ನರ್ವೊಳು ಸೊಪ್ಪು

ನರ್ವೊಳು ಸೊಪ್ಪು


ಈ ಸೊಪ್ಪಿಗೆ ನರ್‌ವೊಳು ಸೊಪ್ಪು ಎಂದು ತುಳುವಿನಲ್ಲಿ ಕರೆಯುತ್ತಾರೆ.


ಕನ್ನಡ, ಬಾಟನಿಕಲ್ ಹೆಸರು ಗೊತ್ತಿಲ್ಲ. ಗೊತ್ತಿರುವವರು ತಿಳಿಸಿ.


ಸುವಾಸನೆಭರಿತ ಸೊಪ್ಪು. ಇದರ ಸಾಂಬಾರ್ ಮಾಡಿದರೆ ಮನೆ ತುಂಬಾ ಗಮಗಮ.....


ಹೀಗೆ ಮಾಡಿದರೆ ಚೆನ್ನಾಗಿರುತ್ತದೆ-


೧.ಮೊದಲಿಗೆ ಎಳೆಯ ಎಲೆಗಳನ್ನ ಆರಿಸಿ, ಕಡ್ಡಿ ತೆಗೆದು(ಎಲೆಯ ತೊಟ್ಟು ಸಹ), ತೊಳೆದು ಇಟ್ಟುಕೊಳ್ಳಬೇಕು.


೨.ಕೊತ್ತಂಬರಿ ಬೀಜ(ಧನಿಯಾ :( ), ಜೀರಿಗೆ, ಒಣಮೆಣಸಿನಕಾಯಿ, ಎಣ್ಣೆ ಹಾಕಿ "ಸ್ವಲ್ಪ" ಹುರಿದು ಇಡಿ.


೩.ತುರಿದ ತೆಂಗಿನಕಾಯಿ ಜತೆ ೪-೫ ಎಸಳು ಬೆಳ್ಳುಳ್ಳಿ, ಅರ್ಧ ಈರುಳ್ಳಿ, ಚಿಟಿಕೆ ಅರಿಶಿನ ಹಾಕಿ ರುಬ್ಬಿ ಇಡಿ.


೧+೨+೩ ಸೇರಿಸಿ, ಜತೆಗೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೊ ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಿದರೆ ಸಾಂಬಾರ್ ತಯಾರ್. ಆಹಾ...


 


-ಗಣೇಶ.

Rating
No votes yet

Comments