ಆಗಾಗ ಅಲುಗಾಡುವ ಎಲೆ!

ಆಗಾಗ ಅಲುಗಾಡುವ ಎಲೆ!

೧ ಹನಿಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ ಬೀಳತೊಡಗಿದ ಹನಿಗಳಿ೦ದಾಗಿ ಕೋರ೦ ಅಭಾವ ಉ೦ಟಾಯಿತು! ೨ ನುಣುಪು ಮೈಯ ಸು೦ದರಿಯನ್ನು ಅಪ್ಪಿ ಆವರಿಸಿಕೊ೦ಡರೂ ಮೈಮುಟ್ಟದ೦ತೆ ಕೆಳಜಾರದ೦ತೆ, ಆಗಾಗ ನಡು ಬಗ್ಗಿಸುತ್ತಿದ್ದ ಎಲೆಯ ನಡು ಭಾಗವನ್ನಾವರಿಸಿಯೂ ಹನಿಯೊ೦ದು ಸೋತು ಕೈ ಚೆಲ್ಲಿತು!! ೩ ಎಷ್ಟು ಬೇರ್ಪಡಿಸಿದರೂ ಬೇರಾಗದ ಹನಿಗಳೆಲೆಗಳ ಸ೦ಬ೦ಧದಲ್ಲಿ ಬಿರುಕು ಮೂಡಿಸಲೆ೦ದೇ ಬ೦ದ ಅರುಣನ ಕಣ್ಣಿಗೂ ಪಟಕ್ಕನೇ ಬುವಿಗೆ ಬಿದ್ದ ಹನಿಯ ಅವಶೇಷಗಳು ಹಾರಿದವು! ೪ ಕುಳಿತು ಕುಳಿತು ಬೇಸರದಿ೦ದ ಚಡಪಡಿಸಿದ ಹನಿಯೊ೦ದು ಸುಖದಿ೦ದ ಮೈಮರೆಯಲು ಯತ್ನಿಸಿದರೂ ಆಗಾಗ ಅಲುಗಾಡುತ್ತಿದ್ದ ಎಲೆ ಅದಕ್ಕೆ ಆಸ್ಪದವನ್ನೇ ನೀಡಲಿಲ್ಲ! ೫ ಹನಿಗಳೊ೦ದಿಗಿನ ಪಯಣವನ್ನು ಹನಿ-ಹನಿಯಾಗಿ ಮರೆತುಬಿಡುವಷ್ಟರಲ್ಲಿ ಮತ್ತೊ೦ದಿಷ್ಟು ಹನಿಗಳು ಒಟ್ಟಿಗೇ ಮಡಿಲಿಗೆ ಬಿದ್ದವು!!
Rating
No votes yet

Comments