ಚಲೋ ಮಲ್ಲೇಶ್ವರ ೧೨

ಚಲೋ ಮಲ್ಲೇಶ್ವರ ೧೨

ಎಲ್ಲರೂ ಹೆಗ್ಡೆಯವರ ಸಮೀಪ ಹೋಗುತ್ತಿರುವಾಗ, ರಾಮ್‌ಮೋಹನರು ತಿರುಗಿ ಕಾರಿನ ಬಳಿ ಹೊರಟರು-"ತುಂಬಾ ತಡವಾಯಿತು. ಆರ್.ಟಿ.ನಗರಕ್ಕೆ ಹೋಗಲೇ ಬೇಕು. ನಾನಿನ್ನು ಬರ್ತೀನಿ".


"ನಾಯಿ ಕಾಟ ಮರೆತುಹೋಯಿತಾ? ಇದು ನಮ್ಮ ಗೋಪೀನಾಥರ ಏರಿಯಾ ಗೊತ್ತಿದೆಯಾ? ಈ ನಾಯಿಗಳೆಲ್ಲಾ ಅವರ ನಾಯಿ ಲೂಯಿಯ  ಗೆಳೆಯರು. ನಾವು ಈಗ ಅವರನ್ನು ಭೇಟಿಯಾಗಿಯೇ ಹೋಗಬೇಕು. ಬೇಕಿದ್ದರೆ ನಿಮ್ಮ ಕಾರಲ್ಲೇ ಹೋಗೋಣ. ಬಾರಪ್ಪ ಸತೀಶ ಕಾರು ಸ್ಟಾರ್ಟ್ ಮಾಡು" ಎಂದು ಹೇಳಿ, ರಾಮಮೋಹನರನ್ನು ಹಿಂದಿನ ಸೀಟಿಗೆ ತಳ್ಳಿ, ಪಕ್ಕದಲ್ಲಿ ಮಂಜಣ್ಣ ಕುಳಿತರು.ಅವರ ಪಕ್ಕದಲ್ಲಿ ಜಯ್ ಕುಳಿತನು. ಎದುರಿನ ಸೀಟಲ್ಲಿ ಸತೀಶ್ ಪಕ್ಕದಲ್ಲಿ ಚಿಕ್ಕು, ಗೋಪಾಲರು ಕುಳಿತರು. ಹೆಗ್ಡೆಯವರು ನೇರ ಕಾರಿನ ಮೇಲೆ ಹತ್ತಿ ಕುಳಿತರು!!


"ನಾನೂ??????"


"ಗಣೇಶಣ್ಣ, ಒಮ್ಮೆ ಕಾರು ಸ್ಟಾರ್ಟ್ ಮಾಡಿ ಬಂದು, ಹಿಂದಿನ ಸೀಟಲ್ಲಿ ಕುಳಿತುಕೊಳ್ಳಿ" ಅಂದ ಸತೀಶ್.


"NOOOOOOOO"ಕೋರಸ್ ಕೇಳಿತು. ಕಾರಿನ ಶಬ್ದವಿರಬಹುದು.......


ನಾನು ಕಾರಿನ ಮುಂದೆ ಬಂದು ಒಂದು ಕಿಕ್ ಕೊಟ್ಟೆ.........ಸ್ಟಾರ್ಟ್ ಆಗಲಿಲ್ಲ. ಹಿಂದೆ ಹೋಗಿ ಒದ್ದೆ..ಊಹೂಂ... ಈಗ ಪ್ರೆಸ್ಟೀಜ್ ಪ್ರಶ್ನೆ.. ಸತೀಶ್ ಒದ್ದಾಗ ಸ್ಟಾರ್ಟ್ ಆದ ಕಾರು ನಾನು ಒದ್ದಾಗ ಸ್ಟಾರ್ಟ್ ಆಗದಿದ್ದರೆ ಹೇಗೆ? ಹತ್ತು ಹೆಜ್ಜೆ ಹಿಂದೆ ಹೋಗಿ ಓಡಿ ಬಂದು ಒದ್ದೆ ನೋಡೀ.........


ಕಾರು.......................... ಕಾಣಿಸುತ್ತಲೇ ಇಲ್ಲಾ!!!!!!!!!!!


ಗಾಬರಿಯಾಯಿತು- ಪಕ್ಕದ ಅಂಗಡಿಗಳಿಗೆ ನುಗ್ಗಿ, ಪುನಃ ಪೋಲೀಸ್ ಸ್ಟೇಶನ್ ಸುತ್ತಬೇಕಾದೀತಾ ಎಂದು..; ನೋಡಿದರೆ ಎಲ್ಲಾ ಅಂಗಡಿಗಳೂ ಮಾಮೂಲಿನಂತೆ ಇದೆ! ಹಾಗಿದ್ದರೆ ಕಾರೂ??


ಆ ಸಮಯದಲ್ಲೇ ನನ್ನ ಮೊಬೈಲ್ ರಿಂಗ್ ಆಯಿತು-"ಗಣೇಶಣ್ಣ, ಈ ತರಹ ಒದಿಯೋದಾ!!?? ನಮ್ಮ ಕಾರು ಈಗ ೫೦೦ ಅಡಿ ಮೇಲಿಂದ ಹೋಗುತ್ತಿದೆ! ಏನು ಮಾಡುವುದು ಗೊತ್ತಾಗುತ್ತಿಲ್ಲ" ಅಂದ ಸತೀಶ.


"ಭಯ ಬೀಳಬೇಡ. ಸ್ಟೇರಿಂಗ್ ಗಟ್ಟಿ ಹಿಡಕೊಂಡು ನಾನು ಹೇಳಿದಂತೆ ಮಾಡು. ಅಂದಹಾಗೇ ಕಾರಿನೊಳಗಿನ ಪರಿಸ್ಥಿತಿ ಹೇಗಿದೆ?"


"ರಾಮಮೋಹನರು, ನನ್ನ ಕಾರು  ಹಾರುತ್ತಿದೆ- ಅನ್ನುತ್ತಾ ಕುಳಿತಲ್ಲೇ ಕುಣಿಯುತ್ತಿದ್ದಾರೆ. ಮಂಜಣ್ಣ ಹಾಗೇ ದುಬಾಯಿ ಕಡೆ ಹೋಗಿ ಬರೋಣ ಅನ್ನುತ್ತಿದ್ದಾರೆ. ಜಯ್ ಕಣ್ಣು ಮುಚ್ಚಿ ೧..೨...೧೦೮ ಜಪ ಮಾಡುತ್ತಿದ್ದಾರೆ. ಚೇತನ್ ಸೂರ್ಯನನ್ನು ನೋಡಿಕೊಂಡು ಚಂದ್ರನ ನೆನಪು ಮಾಡುತ್ತಿದ್ದಾರೆ. ಮೇಲೆ ಹೆಗ್ಡೆಯವರು ಅತೀ ಎತ್ತರದ ಮೋಡವನ್ನು    ಹುಡುಕುತ್ತಿದ್ದಾರೆ. ಗೋಪಾಲರು ಕಿಟಕಿಯಿಂದ ಕೆಳಗೆ ನೋಡಿಕೊಂಡು ರನ್ನಿಂಗ್ ಕಮೆಂಟರಿ ಕೊಡುತ್ತಿದ್ದಾರೆ, ಕೇಳಿ.." ಎಂದು ಮೊಬೈಲ್ನ ಗೋಪಾಲರ ಬಳಿ ಹಿಡಿದ- "ನಾವೀಗ ಮಾರ್ಗೋಸ ರೋಡ್‌ನ ನೇರ ಮೇಲೆ ಇದ್ದೇವೆ. ಇದು ಸಂಪಿಗೆ ರಸ್ತೆಗೆ ಸಮಾನಾಂತರವಾಗಿ ಇರುವ ಒನ್ ವೇ ರಸ್ತೆ. ಅಲ್ಲಿ ಮುಂದಕ್ಕೆ ಕಾಣಿಸುತ್ತಿರುವುದು ನೈಂಟಿ ರೂಟ್, ಮಂಜಣ್ಣ ಕೇಳಿಸಿಕೊಂಡರಾ;.. ಆ ರಸ್ತೆಯಲ್ಲಿ ಹೋಗುವ ಬಸ್ಸಲ್ಲೇ ನಮ್ಮ ಸೂಪರ್ ಸ್ಟಾರ್ ರಜನೀಕಾಂತ್ ಕಂಡಕ್ಟರ್ ಆಗಿದ್ದು.. ಆ ಪಕ್ಕದಲ್ಲಿ ಕಾಣಿಸುತ್ತಿರುವುದೇ ನಮ್ಮ ಪ್ರಕಾಶ್ ಪಡುಕೋಣೆಯವರ ಬ್ಯಾಡ್ಮಿಂಟನ್ ಅಕಾಡಮಿಯ ಷಟ್ಲ್ ಕೋರ್ಟ್. ನಾವು ಈಗ ಹರೇ ಕೃಷ್ಣ ಟೆಂಪ್‌ಲ್ ಕಡೆ ಹೋಗುತ್ತಿದ್ದೇವೆ..."


ನನಗೆ ತಲೆಬಿಸಿಯಾಯಿತು-"ಸ್ಟಾಪ್..ಸ್ಟಾಪ್..ಸತೀಶ, ಸ್ಟೇರಿಂಗ್ ಪೂರ್ತಿ ರೈಟ್‌ಗೆ ತಿರುಗಿಸು. ಇಲ್ಲದಿದ್ದರೆ ರಾಜಾಜಿನಗರದ ಕಡೆಗೆ ಹೋಗುತ್ತೀರಿ. ...ತಿರುಗಿಸಿದ್ಯಾ? ವೆರಿಗುಡ್......ನೇರ‍ ಬರುತ್ತಾ ಇರು... ಅಲ್ಲಿ ಒಂದು ಮೈದಾನ ಕಾಣಿಸಿದರೆ............ಕಾಣಿಸಿತಾ..?... ಅದೇ..ಅದೇ..೧೮ ನೇ ಕ್ರಾಸ್ ಸ್ಕೂಲ್ ಗ್ರೌಂಡೂ.. ಅಲ್ಲೇ ಕೆಳಗಿಳಿಸು... ಆಗುತ್ತಿಲ್ಲವಾ..? ಬ್ರೇಕ್ ಒತ್ತು...ಆಗಲಿಲ್ಲವಾ..? ಸ್ಟೇರಿಂಗ್ ಬಳಿ ಅಕ್ಕ ಪಕ್ಕ ವೈರ್ ಕುಟ್ಟಿ ಏನೆಲ್ಲಾ ಇದೆ ಅದನ್ನು ಎಳೆದು ಬಿಡು..ಎಲ್ಲಾ ಎಳೆದೆಯಾ? ಊಂ.. . ಕೆಳಗೆ ಕಾಲ ಬಳಿ ಪ್ರಯತ್ನಿಸು..


ಹಾಂ..ಏನು ಬಾಟಲು ಸಿಕ್ಕಿತಾ? ಏನು ಆರ್.ಸಿ.ಬಾಟಲ್ಲಾ!!? ಈಗ ಗೊತ್ತಾಯಿತು. ಅದು ಮಂಜಣ್ಣನವರ ಕೈಯಲ್ಲಿದ್ದ ಬಾಟಲು. ಸ್ಟೇಶನ್‌ಗೆ ಹೋಗುವಾಗ ಕಾರಲ್ಲಿ ಇಟ್ಟಿರಬೇಕು. ಅದು ಅಡ್ಡ ಬಿದ್ದು ಲೀಕಾಗಿ-ಕಾರು ನಶೆಯಲ್ಲಿ ತೇಲಾಡುತ್ತಾ ಹೋಯಿತು.. ಈಗ ಅದರ ಮುಚ್ಚಳ ಟೈಟ್ ಮಾಡಿ ನೆಟ್ಟಗೆ ಇಡು. ಕೆಳಗೆ ಇಳಿಯುತ್ತಿದೆಯಾ!!!? ಚಪ್ಪಾಳೆ...ಯಾರೂ ಹುಡುಗರು ಇಲ್ಲದಲ್ಲಿ ಇಳಿಸು... ಉಸ್ಸಪ್ಪಾ... ಅಬ್ಬಾ ದೇವರೆ...


ಇಳಿದಾಯಿತಾ... ಈಗ ನಾನು ಮಲ್ಲೇಶ್ವರ ೮ನೇ ಕ್ರಾಸ್ ದೇವಸ್ಥಾನದೊಳಗೆ  ಇದ್ದೇನೆ.  ಅಲ್ಲಿಗೆ ಬೇಗ ಬನ್ನಿ. ಅಲ್ಲಿಂದ ಮುಂದೆ ಸಾಗೋಣ...


-ಗಣೇಶ.

Rating
No votes yet

Comments