' ಚುಟುಕುಗಳು ' 15

' ಚುಟುಕುಗಳು ' 15

 


 


 


ಸೋಲುಗಳನ್ನು


ಅರಗಿಸಿ ಕೊಂಡವ


ಗೆಲುವು ಕಾಣುತ್ತಾನೆ


 


ಅವುಗಳ


ಕಪಿಮುಷ್ಟಿಗೆ ಸಿಲುಕಿದವ


ಸೋಲುಗಳ ಕೂಪದಲಿ


ಸಮಾಧಿಯಾಗುತ್ತಾನೆ


 


     ***


 


ಉದ್ಧಟತನದಿಂದ


ಊಹೆಯಿಂದ ಸುಳ್ಳನ್ನು


ಸತ್ಯವೆಂಬಂತೆ


ಬಿಂಬಿಸಿ ಬಿಡಬಹುದು


 


ಆದರೆ


 


ಸುಳ್ಳು ಎನ್ನುವುದು


ಉರಿದು ಹೋದ 


ಮರದ ಕೊರಡಿನ ಬೂದಿ


 


     ***

Rating
No votes yet

Comments

Submitted by lpitnal@gmail.com Tue, 10/09/2012 - 12:35

ಶ್ರೀ ಹನುಮಂತ ಅನಂತ ಪಾಟಿಲರವರೇ,ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಅರಗಿಸಿ ಕೊಂಡವ ಗೆಲುವು ಕಾಣುತ್ತಾನೆ ,ಅವುಗಳ ಕಪಿಮುಷ್ಟಿಗೆ ಸಿಲುಕಿದವ ಸೋಲುಗಳ ಕೂಪದಲಿ ಸಮಾಧಿಯಾಗುತ್ತಾನೆ. ಅದೆಷ್ಟು ನಿಜವಲ್ಲವೇ. ಜೀವನದಲ್ಲಿ ಧೈರ್ಯವೇ, ಧರ್ಮದೊಂದಿಗೆ ಗೆಲ್ಲುವುದೆನ್ನುವ ತಿರುಳು. ಸುಂದರವಾದ ಸಾಲುಗಳು. ಉತ್ತಮ ಚುಟುಕು ಸಾಲುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

Submitted by swara kamath Wed, 10/10/2012 - 16:25

ಪಾಟೀಲರೆ ಎಂದಿನಂತೆ ತಮ್ಮ ಚುಟುಕುಗಳು ಸರಳವಾಗಿ ತುಂಬಾ ಅರ್ಥಪೂರ್ಣ ವಾಗಿರುತ್ತವೆ.
<< ಸುಳ್ಳು ಎನ್ನುವುದು ಉರಿದು ಹೋದ ಮರದ ಕೊರಡಿನ ಬೂದಿ >> ಅಂದರೆ ಉರಿದು ಹೋದ ಕೊರಡಿನ ಬೂದಿಯಿಂದ ಮತ್ತೆ ಮರದ ಕೊರಡು ಹೇಗೆ ಪಡೆಯಲಾಗದೊ ಹಾಗೆ ಸುಳ್ಳನ್ನು ಒಮ್ಮೆ ಹೇಳಿ ನಂತರ ಅದನ್ನು ಅಲ್ಲಗೆಳೆಯುವುದು ಅಷ್ಟೇ ಕಷ್ಟಕರ ಎಂಬರ್ಥದಲ್ಲಿ ಬರೆದಿರುವಿರಿ ಎಂದು ನಾನು ಭಾವಿಸುತ್ತೇನೆ.
ವಂದನೆಗಳು

Submitted by H A Patil Wed, 10/10/2012 - 19:15

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆ ಓದಿದೆ.<<< ಅಂದರೆ ಉರಿದು ಹೋದ ..........ಅಲ್ಲಗಳೆಯುವುದು ಅಷ್ಟೆ ಕಷ್ಟಕರ>>>. ನಿಮ್ಮ ಊಹೆ ಅಕ್ಷರಶಃ ಸರಿ ನೀವು ಗ್ರಹಿಸಿದ ರೀತಿಯಲ್ಲಿಯೆ ನಾನು ಬರೆದಿರುವುದು, ಧನ್ಯವಾದಗಳು.

Submitted by partha1059 Wed, 10/10/2012 - 19:00

ಆದರೆ ಈಗೀಗ ಸುಳ್ಳು ಸತ್ಯಗಳು ಹೇಳುವವರ ಸ್ಥಾನದ ಮೇಲೆ ನಿರ್ದಾರವಾಗುತ್ತದೆ ಅನ್ನುವುದು ಬೇಸರದ ಸಂಗತಿ

Submitted by sathishnasa Thu, 10/11/2012 - 14:57

ಸೋಲು ಗೆಲುವಿನ ಮಟ್ಟಿಲಾಗಬೇಕು, ಸುಳ್ಳು - ಮೊದಲು ಸಿಹಿ ಕಡೆಗೆ ಕಹಿ, ಸತ್ಯ- ಮೊದಲು ಕಹಿ ಕಡೆಗೆ ಸಿಹಿ. ಸೊಗಸಾದ ಚುಟುಕಗಳು ಪಾಟೀಲ್ ರವರೇ ......ಸತೀಶ್

Submitted by H A Patil Thu, 10/11/2012 - 16:38

In reply to by sathishnasa

ಸತೀಶ ರವೆರಿಗೆ ವಂದನೆಗಳು
ಚುಟುಕುಗಳ ಸಾರವನ್ನು ಕಡಿಮೆ ಶಬ್ದಗಳಲ್ಲಿ ಅರ್ಥಪೂರ್ಣವಾಗಿ ಗ್ರಹಿಸಿ ಪ್ರತಿಕ್ರಿಯಿಸಿದ್ದೀರಿ, ಮೆಚ್ಚುಗೆಗೆ ಧನ್ಯವಾದಗಳು.