ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ವಿಶ್ವೇಶ್ವರಯ್ಯನವರಿಗೆ ಶಿರಬಾಗಿ ವಂದಿಸುವೆವು !
ಕೊಂಡಿ :
ಚಿತ್ರ : '೧೯೬೧ ನೇ ಇಸವಿ, ಡೆಕ್ಕನ್ ಹೆರಾಲ್ಡ್ ದಿನ ಪತ್ರಿಕೆಯ ಕೃಪೆ' :
'ಸರ್. ಎಂ.ವಿ'.ರವರ ಪಕ್ಕದಲ್ಲಿ 'ಪಂಡಿತ್. ಜವಾಹರ್ ಲಾಲ್ ನೆಹ್ರು', ಕುಳಿತಿದ್ದಾರೆ. ನಿಂತಿರುವವರು, 'ಡಾ, ಎಂ.ಆರ್.ಕೃಷ್ಣ ಮೂರ್ತಿ', 'ಶ್ರೀ.ಮತಿ.ಕೃಷ್ಣಮೂರ್ತಿ'. 'ಮೊಮ್ಮೊಗ' ಮತ್ತು 'ಮೊಮ್ಮಗಳ' ನ್ನು ಚಿತ್ರದಲ್ಲಿ ಕಾಣಬಹುದು.
ಪ್ರತಿವರ್ಷದಂತೆ, ಈ ವರ್ಷ ಸೆಪ್ಟೆಂಬರ್ ತಿಂಗಳ ೧೫ ರಂದು, 'ಇಂಜಿನಿಯರ್ಸ್ ದಿನ,'ವೆಂದು ಆಚರಿಸುವುದು ವಾಡಿಕೆಯಾಗಿದೆ. ಅದು ಅರ್ಥಪೂರ್ಣವೂ ಸರಿ. ಈ ದಿನ, ನಾವೆಲ್ಲಾ 'ಡಾ. ಸರ್. ಎಂ. ವಿ'. ರವರ ಆದರ್ಶಗಳನ್ನೂ ಮಹತ್ಕಾರ್ಯಗಳನ್ನು ನೆನೆಸುವ ಪ್ರಯತ್ನ ಮಾಡಿ, ನಾವೂ ನಮ್ಮ ಜನ್ಮ ಭೂಮಿಗೆ ಸೇವೆಮಾಡುವ ಪಣ ತೊಡಬೇಕು. ನಮ್ಮ ಜನತೆಗೆ, ಇನ್ನಾದರೂ ಒಳ್ಳೆಯ ಕೆಲಸ ಮಾಡಿ ಸಹಕರಿಸುವ ಪ್ರತಿಜ್ಞೆಯನ್ನು ಮಾಡಬೇಕು !
ಸರ್.ಎಂ.ವಿ.ರವರ ಚಿರಸ್ಮಾರಕ.
ಶ್ರೀ. ರಮೇಶ್ ಕಾಮತ್ ರವರ ಅನುಮತಿಯ ಮೇರೆಗೆ :
-ಶ್ರೀ. ರಮೇಶ್ ಕಾಮತ್ ರವರ ಅನುಮತಿ ಮೇರೆಗೆ :
ನನಗೆ ಸುಮಾರು ೫೪ ವರ್ಷ ಹಿಂದೆ ಜರುಗಿದ 'ಡಾ. ಸರ್. ಎಂ. ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸಮಾರಂಭದ ದಿನ'ದ ಜ್ಞಾಪಕ ಪ್ರತಿವರ್ಷದಂತೆ ಈ ವರ್ಷವೂ ಬರುತ್ತಿದೆ. ಅದಕ್ಕೆ ಕಾರಣ, ನಾನು ಸಕ್ರಿಯವಾಗಿ ಅಂದು ಭಾಗವಹಿಸುವ ಪುಣ್ಯ ನನ್ನಪಾಲಿಗೆ ಒದಗಿತ್ತು. ನಾನು, ಸನ್, ೧೯೬೧ ರಲ್ಲಿ, 'ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯುಬಿಲಿ ಟೆಕ್ನೊಲಾಜಿಕಲ್ ಇಸ್ಸ್ಟಿ ಟ್ಯೂಟ್' ನಲ್ಲಿ, 'ಟೆಕ್ಸ್ ಟೈಲ್ಸ್ ಇಂಜಿನಿಯರಿಂಗ್ ಡಿಪ್ಲೊಮ' ಗೆ ಸೇರಿದ್ದೆ. ’ಸ್ಕೌಟ್ ಅಂಡ್ ಗೈಡ್ಸ್’ ನಲ್ಲಿ ಸೇರಿದ್ದೆ. ಆವರ್ಷವೇ ನಮ್ಮ ಭಾರತದ ಶಿಲ್ಪಿ, ಭಾರತ ರತ್ನ, ಡಾ. ವಿಶ್ವೇಶ್ವರಯ್ಯ ನವರ ಶತಮಾನೋತ್ಸವ ಆಚರಿಸುವ ಬಗ್ಗೆ 'ರಾಜ್ಯ ಸರಕಾರದ ಸರ್ಕುಲರ್' ಬಂತು. ಅವರೇ ಸ್ಥಾಪಿಸಿದ 'ಆಕ್ಯುಪೇಶನ್ ಇನ್ ಸ್ಟಿ ಟ್ಯೂಟ್,' ಮತ್ತು 'ಟೆಕ್ನೊಲಾಜಿಕಲ್ ಇನ್ ಸ್ಟಿ ಟ್ಯೂಟ್' ನ ನಮ್ಮ 'ಪ್ರೊಫೆಸರ್ ಎಮ್.ಆರ್. ಕೃಷ್ಣಮೂರ್ತಿಗಳು' 'ಎಂ.ವಿ.ಯವರ ಶತಮಾನೋತ್ಸವದ ಮುಂದಾಳತ್ವ'ವನ್ನು ತೆಗೆದುಕೊಂಡಿದ್ದರು. ಅವರು ನಮ್ಮ ಸ್ಕೌಟ್ ಮಾಸ್ಟರ್, 'ಜೋಸೆಫ್' ರವರನ್ನು ಕರೆದು ಆದಿನ ಮಾಡಬೇಕಾದ ರೂಪರೇಖೆಗಳನ್ನು ತಿಳಿಯಪಡಿಸಿದರು. ’ಮೈಸೂರ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ’, ಹಾಗೂ ಬೆಂಗಳೂರ್ ಛೇಂಬರ್ ಆಫ್ ಕಾಮರ್ಸ್’ ಮೊದಲಾದ ಸಂಸ್ಥೆಗಳ ಪ್ರಮುಖರಾಗಿದ್ದ, 'ಜೆ. ಬಿ. ಮಲ್ಲಾರಾಧ್ಯ'ರು 'ಸರ್ ಎಮ್. ವಿ. ಶತಮಾನೋತ್ಸವ ಸಮಿತಿಯ ಅಧ್ಯಕ್ಷ'ರಾಗಿದ್ದರು. 'ಶ್ರೀ ಬಿ.ಡಿ. ಜತ್ತಿ'ಯವರು ಮುಖ್ಯಮಂತ್ರಿಗಳಾಗಿದ್ದ ಕಾರ್ಯಕಾಲದಲ್ಲಿ ಜರುಗಿತು. ಸಾಯಂಕಾಲ ಬೆಂಗಳೂರಿನ ಭವ್ಯ 'ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್' ನಲ್ಲಿ 'ಕು. ವೈಜಯಂತಿ ಮಾಲಾರ ಭರತನಾಟ್ಯ ಪ್ರದರ್ಶನ'ವಿತ್ತು. ಆ ಸಮಯದಲ್ಲಿ ವಿಶ್ವೇಶ್ವರಯ್ಯನವರಿಗೆ ಬರಲು ಸಾಧ್ಯವಾಗಲಿಲ್ಲ. ಆದರೆ 'ನೆಹ್ರೂರವರು 'ಹಾಜರಿದ್ದು ಭರತನಾಟ್ಯದ ಭವ್ಯತೆಯನ್ನು ಆಸ್ವಾದಿಸಿದರು. ಅದೊಂದು ಸುಂದರ ಸಂಜೆಯಾಗಿತ್ತು.
Comments
ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ...
In reply to ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ... by makara
ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ...
In reply to ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ... by venkatesh
ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ...
In reply to ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ... by makara
ನಾನು ವಿಕಿಪೀಡಿಯಕ್ಕೆ ಬರೆದ,
ನಾನು ವಿಕಿಪೀಡಿಯಕ್ಕೆ ಬರೆದ, ಚಿಕ್ಕ-ಪುಟ್ಟ,ಮೊದಲಾದ ಸುಮಾರು ೧೦೦೦ ಕ್ಕೂ ಹೆಚ್ಚು ಲೇಖನಗಳಲ್ಲಿ ಕೆಲವು ಮನಸ್ಸಿಗೆ ಹಿಡಿಸಿವೆ. ಆರ್. ಕೆ. ಲಕ್ಷ್ಮಣ್ ರವರ ಲೇಖನ, ಜೆ.ಆರ್.ಡಿ.ಟಾಟ,(ವಿಶೇಶ ಲೇಖನವೆಂದು ದಾಖಲಾಗಿದೆ) ಉಸೈನ್ ಬೋಲ್ಟ್, ಇತ್ಯಾದಿ. ಟೊರಾಂಟೋ ಪಬ್ಲಿಕ್ ಲೈಬ್ರರಿ, ದೆಹಲಿಯ ಹಾಗೂ ಟೊರಾಂಟೋನಗರದ ಅಕ್ಷರ್ ಪುರುಶೋತ್ತಮ್ ಮಂದಿರ್, ಹತ್ತಿ ಬೆಳೆ,(ವಿಶೇಶ ಲೇಖನವೆಂದು ದಾಖಲಾಗಿದೆ) ಮೊದಲಾದವು ಸೇರಿವೆ. ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ. ಅದನ್ನು ಸರಿಯಾಗಿ ಓದಿ ಯಾರುಬೇಕಾದರೂ ಈದಿನದ ಬದಲಾವಣೆಗಳನ್ನೂ ಸೇರಿಸಿ ನವೀನೀಕರಿಸಬಹುದು. ಅಭಿಪ್ರಾಯಗಳು ಅಸ್ಪಷ್ಟ ಇಲ್ಲವೇ ಪೂರ್ವಾಗ್ರಹಪೀಡಿತವಾಗಿರದೆ ಇರಬೇಕು. ಮೇಲಾಗಿ ವಿಶಯ ಪ್ರತಿಪಾದನೆಯೇ ಮುಖ್ಯ ಗುರಿ. ನಮ್ಮ ಸ್ಪಂದನೆಗಳಲ್ಲ. ಇತ್ಯಾದಿ ವಿಕಿಪೀಡಿಯವನ್ನು ಒಂದು ಅತ್ಯುತ್ತಮ ವಿಶ್ವಕೋಶವನ್ನಾಗಿಸಿವೆ. ಇಂಗ್ಲೀಷ್ ಲೇಖನಗಳು ಬೇಕಾದಷ್ಟಿವೆ. ಅವೆಲ್ಲಾ ವಿಕಿಪೀಡಿಯದ ನೀತಿಗೆ ಅನುಗುಣವಾಗಿವೆ. ಕನ್ನಡದ ಲೇಖನಗಳು ತೀರ ಕಡಿಮೆ. ಈಗೀಗ ೧೦ ಸಾವಿರವನ್ನು ದಾಟಿವೆ. ಬೆಂಗಾಲಿ, ತಮಿಳು, ಮರಾಠಿ, ತೆಲುಗು, ಮಲೆಯಾಳಿ, ಲೇಖನಗಳು ಸಾಕಾದಷ್ಟಿವೆ. ಕನ್ನಡ ಇನ್ನೂ ಬಹಳ ಹಿಂದಿದೆ. ಇದು ನನಗೆ ಅತೀವ ಬೇಸರವನ್ನು ಉಂಟುಮಾಡುತ್ತದೆ.
ಟೊರಾಂಟೋನಗರದಲ್ಲಿದ್ದಾಗ ನಾನು ಗೂಗಲ್ ತಾಣವನ್ನು ತೆರೆದಿಟ್ಟಾಗ, ಬೆಂಗಾಲಿ, ಪಂಜಾಬಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕೆಲವು ಮಾಹಿತಿಗಳು ದೊರೆತವೆ. ಆದರೆ ಎಲ್ಲೂ ಕನ್ನಡದ ಸೊಲ್ಲೇ ಇಲ್ಲ. ನಗರದಲ್ಲಿ ಕನ್ನಡ ಸಂಗವಿದೆ. ಆದರೆ ಅವರ ಸುಂದರ ವೆಬ್ ಸೈಟ್ ನಲ್ಲಿ ಕನ್ನಡದ ವಿವಗಗಳಿರಲಿಲ್ಲ. ನಾನು ಆ ವಿಶಯಗಳನ್ನು ಅನುವಾದಿಸಿ ಕನ್ನಡ ವಿಕಿಪೀಡಿಯದಲ್ಲಿ ದಾಖಲಿಸಿದೆ. ಅಲ್ಲಿನ ಅಧಿಕಾರಿಗಳು ಪ್ರಶಂಸಿದರು. ಆದರೆ ನನಗೆ ಬೇಕಾದ ಚಿತ್ರಗಳನ್ನು ಇನ್ನೂ ಒದಗಿಸಿಲ್ಲ.
ಅಕ್ಷರ ಪುರುಷೋತ್ತಮ ಮಂದಿರ ಲೇಖನದಲ್ಲಿ ಅದನ್ನು ತಲುಪಲು ಹೇಗೆ ಮುಂದುವರಿಯಬೇಕು, ಯಾವ ಬಸ್ಸು, ಯಾವ ರೈಲು ಇತ್ಯಾದಿ ಹಿಡಿಯಬೇಕು ಎನ್ನುವ ವಿವರಗಳನ್ನು ದಾಖಲಿಸಿದ್ದೇನೆ. ಯೇಕೆಂದರೆ, ನನಗೆ ಗೂಗಲ್ ನಲ್ಲಿ ಸರಿಯಾದ ಮಾಹಿತಿ ಸಿಗದೆ ಪರದಾಡಬೇಕಾಯಿತು.
In reply to ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ... by makara
ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ..@ಹಿರಿಯರೇ...
ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ...
In reply to ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ... by swara kamath
ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ...
ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ...
In reply to ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ... by venkatb83
ಉ: ಆಧುನಿಕ ಕರ್ನಾಟಕದ ಅಮರ ಶಿಲ್ಪಿ, ಭಾರತ ರತ್ನ, ಸರ್. ಎಂ. ...