ನೀನೊಬ್ಬನೇ ಅಣ್ಣಾ...............

ನೀನೊಬ್ಬನೇ ಅಣ್ಣಾ...............

ಕವನ

ಈ ಬಾಳ ಕಡಲಲ್ಲಿ ನೋವಿನ ಅಲೆ ಎದ್ದಾಗ

ನಿನ್ನ ನೆನಪಾಗುವುದು......

ಈ ಕಣ್ಣ ಮೂಲೆಯಲಿ ಕಂಬನಿ ಜಿನುಗಿದಾಗ

ಮನ ನಿನಗಾಗಿ ತಡಕಾಡುವುದು......

ಆ ನಿನ್ನ ಪ್ರೀತಿಗಾಗಿ ಈ ಜೀವ

ಮೊರೆ ಇಡುವುದು....

ಈ ಹೃದಯಕ್ಕೆ ಘಾಸಿಯಾದಾಗ

ನಿನ್ನ ಹೆಸರನ್ನೇ ಕೂಗುವುದು...

ಅದೇಕೆಂದು ಪ್ರಶ್ನಿಸುವೆಯಾ....?

ಈ ಸ್ವಾರ್ಥಮಯ ಜಗದಲ್ಲಿ

ನೀನೊಬ್ಬನೇ ಕಣೋ ಅಣ್ಣಾ....

ಈ ತಂಗಿಯ ನೋವಿಗೆ

ಮಿಡಿಯುವವನು....

ಬಳಿ ಕರೆದು ತಲೆ ಸವರಿ

ಮುದ್ದಿಸುವವನು...

ಈ ಭೂಮಿ ಆ ಬಾನು ಇರೋವರೆಗೂ

ರಕ್ಶಿಸುವವನು....

ಈ ಬಾಳ ಗಾಲಿಯಲಿ ನನಗಾಸರೆ ನೀಡುವವನು...

ಮೂರು ಲೋಕ ಅಲೆದರೂ ನಿನಗಿಂತ

ಮಿಗಿಲು ಏನಿಲ್ಲ ಕಣೋ...

ನಿನ್ನ ಪ್ರೀತಿಯೊಂದೇ ಸಾಕೆನಗೆ

ಈ ಜಗವ ಜಯಿಸಲು.......

Comments