ನನ್ನ ಆಲಿಂಗಿಸಿ ಬೆಚ್ಚಗಾಗಿಸು

ನನ್ನ ಆಲಿಂಗಿಸಿ ಬೆಚ್ಚಗಾಗಿಸು

ಕವನ

 

ಕಳೆಯಿತು ಮಳೆಗಾಲ ಮಳೆ ಇಲ್ಲದೆ

ಶುರುವಾಗಿದೆ ಚಳಿಗಾಲ ತಣ್ಣನೆ ಗಾಳಿಯೊಂದಿಗೆ

ಸಂಜೆಯ ತಣ್ಣನೆ ಗಾಳಿಗೆ ಮೈ ಎಲ್ಲ

ನಡುಗುತಿದೆ ಚಳಿಯಲ್ಲಿ...

 

 ತಣ್ಣನೆಯ ಚಳಿಯಲ್ಲಿ ನಿನ್ನಯ

ಸನಿಹ ಕೋರುತಿದೆ ನನ್ನೀ ಮನಸು 

ನೀ ನೀಡುವ ಬೆಚ್ಚನೆಯ ಸ್ಪರ್ಶಕೆ 

ಹಾತೊರೆಯುತಿದೆ ಮನಸು..

 

ಮೃದುವಾದ ನಿನ್ನ ತೋಳ್ಗಳಲ್ಲಿ

ನನ್ನ ಕೈಗಳನ್ನು ಸೇರಿಸಿ ಒಮ್ಮೆ

ನನ್ನ ಆಲಿಂಗಿಸಿ ಬೆಚ್ಚಗಾಗಿಸು 

 ನನ್ನ ಮೆಚ್ಚಿನ "ಸ್ವೆಟರ್ರೆ"...

Comments