ಸಾವಿನ ಭಯ (ಶ್ರೀ ನರಸಿಂಹ 40)

ಸಾವಿನ ಭಯ (ಶ್ರೀ ನರಸಿಂಹ 40)

ಸಾಯಲೇಬೇಕಿಹುದೊಂದು ದಿನ ಎಂಬುದದು ದಿಟವು
ಆದರೂ ಅದನು ನೆನೆಯೆ ಭಯಪಡುವುದು ಮನವು
ದೇಹವೇ ತಾನೆಂದೆನುವ ಭ್ರಮೆಯಲ್ಲಿ ಮುಳುಗಿಹುದು


ದೇಹ ನಶಿಸುವುದೆಂಬುದ ಅರಿತು ಅರಿಯದಂತಿಹುದು
 
ಸುಖವನರಸಿ ಹೊರಗಿರುವ ಮನಸ ಒಳಗೆ ತರಬೇಕು
ದೇಹ ತಾನಲ್ಲವೆನುವ ಸತ್ಯವನು ಮನ ಅರಿಯಬೇಕು
ಕಾಲನ ಕರೆಯೂ ಬರವುದದಕೆ ಸಮಯವೆಂಬುದಿಲ್ಲ
ಸಾಧನೆಯ ಮಾಡದೆ ನೀ ಕಾಲ ಕಳೆವುದು ಸರಿಯಲ್ಲ
 
ಹುಟ್ಟು ಸಾವುಗಳೆಂಬುವವು ದೇಹಕೆ ಹೊರತು ಆತ್ಮಕೇನಲ್ಲ
ಮನಸನಿರಿಸು ಶ್ರೀನರಸಿಂಹನಂಘ್ರಿಯಲಿ ಭಯವೆಂಬುದಿಲ್ಲ

 

Rating
No votes yet

Comments