ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!
ಕಳೆದುಹೋದ ನಿನ್ನೆಯ ನೆನಪು...
ನೋವ ತುಂಬಿಹುದು ಮನದಲ್ಲಿ
ಅದನ್ನು ನೋವೆನ್ನಲೇ , ನಿನ್ನೋಂದಿಗಿನ ಸವಿನೆನಪೆನ್ನಲೇ..
ಸಿಲುಕಿರುವೆ ನಾನಿಂದು ನೋವುನಲಿವುಗಳ ಕತ್ತರಿಯಲಿ.....!!!!!
ನೀನೇ ತುಂಬಿರುವೆ ನನ್ನ ಪ್ರತೀ ಮಾತಿನ ಸ್ವರದಲ್ಲೂ..
ಆದರೂ ಮನದಲೇನೋ ಹಂಬಲ ನಿನ್ನ ಸ್ವರ ಕೇಳಲು..
ಕಣ್ಣತುಂಬೆಲ್ಲಾ ನಿನ್ನ ನೋಟವೇ ತುಂಬಿಹುದು
ಆದರೇನೋ ಬಯಕೆ ನಿನ್ನನೋಮ್ಮೆ ನೋಡಲು...
ಸಿಲುಕಿರುವೆ ನಾನಿಂದು ನಿನ್ನ ಸ್ವರ - ನೋಟಗಳ ಕತ್ತರಿಯಲಿ....!!!!
ಕೆಲವೊಮ್ಮೆ ನನಗನ್ನಿಸಿದೆ ನೀತೀರಾ ಸನಿಹಕೆ ಬಂದಿರುವೆಎಂದು
ಕೆಲವೊಮ್ಮೆ ನೀನಿರುವೆ ನನ್ನಿಂದ ಬಹುದೂರವೆಂದು
ಇಂದಿಗೂ ನೀನೇ ತುಂಬಿರುವೆ ಮನದ ತುಂಬೆಲ್ಲಾ..
ಆದರೂ ಸಿಲುಕಿರುವೆ ನಾನಿಂದು ಈ ದೂರ-ಸನಿಹಗಳ ಕತ್ತರಿಯಲಿ....!!!!
ಕಲ್ಪನೆಯ ಕಣ್ಣಲ್ಲಿ ಆಲಿಂಗನದ ಬ್ರಾಂತಿ...
ವಾಸ್ತವದ ದಿನದಲ್ಲಿ ನೀನಗಲಿದಾ ಚಿಂತೆ..
ಆದರೂ ನಿನ್ನೊಂದಿಗೆ ಬದುಕುವಾ ಆಸೆಯಲಿ..
ಸಿಲುಕಿರುವೆ ನಾನಿಂದು ಕಲ್ಪನೆ-ವಾಸ್ತವಗಳ ಕತ್ತರಿಯಲಿ....!!!!!
ನಲಿವಿನ ದಿನದಲಿ ನೀಪಟ್ಟ ಸಂತಸವ ಸ್ನೇಹವೆನ್ನಲೇ..
ನೋವಿನ ಕ್ಷಣದಲ್ಲಿ ನಿನ್ನ ಸಾಂತ್ವಾನವ ಪ್ರೀತಿಎನ್ನಲೇ..
ಸ್ನೇಹಕೂ ಮಿಗಿಲಾದ ನಮ್ಮ ಈ ಭಾಂದವ್ಯದ ನಡುವೆ...
ನಾನಿಂದು ಸಿಲುಕಿರುವೆ ಪ್ರೀತಿ-ಸ್ನೇಹಗಳ ಕತ್ತರಿಯಲಿ...!!!!
- ಹರೀಶ್ ಶೆಣೈ
Comments
ಉ: ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!
In reply to ಉ: ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!! by Praveen.Kulkar…
ಉ: ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!
ಉ: ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!
ಉ: ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!
ಉ: ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!
ಉ: ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!
In reply to ಉ: ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!! by ಗಣೇಶ
ಉ: ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!