ಸಲಹೆ - ಮಾರುತ್ತರ
ಒಂದು ಸಲಹೆ:
ಸಲ್ಲದೀ ನಡವಳಿಕೆ ನೇಹಿಗ!
ಇಲ್ಲದಿಹ ಬೇಸರದ ಸೋಗಿನ
ಲೊಲ್ಲೆ ಗೆಳೆಯರ ಕೂಟವೆನ್ನುತ ತಿರುಗಿ ಕುಳಿತಿಹೆಯಾ?
ಮೆಲ್ಲ ಯೋಚಿಸು ಮತ್ತೆ ಜೀವನ
ದಲ್ಲಿ ಒಂಟಿಯ ದಾರಿ ಸೊಗಸಿರ
ದೆಲ್ಲರೊಳಗೊಂದಾದರೊಳಿತೆನುವುದನು ಮರೆತಿಹೆಯಾ?
ಮಾರುತ್ತರ:
ಹತ್ತರೊಂದಿಗೆ ಆಗಲಾರೆನು
ಮತ್ತೆ ಹನ್ನೊಂದನೆಯ ಹಕ್ಕಿಯು
ಎತ್ತ ಹೋದರು ದಾರಿ ಹುಡುಕುವ ಧೈರ್ಯ ಜೊತೆಗಿರಲು
ಸುತ್ತು ದಾರಿಯು ಬೇಡ ಜಗದವ
ರೆತ್ತ ನಡೆಯಲಿ ಗುರಿಯ ತಿಳಿದಿಹೆ
ನತ್ತಲೇ ನಡೆವಂತ ಮುಡಿವನು ನಾನು ತಾಳಿಹೆನು
-ಹಂಸಾನಂದಿ
ಚಿತ್ರಕೃಪೆ: ಪದ್ಯಪಾನ
Rating