‍'ಚುಟಕುಗಳು' 13

‍'ಚುಟಕುಗಳು' 13

 


ಕಸ್ತೂರಿ ಮೃಗ



ತಾನಿರುವ ಜಾಗದ


ಗುಟ್ಟು ಹೇಳುವುದಿಲ್ಲ


ಆದರೆ ಅದರ


ಸುವಾಸನೆಯ


ಜಾಡರಸಿ ಹೋದರೆ


ಅದಿರುವ ತಾಣದ ಜಾಡು


ಕಂಡು ಹಿಡಿಯಬಹುದು


 


***


 


ಕಾಲ ನಿರಂತರವಾಗಿ


ಚಲಿಸುವ ಒಂದು


ಜೀವಂತ ಪ್ರವಾಹ


ಸತ್ಯವನರಸಲು


ಪ್ರವಾಹದಲಿ ಈಜುತ್ತ


ತೆರೆಗಳ ದಾಟಿ


ಮುಂದೆ ಹೋಗುತ್ತ


ಮುಂದುವರಿಯುತ್ತಲೇ


ಇರಬೇಕು ಅದು ಜೀವನ


ಈಜು ನಿಂತಿತೋ


ಅದು ಸಾವು


***


Rating
No votes yet

Comments

Submitted by H A Patil Thu, 09/27/2012 - 20:29

In reply to by Prakash Narasimhaiya

ಪ್ರಕಾಶ ನರಸಿಂಹಯ್ಯ ನವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ಓದಿದೆ, ಸಂಪದದಲ್ಲಿ ಕಾಣಿಸಿಕೊಂಡ ತೊಂದರೆಯಂದಾಗಿ ಅಲ್ಲದೆ ನನ್ನ ವ್ಯಯಕ್ತಿಕ ಕಾರಣಗಳಿಂದಾಗಿ ಸಂಪದಕ್ಕೆ ಬರಲಾಗಿರಲಿಲ್ಲ, ಮೆಚ್ಚುಗೆಗೆ ಧನ್ಯವಾದಗಳು.

Submitted by H A Patil Thu, 09/27/2012 - 20:34

In reply to by mmshaik

ಮೇಡಂ ವಂದನೆಗಳು
ಚುಟುಕುಗಳ ಮೆಚ್ಚಿ ಬರೆದಿದ್ದೀರಿ. ನಿಮ್ಮ ಗಜಲ್ ಗಳನ್ನು ಕಾಯಂ ಆಗಿ ಓದುತ್ತಿರುವೆ ಬಹಳ ಚೆನ್ನಾಗಿ ಬರೆಯುತ್ತಿದ್ದೀರಿ, ಮೆಚ್ಚುಗೆಗೆ ಧನ್ಯವಾದಗಳು.

Submitted by H A Patil Thu, 09/27/2012 - 20:45

In reply to by venkatb83

ವೆಂಕಟೇಶ ರವರಿಗೆ ವಂದನೆಗಳು, ಕಥಾನಕವೊಂದನ್ನು ಸಂಪದದಲ್ಲಿ ಬರೆಯುತ್ತಿದ್ದ ಕಾರಣ ( ಅಪರಿಚಿತ ) ಚುಟುಕುಗಳಿಗೆ ವಿರಾಮ ನೀಡಿದ್ದೆ, ಕಥಾನಕ ಮುಗಿದಿದೆ, ಕಾರಣ ಮತ್ತೆ ಚುಟುಕು ಪ್ರಪಂಚಕ್ಕೆ ಬಂದಿರುವೆ, ಮೆಚ್ಚುಗೆಗೆ ಧನ್ಯವಾದಗಳು

Submitted by H A Patil Thu, 09/27/2012 - 20:47

In reply to by lpitnal@gmail.com

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ಓದಿದೆ, ಚುಟುಕುಗಳನ್ನು ಬಹಳ ಸುಂದರವಾಗಿ ಮತ್ತು ಅರ್ಥಪೂರ್ಣವಾಗಿ ಗ್ರಹಿಸಿದ್ದೀರಿ,ದನ್ಯವಾದಗಳು.