ತಲೆ-ಚಿಂದಿ !!

ತಲೆ-ಚಿಂದಿ !!

 

ತಲೆ
 
ಬರುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ಓದುವಾಗ ಮಂಕ್’ತಲೆ
ಗಮನವೋ ಅವಳತ್ತಲೆ
ನಲವತ್ತರಲ್ಲೇ ಬಕ್’ತಲೆ
ಅವಶ್ಯವಿಲ್ಲ ಬೈತಲೆ
ಅಂತೆಲ್ಲ ನುಡಿಯುತ್ತಲೇ
ಯಾಕಯ್ಯಾ ತಿಂತೀಯಾ ನನ್ ತಲೆ?
 
----
 
ಚಿಂದಿ
 
ಚಿಂದಿಯುಟ್ಟ ತಿರುಕಿಯೋರ್ವಳು
ಕೂಳಿಗಾಗಿ ಬೀದಿ ಅಲೆಯುತ್ತ
ಶಕ್ತಿಯುಡುಗಿ ತೂರಾಡಿ ಬೀಳುತ್ತ
ನಿಂತ ಕಾರಿನ ಗಾಜನ್ನು ಬಡಿಯುತಿದ್ದಳು
 
ಕಂಡಪಟ್ಟೆ ರಮ್ ಕುಡಿದು ತೂರಾಡುತ್ತ
ನಟೀಮಣಿ ಕಾರ ಹೊರಗೆ ಅಡಿಯನಿಟ್ಟಳು
ಚಿಂದಿಯೂ ತೊಡದ ಅವಳ ಕಂಡು ಮರುಗುತ್ತ
ತಿರುಕಿ ತನ್ನ ಚಿಂದಿ ಹರಿದು, ಮಾನ ಮುಚ್ಚಿದಳು
 

 

Comments

Submitted by Prakash Narasimhaiya Fri, 10/12/2012 - 10:49

In reply to by kavinagaraj

ಆತ್ಮೀಯ ಭಲ್ಲೆಜಿ............ ಸಂಪದಿಗರ ತಲೆ ಸುಲಭವಾಗಿ ಸಿಕ್ಕಿದೆ ಅಂತ ಸುಮ್ಮ ಸುಮ್ಮನೆ ಸಿಕ್ಕಾಪಟ್ಟೆ ತಿನ್ನೋಕ್ಕೆ ಶುರುಮಾಡಿಕೊಂಡರೆ ಹೇಗೆ ಅಂತ ಸ್ವಪ್ನ ಗಿಪ್ನ ಬಿತ್ತೇ? ಅಥವಾ ತಲೆ ಇದ್ಯೊಇಲ್ಲವೊ ಅನ್ನೋ ಟೆಸ್ಟ್ ಡೋಸೋ??? ಹಾಗಿಲ್ಲಾ ಅನ್ನೋಕ್ಕೆ ............... ಇದು.... ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ, ಬಂದು ಹೋಗುವ ನಡುವೆ ಅರೆ ಬೆತ್ತಲೆ!!!!!!!!!!!!!!!! ಸಣ್ಣು ಕಣಪ್ಪೂ...............
Submitted by bhalle Fri, 10/12/2012 - 19:10

In reply to by Prakash Narasimhaiya

ಮೊದಲ ಕವನದಲ್ಲಿ ತಲೆಯನ್ನು ಬಕ್-ತಲೆ ಮಾಡಿ, ನಂತರ ಅದೇ ಗುಂಗಿನಲ್ಲಿ, ತಿನ್ನದೇ ಉಳಿದ ನಂ ತಲೆಗೆ ಬ೦ದ ನಟಿ ಮಣಿಯ ಅವಸ್ಥೆಯನ್ನು ನಿಮ್ಮ ಮು೦ದಿಟ್ಟೆ ... ತಲೆ-ಬಕ್ಕತಲೆ-ಬೆತ್ತಲೆ ನಂ ಕವನ ಇವೆಲ್ಲದರ ಸುತ್ತಲೇ :-)))) ಧನ್ಯವಾದಗಳು ಕೆಲವರು (ಪೂನಂ ಪಾ೦ಡೆ) ಇರುವಾಗಲೂ ಬೆತ್ತಲೆ :-)
Submitted by ಗಣೇಶ Fri, 10/12/2012 - 23:51

In reply to by bhalle

:) ನಿಮಗೆ ಟೈಮ್ ಇರದೇ ಇದ್ರೆ ನಾನು ಹಾಡು ಬರೆದು ಕೊಡ್ತೀನಿ ಅ೦ತ . ಭಟ್ರೆ, ಕ್ಷಮಿಸಿ ಭಲ್ಲೇಜಿ, ತಲೆಯ ಒಂದು ಲೈನ್ ನಂತರ ಚಿಂದಿಯ ಲೈನ್ ನಂತರ ಅಪರಾ ತಪರಾ..ಭಟ್ರ ಸ್ಟೈಲ್ :) ಕವನಗಳು ಚೆನ್ನಾಗಿವೆ.
Submitted by bhalle Sun, 10/14/2012 - 04:38

In reply to by ಗಣೇಶ

ಗಣೇಶ್'ಜಿ ನಮಸ್ಕಾರ‌ ಖ0ಡಿತವಾಗಿಯೂ ... ನನಗೆ ಅವಕಾಶ‌ ಕೊಟ್ಟ‌ ಕೂಡಲೇ ನಿಮ್ಮನ್ನೂ ನನ್ನೊ0ದಿಗೆ ಸೇರಿಸಿಕೊಳ್ಳುತ್ತೇನೆ :‍))) ಧನ್ಯವಾದಗಳು
Submitted by sathishnasa Fri, 10/12/2012 - 14:48

ತಲೆ -ಚಿಂದಿ ..ಚಿಂದಿ ಆಯಿತು ಭಲ್ಲೆಯವರೆ ಯೋಗರಾಜ್ ಭಟ್ಟರಿಗೆ ಛಾಲೇಂಜ್ ಮಾಡೋ ಹಾಗಿದೆ ನಿಮ್ಮ ಈ ಕವನ ....ಸತೀಶ್
Submitted by venkatb83 Fri, 10/12/2012 - 16:19

In reply to by sathishnasa

@ ಭಲಾ ಭಲ್ಲೆಜಿ ....!! ನೀವ್ ಕವನ ಬರೆಯೋದ್ರಲು ಜೋರೆ....!! ಸಾಲುಗಳು ಸತ್ಯ ದರ್ಶನ ಮಾಡಿಸಿದವು.. ಎರಡನೆಯ ಸಾಲುಗಳಿಗೆ ಬಂದರೆ -ಯಾರ ಹತ್ತಿರ ಏನು ಇರಲಿಲ್ಲ...? ಎಂಬ 'ನಗ್ನ' ಸತ್ಯ ತಿಳಿಯಿತು..!! ಯೋಗರಾಜ್ ಭಟ್ರನ್ನ ಭೇಟಿ ಮಾಡಿದ ಹಾಗಿದೆ...! ಸಖತ್ ಮಾರಾಯ್ರೇ... >>>ನಿಮ್ ತಲೆ ಬಾಲ್ಡ್ ಆಗದೆ ಇರೋಕ್ ಕಾರಣ ಏನು ಅಂತ ಈಗ್ ಗೊತ್ತಾತ್ ನೋಡಿ..!! ಶುಭವಾಗಲಿ.. \|
Submitted by bhalle Fri, 10/12/2012 - 19:12

In reply to by venkatb83

ಹ ಹ ಹ ವೆ೦ಕಟೇಶ್ ... ನಾನು ಇನ್ನೊಬ್ಬರ ತಲೆ ತಿನ್ನೋದ್ರಿ೦ದ ನಂ ತಲೆ ಬೋಳಾಗಿಲ್ಲ :-))) ತಲೆ ಬೋಳಾದರು ಅಡ್ಡಿಯಿಲ್ಲ, ಮೈ ಬೋಳಾಗಬಾರದು ಎಂಬುದು ಎರಡನೇ ಕವಿತೆ ಸ೦ದೇಶ ಆದರೆ ಕೆಲವರಿಗೆ ಅದು ಅಪ್ಲೈ ಆಗೋಲ್ಲ ... ಪೂನಂ ಪಾ೦ಡೆಗೆ ಕನ್ನಡ ಬ೦ದಿದ್ರೆ ಓದಿರುತ್ತಿದ್ದಲೋ ಏನೋ :-)
Submitted by bhalle Fri, 10/12/2012 - 19:12

In reply to by sathishnasa

ಸತೀಶ್ ... ತಲೆ-ಚಿ೦ದಿ ಎ೦ದಾಗ ಓದುಗರು 'ವಿಕ್ಕಿ' ಕಥೆ ಹೇಳ್ತಿದ್ದೀನಿ ಅ೦ದುಕೊಳ್ತಾರೆ ಅ೦ತ ಅ೦ದುಕೊ೦ಡಿದ್ದೆ .. ಹಾಗಾಗಲಿಲ್ಲ ... ನಮ್ 'ವಿಕ್ಕಿ' ನಿಮಗೆ ಗೊತ್ತಲ್ಲಾ? ಅದೇ ವಿಕ್ರಮಾದಿತ್ಯ ... ಇನ್ನು ಚಾಲೆ೦ಜ್ ಬಗ್ಗೆ ಗೊತ್ತಿಲ್ಲ :-| ಅವರೂ 'ಭ' ನಾನು 'ಭ' ::‍‍))))