ಪ್ರಸವ ವೇದನೆ

ಪ್ರಸವ ವೇದನೆ

ಕವನ

ತಿಂಗಳುಗಳಿಂದ ಪ್ರಸವ ವೇದನೆಯಿಂದ


ನರಳಾಡುತ್ತಿದ್ದ ಮೇಘಗಳಿಗೆ ಪ್ರಸವದ


ಸಮಯ ಸನಿಹವಾಯಿತೆಂದೆನಿಸಿದೆ..


 


ಎರಡು ತಿಂಗಳ ಮುಂಚೆಯೇ


ದಿನಗಳು ತುಂಬಿದ್ದರೂ ಹಡೆಯಲಿಲ್ಲ


ನೀನು ಮಳೆ ಎಂಬ ಕೂಸನು 


 


ಭಯವಿತ್ತೆ ನಿನಗೆ ನಿನ್ನ ಕೂಸನು


ಯಾರೂ ಮುದ್ದಿಸುವುದಿಲ್ಲವೆಂದು?


ಯಾರೂ ಸಂಭ್ರಮಿಸುವುದಿಲ್ಲವೆಂದು?


 


ನೋಡಿದಿರಾ ಓ ಮೇಘಗಳೇ


ನಿಮ್ಮ ಮಗುವನು ನಾವು ಹೇಗೆ


ಮುದ್ದಿಸುವೆವೆಂದು, ಸಂಭ್ರಮಿಸುವೆವೆಂದು.... 

Comments