ಮಾತಾಡುತ್ತಿವೆ ಮೋಡಗಳು

ಮಾತಾಡುತ್ತಿವೆ ಮೋಡಗಳು

ಮೌನವಾಗಿದ್ದ

ಮೋಡಗಳೆಲ್ಲಾ

ಮಾತಾಡುತ್ತಿವೆ

 

ಸಿಂಚನಗಳ

ಸುರಿಮಳೆಯನ್ನೇ

ಸುರಿಸುತ್ತಿದೆ


ಬಾಯಾರಿದ

ಬುವಿಯ

ಬಾಯಾರಿಸುತ್ತಿದೆ



ಕತ್ತಲಾವರಿಸಿದ್ದ

ಕನಸುಗಳಿಗೆ

ಕಳೆ ತುಂಬುತ್ತಿದೆ



ಮಲಗಿದ್ದ

ಮಲೆನಾಡಿಗೆ

ಮಿಂಚನ್ನು ಹರಿಸಿದೆ



ಬಳಲಿಹೋದ

ಬಯಲುಸೀಮೆಗೆ

ಬೆಳಕಾಗಿದೆ



ಕಳೆಗುಂದಿದ್ದ

ಕರಾವಳಿಗೆ

ಕಂಪನ್ನೆರೆದಿದೆ

 

 

 

 

Rating
No votes yet

Comments