ಸಾರ್ವಜನಿಕ ಉದ್ಯಾನದಲ್ಲಿ ಹತ್ತಿಗಿಡ !

ಸಾರ್ವಜನಿಕ ಉದ್ಯಾನದಲ್ಲಿ ಹತ್ತಿಗಿಡ !

ಇದನ್ನು ನಾನು ಹಿಂದೆ ಹಲವುಬಾರಿ ದಾಖಲಿಸಿದ್ದೆ. ಆದರೆ ನಾನು 'ಕೆನಡಾ'ದಿಂದ ವಾಪಸ್ ಬಂದಮೇಲೆ ಮತ್ತೆ ಪುನಃ ಹತ್ತಿಗಿಡವನ್ನು ನೋಡುವ ಸಂಧಿ ಒದಗಿಬಂತು. ನಮ್ಮ ಗೆಳೆಯರೊಬ್ಬರು ಆ ಹತ್ತಿಗಿಡವನ್ನು ಸಂರಕ್ಷಿಸಿದ್ದರು.  ಈ 'ದೇಸಿ ಹತ್ತಿ' ಅಂತಹ ಉತ್ತಮ ಹತ್ತಿ ತಳಿಗೆ ಸೇರದಿದ್ದರೂ ಯಾವುದೇ ಸಾರ್ವಜನಿಕ ಪಾರ್ಕ್ ನಲ್ಲಿ ನಾನೇ ಇದುವರೆಗೂ ಇಂತಹ ಗಿಡಗಳನ್ನು ಹೊಂದಿದ ಪ್ರಸಂಗವನ್ನು ಕಂಡಿಲ್ಲ. ಹಾಗಾಗಿ ಇದಕ್ಕೆ ಅತಿ ಪ್ರಾಮುಖ್ಯತೆ !

 

Comments

Submitted by H A Patil Tue, 10/09/2012 - 17:21

ವೆಂಕಟೇಶ ರವರೆ ವಂದನೆಗಳು ' ಸಾರ್ವಜನಿಕ ಉದ್ಯಾನದಲ್ಲಿ ಹತ್ತಿಯ ಗಿಡ ' ಕುರಿತು ನೀವು ಬರೆದ ಬರಹ ಓದಿದೆ. ಯಾವ ಹತ್ತಿಯ ಗಿಡ ? ನೀವು ಹಾಕಿದ ಫೋಟೋಗಳು ನಮ್ಮ ಕಂಪ್ಯೂಟರ್ ನಲ್ಲಿ ಕಾಣಿಸಿ ಕೊಳ್ಳುತ್ತಿಲ್ಲ, ನಮ್ಮ ಕಡೆಗೆ 1960 ವರೆಗೆ ಲಕ್ಷ್ಮಿ ಮತ್ತು ಜಯಧರ ಎಂಬ ಹತ್ತಿಗಳನ್ನು ಬೆಳೆಯುತ್ತಿದ್ದರು.ಈಗ ಆ ತಳಿಗಳು ಇವೆಯೋ ಇಲ್ಲವೋ, ಇಲ್ಲಿಯೂ ಸಹ ಹೈಬ್ರೀಡ್ ತಳಿಯದೆ ರಾಜ್ಯಭಾರವೋ ಗೊತ್ತಿಲ್ಲ. ನಿಮ್ಮ ಕುತೂಹಲದ ದೃಷ್ಟಿಗೆ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳುವ ನಿಮ್ಮ ಆಸಕ್ತಿಗೆ ಧನ್ಯವಾದಗಳು.
Submitted by venkatesh Tue, 10/09/2012 - 18:41

In reply to by H A Patil

ಈ ಹತ್ತಿ ತಳಿ ಯಾವುದು ಅನ್ನೋದು ಗೊತ್ತಿಲ್ಲ. ಹೇಗೋ ಯಾರೋ ತಂದು ಹಾಕಿದ್ದು. ಅದರ ಸ್ಟೇಪಲ್ ಲೆಂತ್ ನಾನು ನೋಡಿದ್ದೆ. ಅದು ಬಹಳ ಕಡಿಮೆ. ಅಂದ್ರೆ ದೇಸಿ ಹತ್ತಿ. ಜಯಧರ್, ಲಕ್ಷ್ಮಿ ಒಳ್ಳೆ ಹತ್ತಿಗಳು. ಜಯಧರ್ ಹರ್ಬೇಸಿಯಮ್ ಎನ್ನುವ ದೇಶೀ ತಳಿ. ಆದರೆ ಲಕ್ಷ್ಮಿ 'ಹರ್ಸುಟಮ್' ಎನ್ನುವ ಅಮೇರಿಕನ್ ತಳಿ. ಇದು ಈಗಾಲೆ ನುರುವರ್ಷದಿಮ್ದ ಧಾರವಾಡದಲ್ಲಿ ಫೇಮಸ್ ಆಗಿದೆ. ಈಗ ಸುಮಾರು ವರ್ಷಗಳಿಂದ ನಾನು ಆ ವಲಯದಲ್ಲಿ ಸಕ್ರಿಯವಾಗಿಲ್ಲ. ನಾನು 'ಮುಂಬೈ ನ ಸಿರ್ಕಾಟ್ ಎಂಬ ಹತ್ತಿ ಸಂಶೋಧನಾಲಯ'ದಲ್ಲಿ ನನ್ನ ಐಡಿ ಸೇವೆಯನ್ನೂ ಮಾಡಿ ನಿವ್ರುತ್ತನಾದೆ. (೨೦೦೪ ರಲ್ಲಿ) ಒಂದು ಬೆಲೆ ಅದೇ ತಳಿ ಇಲ್ಲದಿದ್ದರೆ ಅದಕ್ಕಿಂತ ಉತ್ತಮವಾದದನ್ನು ಹತ್ತಿ ವಿಜ್ಞಾನಿಗಳು ಆರಿಸುತ್ತಾರೆ. ಹತ್ತಿ ರಾಜಕೀಯ, ಭಾರಿ ದೊಡ್ಡ ಪ್ರಮಾಣದ್ದು. ಒಂದು ಸಲ, 'ಖಾಸಗಿ ಬೀಜ ವ್ಯಾಪಾರಿಗಳು' ಕಲಬೆರಕೆ ಮಾಡಿ ನಮ್ಮ ಸಂಶೋಧನೆಯ ಫಲಿತವನ್ನೇ ಬುಡಮೇಲು ಮಾಡಿದರು, ಎಂದು ನಾನು ಪೇಪರ್ ನಲ್ಲಿ ಓದಿದೆ. ನೆಟ್ ನಲ್ಲಿ ಎಲ್ಲವು ಲಭ್ಯ ಓದಿ. ನನಗೆ ತಮ್ಮ ಜೊತೆ ಮಾತಾಡಿ ಖುಷಿಯಾಗಿದೆ.
Submitted by venkatesh Tue, 10/09/2012 - 18:43

In reply to by venkatesh

ಚಿತ್ರಗಳು ಕಾಣಿಸುತ್ತಿಲ್ಲ. ಅನ್ನುತ್ತಿರಿ. ನನಗೆ ಕಾಣಿಸುತ್ತಿದೆ. ಇನ್ನು ಬದಲಾವಣೆ ಮಾಡಲು, ಮತ್ತು ಹೊಸ ಚಿತ್ರಗಳನ್ನೂ ಸೇರಿಸಲು ಅವಕಾಶವಿಲ್ಲ. ಇದನ್ನು ನಾನು ನಿರ್ವಾಹಕರಿಗೆ ತಿಳಿಸಿದ್ದೇನೆ.