ಸಂಧ್ಯಾರಾಗ - ಮೌನರಾಗದೊಂದಿಗೆ ಮುಕ್ತಾಯ

4.666665
ಸಂಧ್ಯಾರಾಗ - ಮೌನರಾಗದೊಂದಿಗೆ ಮುಕ್ತಾಯ
ನಮಸ್ಕಾರ.
ನನ್ನ ಅಂಕಣದ ಮೊದಲ ಲೇಖನ. ಈ ಲೇಖನ ಒಂದು ಕಾದಂಬರಿಯ ಬಗ್ಗೆ ನನ್ನ ಅನಿಸಿಕೆಗಳು.
ಕಾದಂಬರಿಯ ಕರ್ತೃವಿನ ಬಗ್ಗೆ.
ಈ ಕಾದಂಬರಿಯನ್ನು ನನಗೆ ಓದಲು ಪ್ರೇರೇಪಿಸಿದ್ದು ಕರ್ನಾಟಕದ ಬರ್ನಾಡ್ ಶಾ ಎಂದೇ ಹೆಸರುವಾಸಿಯಾದ ಬೀChi ಯವರು. ವಾಸ್ತವ್ಯ್ಯದಲ್ಲಿ ಅವರು ನಮ್ಮೊಂದಿಗಿಲ್ಲದಿದ್ದರು ಅವರ ಹಾಸ್ಯಗಳು, ಅವರ ಹಾಸ್ಯ ಭಾಷಣದಿಂದ ಕೊಡುತ್ತಿದ್ದ ಅರ್ಥಗರ್ಭಿತವಾದ ಸಂದೇಶಗಳು ಇನ್ನೂ ನಮ್ಮೊಂದಿಗಿವೆ ಎಂದು ಭಾವಿಸುತ್ತೇನೆ. ನಾನು ಇವರ ಬಗ್ಗೆ ಈ ಅಂಕಣದಲ್ಲಿ ಹೇಳಲು ಇಷ್ಟಪಡುವುದಿಲ್ಲ.  ಇವರು ಕನ್ನಡವನ್ನು ನೀಚ ಭಾಷೆಎಂದು , ಆಂಗ್ಲವನ್ನು ಉಚ್ಹ ಭಾಷೆಎಂದು ಭಾವಿಸಿದ್ದ ಸಮಯದಲ್ಲಿ  ಅಕಸ್ಮಾತ್ತಾಗಿ ಓದಿದ ಕಾದಂಬರಿಯಿಂದ ಅವರು ಕನ್ನಡದ ಬರ್ನಾಡ್ ಶಾ ಎಂದೇ ಹೆಸರುವಾಸಿಯಾದರು. ಆ ಕಾದಂಬರಿಯ ಹೆಸರೆ ಸಂಧ್ಯಾರಾಗ.  ಬರೆದವರು ಅ. ನ. ಕೃ. (ಅರಕಲಗೂಡು ನರಸಿಂಹ ರಾವ್ ಕೃಷ್ಣ ರಾವ್)  ಇವರನ್ನು ಬೀಚಿ, ಅವರ ಗುರುಗಳೆಂದು ಭಾವಿಸುತ್ತಾರೆ. ಮುಂದೆ ಇವರೀರ್ವರ ಭೇಟಿಯಾಗುತ್ತದೆ ಮತ್ತು ಅದೇ ಗುರು - ಶಿಷ್ಯ ರ ಸಂಬಂಧವೂ ಮುಂದುವರೆಯುತ್ತದೆ. ಕನ್ನಡ ಕಂಡ ಕಣ್ಮಣಿಗಳಲ್ಲಿ ಇವೆರೀರ್ವರು ಇದ್ದಾರೆ ಎಂದರೆ ಉತ್ಪ್ರೇಕ್ಷೆಯಾಗಲಾರದು.

 

ಸಂಧ್ಯಾರಾಗದ ಜೊತೆ ನನ್ನ ಪಯಣ :
 
 ಇದನ್ನು ನಾನು ಬೀChi ಯವರ "ನನ್ನ ಭಯಾಗ್ರಫಿ" ಓದಿದಾಗಿನಿಂದಲೂ ಓದಲೂ ಕಾತುರದಿಂದ ಕಾಯುತ್ತಿದ್ದೆ. ಸಂಧ್ಯಾರಾಗ ಕಾದಂಬರಿಯ ಪ್ರತೀ ಸಿಕ್ಕಿರಲಿಲ್ಲ, ಕೊನೆಗೂ ಸಿಕ್ಕಿತು. ಆ ಪ್ರತಿಯೂ ಆಕಸ್ಮಿಕವಾಗಿಯೇ ಸಿಕ್ಕಿದ್ದು. ಮೊನ್ನೆ ನಾನು ಮತ್ತು ನನ್ನ ಸ್ನೇಹಿತ (ಭರತ) ರಘು ದಿಕ್ಷಿತ್ LIVE ಸಂಗೀತ ಕೇಳಲು ಡಿ.ವಿ. ಗುಂಡಪ್ಪ ರಸ್ತೆಗೆ ಹೋಗಿದ್ದೆವು. ನಿಜವಾಗಿಯೂ RD ಹಾಡುಗಳೂ ತುಂಬಾ ಚೆನ್ನಾಗಿತ್ತು, ನಂತರ ಯಥಾ ಪ್ರಕಾರ ನಾವಿಬ್ಬರೂ ಅಲ್ಲಿ ಇದ್ದ ತಿಂಡಿ ಮಳಿಗೆಗಳಿಗೆ ಭೇಟಿ ಕೊಟ್ವಿ, ನೋಡೋಕ್ಕೆ ಅಷ್ಟೊಂದು ಆಕರ್ಷಕವಾಗಿರಲಿಲ್ಲ. ಮನೆಗೆ ಹಿಂದುರುಗುವಾಗ ನನ್ನ ಕಣ್ಣನ್ನು ಆಕರ್ಷಿಸಿದ್ದು ಒಂದು ಮಳಿಗೆ ಅದೂ ಕನ್ನಡ ಪುಸ್ತಕಗಳ ಮಳಿಗೆ, ಹಾಗಾಗಿ ಹಾಗೇ ಒಂದು ಕಣ್ಣಾಡಿಸಿದೆ. ನನಗೆ ಬೇಕಾದ ಕಾದಂಬರಿ ಕೊನೆಗೂ ದೊರೆಯಿತು. ಕೊನೆಗೂ  ಸಂಧ್ಯಾರಾಗ ದೊರೆತದ್ದು ರಾಗಗಳ ಅಂಚಿನಲ್ಲೇ.
 
 ಮನೆಗೆ ತಲುಪಿದಾಗ ರಾತ್ರಿ ೧೧.೦೦. ಚಪಾತಿ - ಪಲ್ಲ್ಯ ತಿಂದು ನಾನು ಅಕ್ಕನ ಮನೆಗೆ ಹೋದೆ ಭರತ ಅವರ ಮನೆಗೆ ಹೋದ. ನಮ್ಮ ಅಕ್ಕನ ಹತ್ತಿರ "ಕಾಡು ಹರಟೆ" ಹೊಡೆದು ಸಂಧ್ಯಾರಾಗ ಓದಲು ಶುರು ಮಾಡಿದೆ.
ಮೊದಲು ಅದರಲ್ಲಿ ಇರುವ ಪಾತ್ರಗಳ ಪರಿಚಯ, ಹಾಗೆ ಕತೆ ಪ್ರಾರಂಭವಾಗುತ್ತೆ. ಒಂದು ಬ್ರಾಮ್ಹಣ ಕುಟುಂಬ, ಆದರೆ ಬಡ ಬ್ರಾಮ್ಹಣ ಕುಟುಂಬವಲ್ಲ ಆ ಊರಿಗೆ "ಕಷ್ಟಬಂದಾಗ ವೆಂಕಟರಮಣ" ನಾಗಿರುತ್ತಾನೆ ಈ ಮನೆಯ ಯಜಮಾನ. ಆಗಿನ ಕಾಲದಲ್ಲಿ ಬ್ರಾಮ್ಹಣ ಎಂದರೆ ಕಡು ಬಡವ ಅನ್ನುವ ಚಿತ್ರಣವಿಲ್ಲ ಇ ಕತೆಯಲ್ಲಿ. ನೀವು ಆಗಿನ ಯಾವುದೇ ಕಾದಂಬರಿ ಓದಿದರೂ ಆಗಿನ ಸಾಮಾಜಿಕ ಕಟ್ಟುಪಾಡುಗಳನ್ನು ಗ್ರಹಿಸಬಹುದು. (ಉದಾ : ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ಜಾತಿ ಭೇದ(ಇದು ಈಗಲೂ ಇದೇ)  
 
ಊರಿಗೇ ಆಲದ ಮರದಂತಿದ್ದ ಮನೆಯಲ್ಲಿ, ಇನ್ನೂ ರೆಂಬೆ ಕೊಂಬೆಗಳು ಇರಲಿಲ್ಲ. ಹೆಂಡತಿ, ತಾಯಿ ಮತ್ತು ಇನ್ನಿತರ ಹಿತೈಷಿಗಳ ಒತ್ತಾಯದ ಮೇಲೆ ಮನೆಯ ಯಜಮಾನ ಎರಡನೇ ಮದುವೆಯಾಗಲು ಒಪ್ಪುತ್ತಾನೆ. ಇಲ್ಲಿ ನನಗೆ ೨ ಸಂಗತಿಗಳು ಆಶ್ಚರ್ಯವೆನಿಸಿತು. ೧. ಈ ವಿಷಯವನ್ನು ಪ್ರಸ್ತಾಪಿಸಿದ್ದು ಯಜಮಾನನ ಮಡದಿಯೇ ೨. ಯಜಮಾನ ಒಪ್ಪದೇ  ಇದ್ದಾಗ ಸಂತೈಸಲು ಇತ್ತ ಸಮಜಾಯಿಷಿ ಮಾತ್ರ ನನಗೆ ಹುಚ್ಚು ಹಿಡಿಸಿತು, ಮಡದಿ ಹೇಳುತ್ತಾಳೆ , ನನಗೂ ವಯಸ್ಸಾಯಿತು ಇನ್ನ ಮಕ್ಕಳಾಗುವ ಸೂಚನೆ ಇಲ್ಲ ಅನ್ನಿಸುತ್ತದೆ, ಅದಕ್ಕೆ ದಯವಿಟ್ಟು ನೀವು ಮದುವೆ ಆಗಬೇಕು ನಮ್ಮ ವಂಶ ಉದ್ದಾರವಾಗುವುದು ನನ್ನಿಂದ ನಿಲ್ಲುವುದು ಬೇಡ ಅಂತ ಹೇಳುತ್ತಾಳೆ. ಈ ಮಾತನ್ನು ಹೇಳುವಾಗ ಅವಳ ವಯಸ್ಸು ೨೫.(ಅವಳು ಈ ಮಾತನ್ನು ಹೇಳೋದಕ್ಕೆ ಕಾರಣ ಬಾಲ್ಯ ವಿವಾಹ. ಇವಳಿಗೆ ೨೫ ತುಂಬುವ ಹೊತ್ತಿಗೆ ಇವಳು ಸಂಸಾರ ಸಾಗರದಲ್ಲಿ ೧೩ ವರ್ಷಾ ಕಳೆದಿರುತ್ತಾಳೆ). ನಂತರ ಅಕ್ಕ ತಂಗಿಯರಿಬ್ಬರೂ ತಲಾ ೨ ಮಕ್ಕಳನ್ನು ಹೆರುತ್ತಾರೆ.(ನಮಗೆ ಆಶ್ಚರ್ಯದ ಸಂಗತಿಯೇನಿಲ್ಲ)
 
ಇದರಲ್ಲಿ ನಿಜವಾಗಿಯೂ ಅ.ನ.ಕೃ. ಅವರ ಬರವಣಿಗೆಯ ಕೈಚಳಕ ತುಂಬಾ ಚೆನ್ನಾಗಿದೆ. ಓದುವವನು ಈ ಕಾದಂಬರಿ ಮುಗಿಯುವವರೆಗೂ, ಅದರ ಗುಂಗಿನಲ್ಲೇ ಇರುತ್ತಾನೆ ಅಷ್ಟು ಸೊಗಸಾಗಿ ಬರೆದಿದ್ದಾರೆ. ಕತೆ ಹಾಗೆ ಮುಂದುವರೆಯುತ್ತದೆ ಆ ನಾಲ್ಕು ಮಕ್ಕಳಲ್ಲಿ ಒಬ್ಬ ಓದಿ ವಕೀಲನಾಗುತ್ತಾನೆ, ಇನ್ನೊಬ್ಬ ಸಂಗೀತಗಾರುನಗುತ್ತಾನೆ, ಮತ್ತೊಬ್ಬ ಪತ್ರಕರ್ತನಾಗುತ್ತಾನೆ ಮಗಳು ಯಥಾ ಪ್ರಕಾರ ಒಲೆ ಊದುವುದಕ್ಕೆ ಗಂಡನ ಮನೆ ಸೇರುತ್ತಾಳೆ. ಇದಾದ ಮೇಲೆ ಆ ವಕೀಲನ ದರ್ಪ (because of his education & status) ಸಂಗೀತಗಾರನು ಅವನ ಗುರಿ ತಲುಪಲು ಪಡುವ ಕಷ್ಟಗಳ ಮೇಲೆಯೇ ಪೂರ್ಣ ಕತೆಯನ್ನು ಹೆಣೆದಿದ್ದಾರೆ ಕವಿವರ್ಯರು. ನಿಜವಾಗಿಯೂ ಅವರು "ಕಾದಂಬರಿಯ saarvabhaumare". ಕೊನೆಯಲ್ಲಿ ಸಂಗೀತಗಾರನು ಅವನ ಇಷ್ಟವಾದ ಹಾಗೂ ಅವನ ಗುರುಗಳಿಗೆ  ಕಾಣಿಕೆಎಂದು  ಒಪ್ಪಿಸ ಬೇಕಾದ ರಾಗವನ್ನು ಹೇಳುವಾಗ ಅವನು ಕೊನೆಯುಸಿರೆಳೆಯುತ್ತಾನೆ. ಹೀಗೆ ಸಂಧ್ಯಾರಾಗ - ಮುನರಾಗದೊಂದಿಗೆ ಮುಕ್ತಾಯ
  
ಈ ಕಾದಂಬರಿಯನ್ನಾಧರಿಸಿ ಸಂಧ್ಯಾರಾಗ ಚಿತ್ರವೂ ಮೂಡಿಬಂದಿದೆ. "ನಂಬಿದೆ ನಿನ್ನ ನಾದದೇವತೆಯೆ ಅಭಿಮಾನ ಕಳೆದ ತಾಯೆ ಭಾರತಿಯೇ ನಂಬಿದೆ ನಿನ್ನ ನಾದ ದೇವತೆಯೇ" .............. ಈ ಚಿತ್ರದ ಸುಪ್ಪ್ರಸಿದ್ದ ಹಾಡು ಹಾಗೂ ಇದನ್ನು ಹಾಡಿದವರು ಮತ್ತೊಬ್ಬ ಕನ್ನಡದ ಕಣ್ಮಣಿ ಪಂಡಿತ್ ಭೀಮಸೇನ್ ಜೋಷಿ.
 
ನಾನೂ ಓದಲು ಶುರು ಮಾಡಿದಾಗ ಮುಗಿಸಬೇಕು ಅಂತ ಶುರುಮಾಡಲಿಲ್ಲ, ಆದರೆ ನನಗೆ ತೂಕಡಿಕೆ ಬಂದಾಗ ಅದು ಕೊನೆಯ ಪುಟ, ಸಮಯ ೪.೪೦ ಬೆಳಗಿನಜಾವ, ನಿಜವಾಗಿಯೂ ಸ್ನೇಹಿತರೆ ಇದನ್ನು ಓದಲು ಮಾತ್ರ ಮರೆಯದಿರಿ.Hats off to the legend ಅ.ನ.ಕೃ and thanks to ಬೀChi  who made me to read this book.
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಂಧ್ಯಾರಾಗ ಸಿನಿಮಾ ನೋಡಿದ್ದೇನೆ, ನೀವು ಬರೆದಿದ್ದನ್ನು ಓದಿದಮೇಲೆ ನನಗೂ ಓದಬೇಕೆನಿಸುತ್ತಿದೆ, ಹಾಗೆಯೆ ಮಾಡುತ್ತೇನೆ. -ಧನ್ಯವಾದಗಳು -ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಾಮು ಅವರೆ ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲೇಖನ ಚೆನ್ನಾಗಿ ಮೂಡಿಬಂದಿದೆ, ಅಭಿನಂದನೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ಸುಮಾ ಅವರೆ, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬರಹ ತಂತ್ರಾಂಶದ ಜೊತೆಗೆ ಒಂದು ಪುಟವನ್ನೇ ಅ.ನ.ಕೃ. ರವರ ಬಗೆಗೆ ಅದನ್ನು ರೂಪಿಸಿದ ರೂವಾರಿಗಳಾದ ವಾಸುರವರು ಮೀಸಲಿರಿಸಿದ್ದಾರೆ. ಅದನ್ನು ಓದಿದ ಮೇಲೆ ಕನ್ನಡ ನಾಡು-ನುಡಿಗೆ ಅನುಪಮ ಸೇವೆ ಸಲ್ಲಿಸಿದ ಅ.ನ. ಕೃಷ್ಣರಾಯರ ಬಗ್ಗೆ ಗೌರವ ಮೂಡಿದ್ದಷ್ಟೇ ಅಲ್ಲಾ, ಕನ್ನಡದ ಬಗ್ಗೆ ನನಗಿದ್ದ ಅಭಿಮಾನ ಇನ್ನೂ ಹೆಚ್ಚಾಯಿತು. ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಗಳು ಸೇರಿಮಾಡಲಾರದ ಕಾರ್ಯವನ್ನು ಅವರೊಬ್ಬರೇ ತಮ್ಮ ಜೀವಿತ ಕಾಲದಲ್ಲಿ ಮಾಡಿದ್ದು ಬಹುದೊಡ್ಡ ಸಾಧನೆ ಮತ್ತು ಬೀchiಯಂಥಹ ಮಹಾನ್ ಲೇಖಕರಿಗೆ ಸ್ಪೂರ್ತಿದಾಯಕರಾಗಿದ್ದರೆಂದರೆ ಅದು ನಿಜಕ್ಕೂ ಅದ್ಬುತ. ಅವರನ್ನು ಮತ್ತೊಮ್ಮೆ ನೆನಪು ಮಾಡಿಕೊಡುವ ಅವಕಾಶ ಒದಗಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+೧ ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ಶ್ರೀಧರ್, ನನಗೂ ಅ.ನ.ಕೃ ರವರ ಬಗ್ಗೆ ತುಂಬಾ ತಿಳಿದಿರಲಿಲ್ಲ, ಬೀChi ಯವರ "ನನ್ನ ಭಯಾಗ್ರಫಿ" ಓದುವಾಗ ತಿಳಿದು ಬಂತು, ಹಾಗಾಗಿ ನನಗೂ ಕುತೂಹಲ ಬಂದು ಓದಿದೆ ನಿಮಗೆ ಓದುವ ಹವ್ಯಾಸವಿದ್ದರೆ ಸಮಯ ಸಿಕ್ಕಾಗ ಓದಿ ತುಂಬಾ ಚೆನ್ನಾಗಿದೆ. ಬೀಚಿ ಯವರು ಹೇಳುವ ಪ್ರಕಾರ ಇದು ಅ.ನ.ಕೃರವರ ಜೀವನಕ್ಕೆ ತುಂಬಾ ಹೋಲುತ್ತದೆ.(this might be his autobiography).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಾರ್ಗವ ರವರು ಅನಕೃ ರವರ ' ಸಂಧ್ಯಾರಾಗ ' ಕಾದಂಬರಿಯನ್ನು ಕುರಿತು ಮಾಡಿದ ವಿಶ್ಲೇಷಣೆಯನ್ನು ಓದಿದೆ, ಸಂತೋಷವಾಯಿತು. ಅನಕೃ ರವರ ಶ್ರೇಷ್ಟ ಕಾದಂಬರಿಗಳಲ್ಲಿ ಇದೂ ಒಂದು.ಅವರು ವೇಶ್ಯಾವಾಟಿಕೆಯ ಕುರಿತು ಒಂದು ಕಾದಂಬರಿಯನ್ನು ಬರೆದಿದ್ದಾರೆ. ಅದಕ್ಕೆ ಅವರು ಬರೆದ ಮುನ್ನುಡಿಯಲ್ಲಿ ವೇಶ್ಯಾವಾಟಿಕೆ ಕುರಿತಂತೆ ಪಾಶ್ಚಾತ್ಯ ಲೇಖಕರ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಅದನ್ನು ಓದುವುದೆ ಒಂದು ಸೊಗಸು. ಇದು ಅವರು ಒಂದು ವಿಷಯ ಕುರಿತು ಬರೆಯುವಾಗ ಎಲ್ಲೆಡೆಗಳಿಂದಲೂ ವಿಷಯ ಸಂಗ್ರಹಿಸುವ ತಾದ್ಯಾತ್ಮತೆಯನ್ನು ತೋರಿಸುತ್ತದೆ.ಲೇಖಕರು ಹೇಳುವಂತೆ ಅನಕೃ ಕನ್ನಡದ ಬರ್ನಾರ್ಡ ಶಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಲೇಖಕರು ಬ್ರಾಮ್ಮಣ ಎಂದು ಕೆಲವು ಕಡೆಗೆ ಬರೆದಿದ್ದಾರೆ. ನಿಜಕ್ಕೂ ಅದನ್ನು ಬ್ರಾಹ್ಮಣ ಎಂದು ಬರೆಯಬೇಕು ಎಂಬುದು ನನ್ನ ಅನಿಸಿಕೆ. ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ ನಮಸ್ಕಾರ. ನಿಮ್ಮ ವಿಮರ್ಶೆಗೆ ಧನ್ಯವಾದಗಳು. ನಿಮ್ಮ ಅನಿಸಿಕೆ ಸರಿಯಾಗಿಯೇ ಇದೇ. ಅದು ಬ್ರಾಹ್ಮಣ. ನಾನು ಮತ್ತೊಮ್ಮೆ ನನ್ನ ಲೇಖನ ಓದಿದೆ ಇನ್ನೂ ೪ ತಪ್ಪುಗಳು ಸಿಕ್ಕಿವೆ, ಧನ್ಯವಾದಗಳು. ನಿಮ್ಮಲ್ಲಿ ಇನ್ನೊಂದು ಬಿನ್ನಹ ವೇಶ್ಯಾವಾಟಿಕೆಯ ಬಗ್ಗೆ ಅ.ನ.ಕೃ.ಅವರು ಬರೆದಿರುವ ಕಾದಂಬರಿಯ ಹೆಸರು ತಿಳಿಸುತ್ತೀರಾ? ಕರ್ನಾಟಕದ ಬರ್ನಾಡ್ ಶಾ - ಬೀChi ಕಾದಂಬರಿಯ ಸಾರ್ವಭೌಮ‌ - ಅ.ನ.ಕೃ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬೀchiಯವರನ್ನು ಕರ್ನಾಟಕದ ಬರ್ನಾರ್ಡ್ ಶಾ ಎಂದು ಗುರುತಿಸುತ್ತಿದ್ದಾರೆಯೇ? ನನ್ಗಿದು ಗೊತ್ತೇ ಇರಲಿಲ್ಲ. ಎಲ್ಲಿಂದೆಲ್ಲಿಯ ಹೋಲಿಕೆ! ಅ ನ ಕೃ ಅವರು ವೇಶ್ಯಾ ಸಮಸ್ಯೆಯ ಬಗ್ಗೆ (ವೇಶ್ಯಾವಾಟಿಕೆಯ ಬಗ್ಗೆ ಅಲ್ಲ, please)ಒಂದಲ್ಲ; ನನ್ನ ನೆನಪಿನಂತೆ ಆರು ಕಾದಂಬರಿಗಳಿವೆ: ನಗ್ನ ಸತ್ಯ, ಶನಿಸಂತಾನ, ಸಂಜೆಗತ್ತಲು, ಅಪರಂಜಿ, ಕಳಂಕಿನಿ ಮತ್ತು ಕಬ್ಬಿಣದ ಕಾಗೆ. ಅಂದ ಹಾಗೆ, ಹೀಗೇ ಸುಮ್ಮನೆ ಗೊತ್ತಿರಲೀ, ಅಂತ: ಅ ನ ಕೃ ಅವರ ಈ ಮೇಲಿನ ಚಿತ್ರವನ್ನು ರಚಿಸಿದವರು KBK, ಅಂದರೆ ಕೆ ಬಿ ಕುಲಕರ್ಣಿಯವರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>ಬೀchiಯವರನ್ನು ಕರ್ನಾಟಕದ ಬರ್ನಾರ್ಡ್ ಶಾ ಎಂದು ಗುರುತಿಸುತ್ತಿದ್ದಾರೆಯೇ? ನನ್ಗಿದು ಗೊತ್ತೇ ಇರಲಿಲ್ಲ. ಎಲ್ಲಿಂದೆಲ್ಲಿಯ ಹೋಲಿಕೆ!>> ನನಗೂ ಆ ಬಗ್ಗೆ ಸ೦ದೇಹವಿದೆ.. ಎಲ್ಲೆ೦ದೆಲ್ಲಿಯ ಹೋಲಿಕೆ ಎ೦ದು!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ಪ್ರಭುರವರೆ ಕಾದಂಬರಿಗಳ ಹೆಸರುಗಳಿಗೆ ಧನ್ಯವಾದಗಳು. ಆ ಚಿತ್ರವನ್ನು ನಾನು ಹಾಕಿರಲಿಲ್ಲ. ಅದು ಯಾರು ಹಾಕಿದ್ದರೆ ಅನ್ನುವುದು ನಂಗೆ ಗೊತ್ತಿಲ್ಲ. ಆದರೆ ಅದನ್ನು ಇಲ್ಲಿ ಹಾಕಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಾರ್ಗವರವರೆ ವಂದನೆಗಳು ನಿಮ್ಮ ಲೇಖನದ ಬಗ್ಗೆ ನಾನು ಬರೆದ ಪ್ರತಿಕ್ರಿಯಗೆ ನೀವು ಉತ್ತರಿಸಿದ್ದುದನ್ನು ಓದಿದೆ, ಹಾಗೂ ನನ್ನ ಪ್ರತಿಕ್ರಿಯೆಯಲ್ಲಿಯ ದೋಷಗಳನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು. ನಾನು ಅನಕೃ ರವರ ಕೃತಿಗಳನ್ನು ಓದಿದ್ದು 1962 ರಿಂದ 1969 ರ ಅವಧಿಯಲ್ಲಿ. ಅವರು ವೇಶ್ಯಾವೃತ್ತಿ ಕುರಿತಂತೆ ಬರೆದ ಕಾದಂಬರಿಗಳ ಪೈಕಿ ನನಗೆ ನೆನಪಿರುವ ಪುಸ್ತಕಗಳ ಹೆಸರುಗಳು ಎರಡು' ತಾಯಿಯ ಕರುಳು ' ಮತ್ತು ' ನಗ್ನ ಸತ್ಯ ' , ಇನ್ನೂ ಕೆಲ ಕಾದಂಬರಿಗಳಿವೆ ನನಗೆ ಅವುಗಳ ಹೆಸರು ನೆನಪಿಗೆ ಬರುತ್ತಿಲ್ಲ ಕ್ಷಮೆಇರಲಿ. ಅವರು ನೃತ್ಯಗಾತಿಯ ಬದುಕನ್ನು ಆಧಾರವಾಗಿಟ್ಟುಕೊಂಡು ' ಏಣಾಕ್ಷಿ ' ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಅದು ಸಹ ಚೆನ್ನಾಗಿದೆ. ನಿಮ್ಮ ಓದುವ ಹವ್ಯಾಸ ನನಗೆ ಹಿಡಿಸಿದೆ. ಪುಸ್ತಕಗಳಂತಹ ಸ್ನೇಹಿತ ಮತ್ತೊಬ್ಬನಿಲ್ಲ. ಓದು ನಮ್ಮನ್ನು ಅವ್ಯಕ್ತ ಲೋಕಕ್ಕೆ ಎಳೆದೊಯ್ಯುತ್ತದೆ. ಇತ್ತೀಚೆಗೆ ಮತ್ತೇನು ಓದಿದ್ದೀರಿ ? ಅನಭವಗಳನ್ನು ಹಂಚಿಕೊಳ್ಳಿ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.