ಈ ಯುಗಾದಿಯು
ಈ ಯುಗಾದಿಯು
ಓ ಹೋ ಹೋ | ಓ ಹೋ ಹೋ ||
ಹಳೆಯ ಕೊಳಕು ಕಳೆಯಲಿ
ಹೊಳೆವ ಬೆಳಕು ಸುಳಿಯಲಿ |
ನೋವು ನಲಿವಿನಲ್ಲಿ ಆದ
ಬೇವು ಬೆಲ್ಲದಲ್ಲಿ ಸ್ವಾದ |
ನೀಡಲೆಮಗೆ ಈ ಯುಗಾದಿಯು || ಪ ||
ಅಂತರಾತ್ಮ ಸುತ್ತ ಮುತ್ತ
ಮುತ್ತಿದಂತ ಕತ್ತಲಳಿದು |
ಸ್ವಂತ ಬುದ್ಧಿಯಂತ್ರದಿಂದ
ಒಳ ಸ್ವತಂತ್ರ ದೀಪವುರಿದು |
ಆಧ್ಯಾತ್ಮವು ಬೆಳಗಿ ಯಶವ
ನೀಡಲೆಮಗೆ ಈ ಯುಗಾದಿಯು || ೧ ||
ಓ ಹೋ ಹೋ | ಓ ಹೋ ಹೋ ||
ಧ್ಯೇಯವೆದಿರು ಕಾಣುತಿರಲಿ
ಅಪ್ರಮತ್ತರಾಗದಿರಲಿ |
ಧೀರ ಯೋಧರಂತೆ ಸಾಗಿ
ಧೈರ್ಯದಿಂದ ಬಾಳುತಿರಲಿ |
ನಮ್ಮ ಮರೆವ ಬಿಡಿಸಿ ಅರಿವ
ನೀಡಲೆಮಗೆ ಈ ಯುಗಾದಿಯು || ೨ ||
ಓ ಹೋ ಹೋ | ಓ ಹೋ ಹೋ ||
ನಾವು ನಾಡ ಸಾರಥಿಗಳು
ಯಾವುದಕ್ಕು ಬೆದರದವರು |
ಸಾತ್ವಿಕಾಂಶದಿಂದ ಸಾಗಿ
ತಾತ್ವಿಕಾಂಶ ಪಡೆಯುವವರು |
ಊರ್ಧ್ವ ಧಿವ್ಯ ಪಥಕೆ ಬೆಳಕ
ನೀಡಲೆಮಗೆ ಈ ಯುಗಾದಿಯು || ೩ ||
ಓ ಹೋ ಹೋ | ಓ ಹೋ ಹೋ ||
- ಸದಾನಂದ
Rating
Comments
ಉ: ಈ ಯುಗಾದಿಯು
ಉ: ಈ ಯುಗಾದಿಯು
In reply to ಉ: ಈ ಯುಗಾದಿಯು by H A Patil
ಉ: ಈ ಯುಗಾದಿಯು
ಉ: ಈ ಯುಗಾದಿಯು
In reply to ಉ: ಈ ಯುಗಾದಿಯು by manju787
ಉ: ಈ ಯುಗಾದಿಯು
In reply to ಉ: ಈ ಯುಗಾದಿಯು by partha1059
ಉ: ಈ ಯುಗಾದಿಯು
In reply to ಉ: ಈ ಯುಗಾದಿಯು by manju787
ಉ: ಈ ಯುಗಾದಿಯು
In reply to ಉ: ಈ ಯುಗಾದಿಯು by manju787
ಉ: ಈ ಯುಗಾದಿಯು
ಉ: ಈ ಯುಗಾದಿಯು
In reply to ಉ: ಈ ಯುಗಾದಿಯು by padma.A
ಉ: ಈ ಯುಗಾದಿಯು
ಉ: ಈ ಯುಗಾದಿಯು
In reply to ಉ: ಈ ಯುಗಾದಿಯು by venkatb83
ಉ: ಈ ಯುಗಾದಿಯು
ಉ: ಈ ಯುಗಾದಿಯು
ಉ: ಈ ಯುಗಾದಿಯು