ಐ ಪಿ ಎಲ್ ಮತ್ತೂ ಸಂಪದ ಟೀಮೂ - ೩

ಐ ಪಿ ಎಲ್ ಮತ್ತೂ ಸಂಪದ ಟೀಮೂ - ೩

ಅಲ್ಲಿಗೆ ಪಕ್ಕಾ ಆಯ್ತು, ರಾಮಮೋಹನವ್ರು ಮ್ಯಾಚಿಗೆ ಬರಲ್ಲ ಅಂತ. ಕಾಲ್ ಕಟ್ ಮಾಡಿ ನೆಕ್ಸ್ಟ್ ಮಂಜಣ್ಣಗೆ ಕಾಲ್ ಮಾಡಿದೆ http://sampada.net/… ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಮ: ಇಲ್ಲ ಚಿಕ್ಕು. ನಾ: ಯಾಕೆ ಮಂಜಣ್ಣ. ಮ: ನಾನು ದುಬೈನಲ್ಲಿದೀನಿ, ನಾಳೆ ಬರ್ತೀನಿ ಬೆಂಗಳೂರಿಗೆ ಆದ್ರೆ ಮ್ಯಾಚಿಗೆ ಬರಕಾಗಲ್ಲ. ನಾ: ಅದೇನು ಹಂಗೆ? ಮ: ಅಯ್ಯೋ ಚಿಕ್ಕು, ಒಂದಾ ಎರಡಾ ಪ್ರಾಬ್ಲಂ. ನಾ: ಯಾಕೆ ಮಂಜಣ್ಣ, ನಾವೆಲ್ಲಾ ಇರೋದು ಏನಕ್ಕೆ ಹೇಳಿ (ಬರೀ ಕೇಳೋದಕ್ಕೆ, ಇನ್ನೇನು ಕಡಿದು ದಬ್ಹಾಕ್ತೀವಿ!!!!) ಅದೇನು ಅಂತ. ಮ: ದುಬೈನಲ್ಲಿರೋ ಮನೆ ಎದ್ರಿಗೆ ಯಾರೋ ಮಾಟ ಮಂತ್ರ ಮಾಡ್ಸಿದ್ದಾರೆ ಅದ್ಕೆ ಪರಿಹಾರ ಮಾಡ್ಬೇಕು, ಒಳ್ಳೆ ಭಟ್ರನ್ನ ಕರ್ಕೊಂಡು ಬಂದು ಪರಿಹಾರ ಮಾಡ್ಸ್ಬೇಕು ಅದ್ಕೆ ಹೊರಟಿದೀನಿ ಅಲ್ಲಿಗೆ. ನಾ: ಹ್ಮ್ಮ್, ಒಂದಾಯ್ತು ಬೇರೆದು? ಮ: ಸಂಸಾರದ ಪ್ರಾಬ್ಲಂ ಸೀರಿಯಲ್ನಲ್ಲಿ. ನಾ: (ನಂಗೆ ತಲೆ ಬುಡ ಅರ್ಥ ಆಗ್ಲಿಲ್ಲ) ಎಂಥ ಮಂಜಣ್ಣ? ಮ: ಅದೇ ಚಿಕ್ಕು, ಸಾವಿತ್ರಿ ಸೀರಿಯಲ್ನಲ್ಲಿ ಜೈ ಜಗದೀಶ್ ನನ್ ಮಗ್ಳನ್ನ ಚೆನ್ನಾಗಿ ನೋಡ್ಕೋತಿಲ್ಲ ಅದ್ಕೆ ಡೈರೆಕ್ಟರಿಗೆ ಸ್ವಲ್ಪ ದಬಾಯಿಸ್ಬೇಕು. ನಾ: !!! :) :) ಸರಿ ಬಿಡಿ ಮಂಜಣ್ಣ. ಸಮಸ್ಯೆಗಳು ತುಂಬಾ ಇದೆ ಹಾಗಿದ್ರೆ. ಇನ್ನೊಮ್ಮೆ ಸಿಗಣ. ....................... ಈಗ ಯಾರಪ್ಪ ಮುಂದೆ ಅಂದು, ಕಾಂಟ್ಯಾಕ್ಟ್ಸ್ ನೋಡಿ ಸತೀಶವ್ರಿಗೆ ಕರೆ ಮಾಡಿದೆ.. ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಸ: ಇಲ್ಲ ಚಿಕ್ಕು ಆಗಲ್ಲ. ನಾ: ಯಾಕ್ರೀ, ನಾಳೆ ರಜೆ ತಾನೇ? ಸ: ಹ್ಞೂ ಆದ್ರೆ ಬರಲ್ಲ. ನಾ: ಏನ್ರಿ ರೀ ನೀವು, ಏನು ಕಾರಣ? ಸ: ಇವತ್ತು ಸ್ನಾನ ಮಾಡಿ ಹೊರಗೆ ಬಂದ ತಕ್ಷಣ ಒಂದು ಹಲ್ಲಿ ಮೈಮೇಲೆ ಬಿತ್ತು, ಹಾಗಾಗಿ ಬರೋಲ್ಲ ಅಂದೆ. ನಾ: ಇವತ್ತು ಹಲ್ಲಿ ಬಿದ್ದಿದಕ್ಕೂ ನಾಳೆ ನೀವು ಬರಲ್ಲ ಅನ್ನೋದಕ್ಕೂ ಎಲ್ಲಿಂದ ಎಲ್ಲಿಗೆ ಸಂಬಂಧ? ಸುಮ್ನೆ ಬರ್ರಿ. ಸ: ಓ, ಹೌದಲ್ವಾ ಚಿಕ್ಕು. ನಾನು ಅದೇ ಮೂಡಲ್ಲಿದ್ದೆ ಹಾಗಾಗಿ ಬರಲ್ಲ ಅಂದೆ. ಸರಿ ಬಿಡಿ, ನಾಳೆ ಸಿಗ್ತೀನಿ. ನಾ: ಆಯ್ತು. ............................ ಮುಂದೆ ಕಾಮತವ್ರಿಗೆ ಕಾಲ್ ಮಾಡಿದೆ ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಕಾಕು: ಇಲ್ಲ ಚಿಕ್ಕು, ನಾಳೆ ೨೯೯೯೯ನೆ ಸಿಪ್ ಇದೆ, ಹಾಗಾಗಿ ಬರೋಕಾಗಲ್ಲ. ನಾ: ಒಳ್ಳೇದು ಒಳ್ಳೇದು, ನಿಮ್ಮನ್ತೋರಿನ್ದಾನೆ ಚಿಕ್ಮಗ್ಲೂರ್ನವ್ರು, ಕೊಡಗ್ನೋರು ಬದ್ಕಿದ್ದಾರೆ, ಕಾಫಿ ಜಾಸ್ತಿ ಕುಡುದ್ರೂ ನಿಮ್ಮ ಆಯಸ್ಸು ಜಾಸ್ತಿ ಇಟ್ಟಿರ್ಲಿ ಆ ಪುಣ್ಯಾತ್ಮ. ಕಾಕು: ಹ್ಹ ಹ್ಹ ಹ್ಹ. ನಾ: ಸಿಪ್ಗೆ ಕಂಪನಿ ಏನಾದ್ರೂ ಇದೆಯಾ? ಕಾಕು: ಹ್ಞೂ ಚಿಕ್ಕು, ಅದ್ಕೆ ಮತ್ತೆ ಬರಲ್ಲ ಅಂದಿದ್ದು. ನಾನೊಂದು ಸಿಪ್ ಅವ್ಳೊಂದು ಸಿಪ್, ನಾನೊಂದು ಸಿಪ್ ಅವ್ಳೊಂದು ಸಿಪ್, ನಾನೊಂದು ಸಿಪ್ ಅವ್ಳೊಂದು ಸಿಪ್, ನಾನೊಂದು ಸಿಪ್ ಅವ್ಳೊಂದು ಸಿಪ್, ನಾನೊಂದು ಸಿಪ್ ಅವ್ಳೊಂದು ಸಿಪ್, ನಾನೊಂದು ಸಿಪ್ ಅವ್ಳೊಂದು ಸಿಪ್, ನಾನೊಂದು ಸಿಪ್ ಅವ್ಳೊಂದು ಸಿಪ್..... ನಾ: ಅಯ್ಯೋ ಬಿಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀಡ್ರೀ, ನಾನು ಮತ್ತೆ ಸಿಗ್ತೀನಿ. ..................................... ಸಪ್ತಗಿರಿಯವ್ರಿಗೆ ಕಾಲ್ ಮಾಡಿದೆ. ಸಗಿ: ಓಹೋಹೋ ಏನು ಚಿಕ್ಕು ಆರಾಮ, ನಿಮ್ಗೆ ಕಾಲ್ ಮಾಡೋಣ ಅಂತಿದ್ದೆ. ನಾ: ಏನು ವಿಶೇಷ. ಸಗಿ: ಏನಿಲ್ಲ ನಿಮ್ಮ ಊರಲ್ಲೇ ಇದ್ದೆ ಅದ್ಕೆ. ನಾ: ಓಹೋ, ನಿಮ್ ಹುಡ್ಗಿ ಜೊತೆ. ಸಗಿ: (ನಾಚುತ್ತಾ) ಹೂನ್ರೀ. ನಾ: (ಮಲ್ನಾಡಿನ ಹುಡುಗ್ರೆ ಹುಡ್ಗೀರಿಲ್ಲ ಅಂತ ಸಾಯ್ತಿದ್ದಾರೆ ಅಂಥದ್ರಲ್ಲಿ ಪುಣ್ಯಾತ್ಮ ಒಂದು ಕೌಂಟ್ ಕಡಿಮೆ ಮಾಡ್ಬಿಟ್ಟ ). ಸಗಿ: ಚಿಕ್ಕು, ಏನು ಯೋಚಿಸ್ತಿದೀರಾ ಮಾತಾಡ್ರೀ... ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ ಅಂತ ಆದ್ರೆ ನೀವು ಅಲ್ಲಿದೀರಾ, ನೀವು ಬರೋ ಸೀನ್ ಸಹ ಇಲ್ಲ. ಸಗಿ: ಓ ಆಗಲ್ಲ ಹೋಗಿ ಬನ್ನಿ.
Rating
No votes yet

Comments