ಒಬ್ಬ 'ಡಾನ್' ಹೇಗಿರಬಾರದು? :()

ಒಬ್ಬ 'ಡಾನ್' ಹೇಗಿರಬಾರದು? :()

ಚಿತ್ರ

 ಅವನ ಹೆಸರು ಕೇಳಿ  ಇಡೀ  ನಗರವೇ  ನಡುಗುತ್ತಿತ್ತು ...

ಅವನ ಹೆಸರು ಮಾತ್ರ  ಹೇಳಿದರೆ  ವ್ಯಾಪಾರಿಗಳು  'ಕಪ್ಪ' ವನ್ನ 'ಕಷ್ಟ' ದಿಂದ ಸಲ್ಲಿಸುತ್ತಿದ್ದರು ... 

ಅವನ ಹೆಸರು ಹೇಳಿಕೊಂಡೆ ಹಲವರು 'ಹಣ -ಕಾಸು ವ್ಯವಹಾರ'  ಮಾಡಿದರು, ಅವನ 'ಹೆಸರಿನ' ಹಣ ತಿಂದು ಹಾಕಿದರು..!!
ಅವನಿಗೆ ರೈಟ್ ಹ್ಯಾಂಡ್- ಲೆಫ್ಟ್ ಹ್ಯಾಂಡ್ ಅಂತ
 ಬೊಡ್ಡೆ, ಮತ್ತು ಗಡ್ಡೆ ಇದ್ದರು, 'ಸದಾ' ಆ ಡಾನ್ ಜೊತೆಗೆ ಇರ್ತಿದ್ದ್ರು,

ಹಾಗೆಯೇ  ತನ್ನ  ಈ 'ಈರ್ವರು ' ಭಂಟರ  ಮೇಲೆ ವಿಶ್ವಾಸ ...!!!

ಇಬ್ಬರ ಮನದಲ್ಲೂ ತಾವು ಮುಂದೊಮ್ಮೆ 'ಡಾನ್' ಆಗಬೇಕೆಂಬ ಕನಸು!!...
ಆದರೆ ಡಾನ್ ಒಬ್ಬ ಬದುಕಿರಬೇಕಾರೆ 'ಇನ್ನೊಬ್ಬ' ಹೇಗೆ ಡಾನ್ ಆಗಲು ಸಾಧ್ಯ?

ಡಾನ್ ಗೊಬ್ಬ 'ಮನದನ್ನೆ',
ಮತ್ತವಳ ಮೇಲೆ ಅವನಿಗೆ ನಂಬಿಕೆ-

 ಇರುಳು   ಅವಳೊಡನೆ  'ಕಳೆದು ' ಬೆಳಗ್ಗೆ  ಎದ್ದಾಗ  ಹೆಣವಾಗಿ   ಬಿದ್ದಿದ್ದ  ,
ಕಾರಣ?

 

ಮನದನ್ನೆ 'ವಿಷ' ವಿಕ್ಕಿದ್ದಳು :))

ಡಾನ್ ಹೆಣ ಎತ್ತಿ 'ಕುಣಿಗೆ' ಹಾಕೋಕೆ ಮುಂಚೆಯೇ  ಬೊಡ್ಡೆ - ಗೆಡ್ಡೆ  ಮಧ್ಯೆ ಯುದ್ಧ

ಕಾರಣ?

 

ನಾ ಡಾನ್ ಆಗಬೇಕು

ತಾ ಡಾನ್ ಆಗಬೇಕು

ಆಗಲೇಬೇಕು....

ಡಾನ್ ಹೆಣ ಅಲ್ಲೇ 'ಕೊಳೆಯುತ್ತಿದೆ' ...!!

ಮತ್ತು ಬೊಡ್ಡೆ- ಗೆಡ್ಡೆ ಗಳ 'ಸಮರ' ಮುಂದುವರೆದಿದೆ..

 

ಮತ್ತದು -ಮುಂದುವರೆಯಲಿದೆ.....

ಅವರಿಬ್ಬರೂ

ಕಾಲನ ಕೈಯಲಿ 'ಅಕಾಲಿಕ' ವಶವಾದರೂ.........(((((

 

 

ಚಿತ್ರ ಮೂಲ: www .cliparttoday .com 

 

 

Rating
No votes yet

Comments