ ಕಾರಣ ಬಾಲ್ಯ ವಿವಾಹ. ಇವಳಿಗೆ ೨೫ ತುಂಬುವ ಹೊತ್ತಿಗೆ ಇವಳು ಸಂಸಾರ ಸಾಗರದಲ್ಲಿ ೧೩ ವರ್ಷಾ ಕಳೆದಿರುತ್ತಾಳೆ). ನಂತರ ಅಕ್ಕ ತಂಗಿಯರಿಬ್ಬರೂ ತಲಾ ೨ ಮಕ್ಕಳನ್ನು ಹೆರುತ್ತಾರೆ.(ನಮಗೆ ಆಶ್ಚರ್ಯದ ಸಂಗತಿಯೇನಿಲ್ಲ)
 
ಇದರಲ್ಲಿ ನಿಜವಾಗಿಯೂ ಅ.ನ.ಕೃ. ಅವರ ಬರವಣಿಗೆಯ ಕೈಚಳಕ ತುಂಬಾ ಚೆನ್ನಾಗಿದೆ. ಓದುವವನು ಈ ಕಾದಂಬರಿ ಮುಗಿಯುವವರೆಗೂ, ಅದರ ಗುಂಗಿನಲ್ಲೇ ಇರುತ್ತಾನೆ ಅಷ್ಟು ಸೊಗಸಾಗಿ ಬರೆದಿದ್ದಾರೆ. ಕತೆ ಹಾಗೆ ಮುಂದುವರೆಯುತ್ತದೆ ಆ ನಾಲ್ಕು ಮಕ್ಕಳಲ್ಲಿ ಒಬ್ಬ ಓದಿ ವಕೀಲನಾಗುತ್ತಾನೆ, ಇನ್ನೊಬ್ಬ ಸಂಗೀತಗಾರುನಗುತ್ತಾನೆ, ಮತ್ತೊಬ್ಬ ಪತ್ರಕರ್ತನಾಗುತ್ತಾನೆ ಮಗಳು ಯಥಾ ಪ್ರಕಾರ ಒಲೆ ಊದುವುದಕ್ಕೆ ಗಂಡನ ಮನೆ ಸೇರುತ್ತಾಳೆ. ಇದಾದ ಮೇಲೆ ಆ ವಕೀಲನ ದರ್ಪ (because of his education & status) ಸಂಗೀತಗಾರನು ಅವನ ಗುರಿ ತಲುಪಲು ಪಡುವ ಕಷ್ಟಗಳ ಮೇಲೆಯೇ ಪೂರ್ಣ ಕತೆಯನ್ನು ಹೆಣೆದಿದ್ದಾರೆ ಕವಿವರ್ಯರು. ನಿಜವಾಗಿಯೂ ಅವರು "ಕಾದಂಬರಿಯ saarvabhaumare". ಕೊನೆಯಲ್ಲಿ ಸಂಗೀತಗಾರನು ಅವನ ಇಷ್ಟವಾದ ಹಾಗೂ ಅವನ ಗುರುಗಳಿಗೆ  ಕಾಣಿಕೆಎಂದು  ಒಪ್ಪಿಸ ಬೇಕಾದ ರಾಗವನ್ನು ಹೇಳುವಾಗ ಅವನು ಕೊನೆಯುಸಿರೆಳೆಯುತ್ತಾನೆ. ಹೀಗೆ ಸಂಧ್ಯಾರಾಗ - ಮುನರಾಗದೊಂದಿಗೆ ಮುಕ್ತಾಯ
  
ಈ ಕಾದಂಬರಿಯನ್ನಾಧರಿಸಿ ಸಂಧ್ಯಾರಾಗ ಚಿತ್ರವೂ ಮೂಡಿಬಂದಿದೆ. "ನಂಬಿದೆ ನಿನ್ನ ನಾದದೇವತೆಯೆ ಅಭಿಮಾನ ಕಳೆದ ತಾಯೆ ಭಾರತಿಯೇ ನಂಬಿದೆ ನಿನ್ನ ನಾದ ದೇವತೆಯೇ" .............. ಈ ಚಿತ್ರದ ಸುಪ್ಪ್ರಸಿದ್ದ ಹಾಡು ಹಾಗೂ ಇದನ್ನು ಹಾಡಿದವರು ಮತ್ತೊಬ್ಬ ಕನ್ನಡದ ಕಣ್ಮಣಿ ಪಂಡಿತ್ ಭೀಮಸೇನ್ ಜೋಷಿ.
 
ನಾನೂ ಓದಲು ಶುರು ಮಾಡಿದಾಗ ಮುಗಿಸಬೇಕು ಅಂತ ಶುರುಮಾಡಲಿಲ್ಲ, ಆದರೆ ನನಗೆ ತೂಕಡಿಕೆ ಬಂದಾಗ ಅದು ಕೊನೆಯ ಪುಟ, ಸಮಯ ೪.೪೦ ಬೆಳಗಿನಜಾವ, ನಿಜವಾಗಿಯೂ ಸ್ನೇಹಿತರೆ ಇದನ್ನು ಓದಲು ಮಾತ್ರ ಮರೆಯದಿರಿ.Hats off to the legend ಅ.ನ.ಕೃ and thanks to ಬೀChi  who made me to read this book.
 
ಚಿತ್ರ ಕೃಪೆ : http://kn.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Anakru.gif

Comments