ಈ ಯುಗಾದಿಯು

ಈ ಯುಗಾದಿಯು

ಈ ಯುಗಾದಿಯು

ಓ ಹೋ ಹೋ | ಓ ಹೋ ಹೋ ||
ಹಳೆಯ ಕೊಳಕು ಕಳೆಯಲಿ
ಹೊಳೆವ ಬೆಳಕು ಸುಳಿಯಲಿ  |
ನೋವು ನಲಿವಿನಲ್ಲಿ ಆದ
ಬೇವು ಬೆಲ್ಲದಲ್ಲಿ ಸ್ವಾದ   |
ನೀಡಲೆಮಗೆ ಈ ಯುಗಾದಿಯು || ಪ ||

ಅಂತರಾತ್ಮ ಸುತ್ತ ಮುತ್ತ
ಮುತ್ತಿದಂತ ಕತ್ತಲಳಿದು |
ಸ್ವಂತ ಬುದ್ಧಿಯಂತ್ರದಿಂದ
ಒಳ ಸ್ವತಂತ್ರ ದೀಪವುರಿದು  |
ಆಧ್ಯಾತ್ಮವು ಬೆಳಗಿ ಯಶವ
ನೀಡಲೆಮಗೆ ಈ ಯುಗಾದಿಯು || ೧ ||
ಓ ಹೋ ಹೋ | ಓ ಹೋ ಹೋ ||

ಧ್ಯೇಯವೆದಿರು ಕಾಣುತಿರಲಿ
ಅಪ್ರಮತ್ತರಾಗದಿರಲಿ  |
ಧೀರ ಯೋಧರಂತೆ ಸಾಗಿ
ಧೈರ್ಯದಿಂದ ಬಾಳುತಿರಲಿ  |
ನಮ್ಮ ಮರೆವ ಬಿಡಿಸಿ ಅರಿವ
ನೀಡಲೆಮಗೆ ಈ ಯುಗಾದಿಯು || ೨ ||
ಓ ಹೋ ಹೋ | ಓ ಹೋ ಹೋ ||

ನಾವು ನಾಡ ಸಾರಥಿಗಳು
ಯಾವುದಕ್ಕು ಬೆದರದವರು  |
ಸಾತ್ವಿಕಾಂಶದಿಂದ ಸಾಗಿ
ತಾತ್ವಿಕಾಂಶ ಪಡೆಯುವವರು  |
ಊರ್ಧ್ವ ಧಿವ್ಯ ಪಥಕೆ ಬೆಳಕ
ನೀಡಲೆಮಗೆ ಈ ಯುಗಾದಿಯು || ೩ ||
ಓ ಹೋ ಹೋ | ಓ ಹೋ ಹೋ ||

                                                                 - ಸದಾನಂದ 

Rating
No votes yet

Comments