ರೂಪಕಗಳ ರೂಪ ಬದಲಾಗಬೇಕಿದೆ!
ಕವನ
ರೋಮಾಂಚನ ತರದ ಪ್ರಯಾಣವಿದು
ಸರಕಾರಿ ಬಸ್ಸಿಗೆ ವೇಗವಿಲ್ಲ
ಕಿಟಕಿಯಲ್ಲಿ ಗಾಳಿಯಿಲ್ಲ
ಪದಬಂಧದಲ್ಲೂ ಮನಸ್ಸಿಲ್ಲ.
ಸುಂದರಿ ಬಂದು
ಪಕ್ಕದಲ್ಲಿ ಪವಡಿಸಿದ್ದೇ ತಡ;
ಬಸ್ಸಿಗೂ ಮನಸಿಗೂ ನಾಗಾಲೋಟ!
ವೇಗ ಹೆಚ್ಚಿದಂತೆ ಹಾದಿಬದಿಯ
ಕರೆಂಟ್ ತಂತಿಗಳು
ಭ್ರಮೆ ಹುಟ್ಟಿಸಿ ಸಂಭ್ರಮಿಸುತ್ತವೆ:
ಒಂದಕ್ಕೊಂದು ತಬ್ಬಿಕೊಂಡಂತೆ
ಎರಡೂ ಒಂದಾಗಿ ಹೋದಂತೆ.
ವೇಗ ಕಳೆದುಕೊಂಡಾಗ
ಮುಚ್ಚಿಟ್ಟ ಸತ್ಯವೊಂದು ತೋರಿದೆ;
ಮೂರನೇ ತಂತಿಯೊಂದು ಕಂಡಿದೆ!
ರೂಪರೇಖೆಗಳೇ ಬದಲಾಗುವ
ಈ ಹೊತ್ತಿನಲ್ಲಿ ರೂಪಕಗಳ
ರೂಪ ಬದಲಾಗಬೇಕಿದೆ
ರೂಹೂ ಬದಲಾಗಬೇಕಿದೆ.
ಯತಿಗಳು ಒತ್ತುವ ಬಿಸಿಮುದ್ರೆ
ಪೋಸ್ಟ್ ಆಫೀಸಿನ ಕರಿಮುದ್ರೆ
ಭರತನಾಟ್ಯದ ಬೆರಳಮುದ್ರೆ -
ತ್ರಿಭುಜದ ಈ ಮೂರು ಬಿಂದುಗಳಿಗೂ
ಪೈಥಾಗೊರಸ್ ಪ್ರಮೇಯಕ್ಕೂ ಸಂಬಂಧವಿಲ್ಲ
ಆದರೆ ಯಾವತ್ತೋ ಅವಳ
ಹಣೆಗೆ ಒತ್ತಿದ ತುಸುಮುದ್ರೆ
ಮಾತ್ರ ತ್ರಿಭುಜ ಸೀಳಿದ
ರೇಖೆಯಾಗಿ ಮುನ್ನುಗ್ಗಿದೆ;
ಏಳೂ ಬಣ್ಣ ಒಟ್ಟಿಗೆ ಚಿಮ್ಮಿಸಿದೆ;
ಕಾಮನಬಿಲ್ಲಿನ ಇಂದ್ರಜಾಲ ತೋರಿಸಿದೆ!
ಸದ್ಯ,ಕವಿಯ ಮುಲಾಜಿಗೆ
ಬೀಳುವ ರೂಪಕಗಳನ್ನು
ಇನ್ನೂ ಯಾರೂ ಖರೀದಿಸಿಲ್ಲ.
ಆದರೂ ಒಮ್ಮೊಮ್ಮೆ ರೂಪಕಗಳು
ಹೀಗೂ ಹುಟ್ಟಿ
ಹಾಗೆ ಸತ್ತು ಹೋಗುತ್ತವೆ.
ಕೊನೆಗೆ
ರೂಪ ಅಳಿಯುತ್ತದೆ
ರೇಖೆ ಉಳಿಯುತ್ತದೆ..
--
Comments
ಉ: ರೂಪಕಗಳ ರೂಪ ಬದಲಾಗಬೇಕಿದೆ!
In reply to ಉ: ರೂಪಕಗಳ ರೂಪ ಬದಲಾಗಬೇಕಿದೆ! by mmshaik
ಉ: ರೂಪಕಗಳ ರೂಪ ಬದಲಾಗಬೇಕಿದೆ!
ಉ: ರೂಪಕಗಳ ರೂಪ ಬದಲಾಗಬೇಕಿದೆ!
In reply to ಉ: ರೂಪಕಗಳ ರೂಪ ಬದಲಾಗಬೇಕಿದೆ! by kamath_kumble
ಉ: ರೂಪಕಗಳ ರೂಪ ಬದಲಾಗಬೇಕಿದೆ!
ಉ: ರೂಪಕಗಳ ರೂಪ ಬದಲಾಗಬೇಕಿದೆ!
In reply to ಉ: ರೂಪಕಗಳ ರೂಪ ಬದಲಾಗಬೇಕಿದೆ! by RAMAMOHANA
ಉ: ರೂಪಕಗಳ ರೂಪ ಬದಲಾಗಬೇಕಿದೆ!
ಉ: ರೂಪಕಗಳ ರೂಪ ಬದಲಾಗಬೇಕಿದೆ!
ಉ: ರೂಪಕಗಳ ರೂಪ ಬದಲಾಗಬೇಕಿದೆ!
ಉ: ರೂಪಕಗಳ ರೂಪ ಬದಲಾಗಬೇಕಿದೆ!