ಬೆಲೆ
ಕವನ
ಹಸಿದಿದ್ದರೇ ಅನ್ನಕ್ಕೆ ಬೆಲೆ
ಹಸಿರಿದ್ದರೇ ಹುಲ್ಲಿಗೆ ಕಳೆ
ಉಸಿರಿದ್ದರೇ ಗಾಳಿಗೆ ಬೆಲೆ
ಕೆಸರಿದ್ದರೇ ಗದ್ದೆಗೆ ಕಳೆ !
ಜೇಡನಿದ್ದರೇ ಬಲೆಗೆ ಬೆಲೆ
ಮಿಂಚಿದ್ದರೇ ಮಳೆಗೆ ಕಳೆ
ಮುಳ್ಳಿದ್ದರೇ ಗಡಿಯಾರಕ್ಕೆ ಬೆಲೆ
ನಕ್ಷತ್ರವಿದ್ದರೇ ಆಕಾಶಕ್ಕೆ ಕಳೆ
ಕತ್ತಲಿದ್ದರೇ ಮಿಂಚುಹುಳಕ್ಕೆ ಬೆಲೆ
ಬೆಳಕಿದ್ದರೇ ದ್ರಶ್ಯಕ್ಕೆ ಕಳೆ
ಚಳಿಯಿದ್ದರೇ ಉಣ್ಣೆಗೆ ಬೆಲೆ
ಮಂಜಿದ್ದರೇ ಮುಂಜಾನೆಗೆ ಕಳೆ
ಉತ್ತಿ-ಭಿತ್ತಿದರೇ ಭೂಮಿಯಲ್ಲಿ ಬೆಳೆ
ದುಂಬಿ ಇದ್ದರೇ ಹೂವಿಗೆ ಕಳೆ. . .
ಹೀಗೆ ಜಗದಲ್ಲಿದೆ ಎಲ್ಲದಕ್ಕೂ ಬೆಲೆ
ಅದನರಿತು ನಡೆದಾಗಲೇ ನಮಗೆ ನೆಲೆ !
Comments
ಉ: ಬೆಲೆ
In reply to ಉ: ಬೆಲೆ by makara
ಉ: ಬೆಲೆ
In reply to ಉ: ಬೆಲೆ by sumangala badami
ಉ: ಬೆಲೆ
In reply to ಉ: ಬೆಲೆ by makara
ಉ: ಬೆಲೆ
ಉ: ಬೆಲೆ
In reply to ಉ: ಬೆಲೆ by SRINIVAS.V
ಉ: ಬೆಲೆ
In reply to ಉ: ಬೆಲೆ by SRINIVAS.V
ಉ: ಬೆಲೆ