ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!

ಸಿಲುಕಿರುವೆ ಪ್ರೇಮ ಕತ್ತರಿಯಲಿ.....!!!

ಕವನ

 ಕಳೆದುಹೋದ ನಿನ್ನೆಯ ನೆನಪು...

ನೋವ ತುಂಬಿಹುದು ಮನದಲ್ಲಿ

ಅದನ್ನು ನೋವೆನ್ನಲೇ , ನಿನ್ನೋಂದಿಗಿನ ಸವಿನೆನಪೆನ್ನಲೇ..

ಸಿಲುಕಿರುವೆ ನಾನಿಂದು ನೋವುನಲಿವುಗಳ ಕತ್ತರಿಯಲಿ.....!!!!!

 

ನೀನೇ ತುಂಬಿರುವೆ ನನ್ನ ಪ್ರತೀ ಮಾತಿನ ಸ್ವರದಲ್ಲೂ..

ಆದರೂ ಮನದಲೇನೋ ಹಂಬಲ ನಿನ್ನ ಸ್ವರ ಕೇಳಲು..

ಕಣ್ಣತುಂಬೆಲ್ಲಾ ನಿನ್ನ ನೋಟವೇ ತುಂಬಿಹುದು

ಆದರೇನೋ ಬಯಕೆ ನಿನ್ನನೋಮ್ಮೆ ನೋಡಲು...

ಸಿಲುಕಿರುವೆ ನಾನಿಂದು ನಿನ್ನ ಸ್ವರ - ನೋಟಗಳ ಕತ್ತರಿಯಲಿ....!!!!

  

ಕೆಲವೊಮ್ಮೆ ನನಗನ್ನಿಸಿದೆ ನೀತೀರಾ ಸನಿಹಕೆ ಬಂದಿರುವೆಎಂದು

ಕೆಲವೊಮ್ಮೆ ನೀನಿರುವೆ ನನ್ನಿಂದ ಬಹುದೂರವೆಂದು

ಇಂದಿಗೂ ನೀನೇ ತುಂಬಿರುವೆ ಮನದ ತುಂಬೆಲ್ಲಾ..

ಆದರೂ ಸಿಲುಕಿರುವೆ ನಾನಿಂದು ಈ ದೂರ-ಸನಿಹಗಳ ಕತ್ತರಿಯಲಿ....!!!!

 

 ಕಲ್ಪನೆಯ ಕಣ್ಣಲ್ಲಿ ಆಲಿಂಗನದ ಬ್ರಾಂತಿ...

ವಾಸ್ತವದ ದಿನದಲ್ಲಿ ನೀನಗಲಿದಾ ಚಿಂತೆ..

ಆದರೂ ನಿನ್ನೊಂದಿಗೆ ಬದುಕುವಾ ಆಸೆಯಲಿ..

ಸಿಲುಕಿರುವೆ ನಾನಿಂದು ಕಲ್ಪನೆ-ವಾಸ್ತವಗಳ ಕತ್ತರಿಯಲಿ....!!!!!

 

ನಲಿವಿನ ದಿನದಲಿ ನೀಪಟ್ಟ ಸಂತಸವ ಸ್ನೇಹವೆನ್ನಲೇ..

ನೋವಿನ ಕ್ಷಣದಲ್ಲಿ ನಿನ್ನ ಸಾಂತ್ವಾನವ ಪ್ರೀತಿಎನ್ನಲೇ..

ಸ್ನೇಹಕೂ ಮಿಗಿಲಾದ ನಮ್ಮ ಈ ಭಾಂದವ್ಯದ ನಡುವೆ...

ನಾನಿಂದು ಸಿಲುಕಿರುವೆ ಪ್ರೀತಿ-ಸ್ನೇಹಗಳ ಕತ್ತರಿಯಲಿ...!!!!

 

                                                                -  ಹರೀಶ್ ಶೆಣೈ

 

Comments