ಒಬ್ಬ 'ಡಾನ್' ಹೇಗಿರಬಾರದು? :()
ಅವನ ಹೆಸರು ಕೇಳಿ ಇಡೀ ನಗರವೇ ನಡುಗುತ್ತಿತ್ತು ...
ಅವನ ಹೆಸರು ಮಾತ್ರ ಹೇಳಿದರೆ ವ್ಯಾಪಾರಿಗಳು 'ಕಪ್ಪ' ವನ್ನ 'ಕಷ್ಟ' ದಿಂದ ಸಲ್ಲಿಸುತ್ತಿದ್ದರು ...
ಅವನ ಹೆಸರು ಹೇಳಿಕೊಂಡೆ ಹಲವರು 'ಹಣ -ಕಾಸು ವ್ಯವಹಾರ' ಮಾಡಿದರು, ಅವನ 'ಹೆಸರಿನ' ಹಣ ತಿಂದು ಹಾಕಿದರು..!!
ಅವನಿಗೆ ರೈಟ್ ಹ್ಯಾಂಡ್- ಲೆಫ್ಟ್ ಹ್ಯಾಂಡ್ ಅಂತ
ಬೊಡ್ಡೆ, ಮತ್ತು ಗಡ್ಡೆ ಇದ್ದರು, 'ಸದಾ' ಆ ಡಾನ್ ಜೊತೆಗೆ ಇರ್ತಿದ್ದ್ರು,
ಹಾಗೆಯೇ ತನ್ನ ಈ 'ಈರ್ವರು ' ಭಂಟರ ಮೇಲೆ ವಿಶ್ವಾಸ ...!!!
ಇಬ್ಬರ ಮನದಲ್ಲೂ ತಾವು ಮುಂದೊಮ್ಮೆ 'ಡಾನ್' ಆಗಬೇಕೆಂಬ ಕನಸು!!...
ಆದರೆ ಡಾನ್ ಒಬ್ಬ ಬದುಕಿರಬೇಕಾರೆ 'ಇನ್ನೊಬ್ಬ' ಹೇಗೆ ಡಾನ್ ಆಗಲು ಸಾಧ್ಯ?
ಆ ಡಾನ್ ಗೊಬ್ಬ 'ಮನದನ್ನೆ',
ಮತ್ತವಳ ಮೇಲೆ ಅವನಿಗೆ ನಂಬಿಕೆ-
ಇರುಳು ಅವಳೊಡನೆ 'ಕಳೆದು ' ಬೆಳಗ್ಗೆ ಎದ್ದಾಗ ಹೆಣವಾಗಿ ಬಿದ್ದಿದ್ದ ,
ಕಾರಣ?
ಮನದನ್ನೆ 'ವಿಷ' ವಿಕ್ಕಿದ್ದಳು :))
ಆ ಡಾನ್ ಹೆಣ ಎತ್ತಿ 'ಕುಣಿಗೆ' ಹಾಕೋಕೆ ಮುಂಚೆಯೇ ಬೊಡ್ಡೆ - ಗೆಡ್ಡೆ ಮಧ್ಯೆ ಯುದ್ಧ
ಕಾರಣ?
ನಾ ಡಾನ್ ಆಗಬೇಕು
ತಾ ಡಾನ್ ಆಗಬೇಕು
ಆಗಲೇಬೇಕು....
ಆ ಡಾನ್ ಹೆಣ ಅಲ್ಲೇ 'ಕೊಳೆಯುತ್ತಿದೆ' ...!!
ಮತ್ತು ಈ ಬೊಡ್ಡೆ- ಗೆಡ್ಡೆ ಗಳ 'ಸಮರ' ಮುಂದುವರೆದಿದೆ..
ಮತ್ತದು -ಮುಂದುವರೆಯಲಿದೆ.....
ಅವರಿಬ್ಬರೂ
ಕಾಲನ ಕೈಯಲಿ 'ಅಕಾಲಿಕ' ವಶವಾದರೂ.........(((((
ಚಿತ್ರ ಮೂಲ: www .cliparttoday .com
Comments
ಉ: ಒಬ್ಬ 'ಡಾನ್' ಹೇಗಿರಬಾರದು? :()
ಉ: ಒಬ್ಬ 'ಡಾನ್' ಹೇಗಿರಬಾರದು? :()
In reply to ಉ: ಒಬ್ಬ 'ಡಾನ್' ಹೇಗಿರಬಾರದು? :() by partha1059
ಉ: ಒಬ್ಬ 'ಡಾನ್' ಹೇಗಿರಬಾರದು? :()