ಬಾಲಿವುಡ್ ನ ಶ್ರೇಷ್ಠ ನಟ ಅಮಿತಾಬ್ ಬಚ್ಚನ್ ರವರ ಜೀವನ ಚಿತ್ರ, ಸ್ಮರಣೀಯ !

ಬಾಲಿವುಡ್ ನ ಶ್ರೇಷ್ಠ ನಟ ಅಮಿತಾಬ್ ಬಚ್ಚನ್ ರವರ ಜೀವನ ಚಿತ್ರ, ಸ್ಮರಣೀಯ !

ಇದೇ  ಮುಂಬೈನ ವಿಖ್ಯಾತ 'ನೆಹರು ಸೈನ್ಸ್ ಸೆಂಟರ್' . ಇದು ಹೊರಗೆ ಕಾಣಿಸುವ ದೃಶ್ಯ ! ಒಳಗಡೆ ಕಾಣಿಸುವ ವಿಶಾಲವಾದ ಕಟ್ಟಡದಲ್ಲಿ ವಸ್ತುಪ್ರದರ್ಶನಗಳು ವರ್ಷವಿಡಿ ನಡೆಯುತ್ತಲೇ ಇರುತ್ತವೆ. ಮೊನ್ನೆ ನಮ್ಮ ಬಾಲಿವುಡ್ ದಿಗ್ಗಜನಟ 'ಶ್ರೀ. ಅಮಿತಾಬ್ ಬಚ್ಚನ್' ರವರ ಹುಟು ಹಬ್ಬದ ದಿನ ನಾವು ಅಲ್ಲಿಗೆ ಭೇಟಿಮಾಡಿ 'ಜಯ ಬಚ್ಚನ್' ರವರು ಆಯೋಜಿಸಿದ್ದ ಅಮಿತಾಬರ 'ಬಾಲಿವುಡ್ ಚಿತ್ರ ಜೀವನ'ದ ಎಲ್ಲಾ ಮಗ್ಗಳುಗಳನ್ನು ನೋಡಿ ಆನಂದಿಸಿದೆವು ! 

ಈ ಕಟ್ಟಡದಲ್ಲಿ ಒಂದು ಅತ್ಯುತ್ತಮ ಹವಾನಿಯಂತ್ರಿತ ಸುಂದರ, ಭವ್ಯ ರಂಗಮಂದಿರವಿದೆ. ಅಲ್ಲಿ ಶ್ರೇಷ್ಠ ಕಲಾವಿದರ, ಸಂಗಿತಗಾರರ ಕಾರ್ಯಕ್ರಮ ಜರುಗುತ್ತದೆ. ಈ ಕಟ್ಟಡದ ಪಕ್ಕದಲ್ಲೇ 'ನೆಹರು ಪ್ಲಾನಿಟೋರಿಯಂ' ಸಹಿತ ಇದೆ. ಒಂದು ಕಾಲದಲ್ಲಿ ಕಲ್ಕತ್ತಾನಗರ ಬಿಟ್ಟರೆ ಬೋಮ್ಬಾಯಿನಲ್ಲೇ ಈ 'ಪ್ಲಾನಿಟೋರಿಯಂ' ಇದ್ದಿದ್ದು. ಈಗ ಬೆಂಗಳುರಿನಲ್ಲಿ ಇದೆ. ಇಷ್ಟು ಸಾಕು ಅಂತ ಕಾಣಿಸುತ್ತದೆ ಈ ಕಟ್ಟಡದ ಬಗ್ಗೆ. ಹೆಚ್ಚು ಮಾಹಿತಿ 'ಇಂಟರ್ನೆಟ್' ನಲ್ಲಿ ಲಭ್ಯ !

 

Comments

Submitted by lpitnal@gmail.com Tue, 10/16/2012 - 08:16

ಪ್ರಿಯ ವೆಂಕಟೇಶ ರವರೇ, ಮುಂಬಯಿಯ ನೆಹರೂ ಸೈನ್ಸ್ ಸೆಂಟರ್ ನಲ್ಲಿ ಅಮಿತಾಭ ಅವರ ಎಪ್ಪತ್ತನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ತಾವು ಭಾಗವಹಿಸಿದ ವಿಷಯ ನಮಗೆಲ್ಲ ಸಂತೋಷವನ್ನುಂಟು ಮಾಡಿತು. ಅಲ್ಲಿ ತಾವು ಆನಂದಿಸಿದ ಗಳಿಗೆಗಳ ಕುರಿತು ಬರೆಯಿರಿ. ಸಂತೋಷ ಹಂಚಿಕೊಳ್ಳಿ. ಧನ್ಯವಾದಗಳು
Submitted by venkatesh Tue, 10/16/2012 - 11:43

In reply to by lpitnal@gmail.com

ನೀವು ತಿಳಿಸಿದಂತೆ ಒಂದು ಲೇಖನ ಬರೆದಿದ್ದೇನೆ. ಅದನ್ನು ಎಡಿಟ್ ಮಾಡಲು ನನಗೆ ಆಗುತ್ತಿಲ್ಲ. ಚಿತ್ರಗಳನ್ನು ತೆಗೆಯಲು ನೆಹರು ಸೆಂಟರ್ ನಲ್ಲಿ ಅನುಮತಿ ಇರಲಿಲ್ಲ. ಆದರೂ ತಪ್ಪುಗಳನ್ನೂ ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಏನುಮಾಡುವುದು ಗೊತ್ತಿಲ್ಲ ! ಒಂದು ವಿಷಯವೆಂದರೆ ನಮ್ಮ ನೋಡುವ ಕ್ರಿಯೆ ಕ್ರಮೆಣ ಬದಲಾಯಿಸುವುದನ್ನು ನಾನು ಮನಗಂಡಿದ್ದೇನೆ. ನೋಡಿ. ನಾನು ಟೊರಾಂಟೋನಗರದಲ್ಲಿ ಕಂಡ ಸೈನ್ಸ್ ಸೆಂಟರ್, ಮತ್ತು ವಸ್ತುಪ್ರದರ್ಶನಕ್ಕೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸ ! ನಾನು ಒಂದು ಪ್ರದರ್ಶನವನ್ನು ಎಷ್ಟು ಪರಿಣಾಮಕಾರಿಯಾಗಿ ಮಾಡಬಹುದು ಎನ್ನುವ ವಿಷಯದ ಬಗ್ಗೆ ನಾನು ಹೇಳುತ್ತಿರುವುದು ! ಅಲ್ಲಿನ ತರಹ ಕೆಲವೊಂದು ಕೆಲಸಗಳನ್ನೂ ಮಾಡುವುದು ಅತಿ ಕಷ್ಟ. ಅತಿ ಮುಂದುವರೆದ ದೇಶವದು. ಎಲ್ಲವಿಶಯಗಳಲ್ಲು ! ಆದರೆ ನೆಹರೂ ಸೈನ್ಸ್ ಸೆಂಟರ್ ನಲ್ಲಿ ಜಾಗಕ್ಕೆ ಕೊರತೆಯಿಲ್ಲ. ಆದರೆ ಅದನ್ನು ಇಟ್ಟುಕೊಂಡಿರುವ ರೀತಿ ನಿಜಕ್ಕೂ ಬೇಸರ ತರಿಸುತ್ತದೆ. ಅಮಿತಾಬ್ ಬಚ್ಚನ್ ರ ಕೃತಿಗಳನ್ನೂ ಇನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಬಹುದಿತ್ತು. ಆದರೆ ನೆಹರೂರವರ ಜೀವನ ಚರಿತ್ರೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಪ್ರಯತ್ನದಲ್ಲಿ ನೆಹರೂ ಸೈನ್ಸ್ ಸೆಂಟರ್ ಸೋತಿದೆ ಎಂದರೆ ತಪ್ಪಿಲ್ಲವೆನ್ನುವುದು ನನ್ನ ಅಭಿಮತ ! ಅದೆಷ್ಟು ಜಾಗ ಪಾಲಾಗಿದೆ. ಯಾಕೆ ಬೇಕು ಅಷ್ಟು ಜನ ವಾಚ್ ಮ್ಯಾನ್ ಗಳು ? ಒಂದು ಚಿತ್ರ ಆಯತಪ್ಪಿ ಗೋಡೆಯಿಂದ ಬಿದ್ದರೆ ಅದನ್ನು ಅವರು ಎತ್ತಿಡಲು ತಿಳಿಯದ ಜನ ಅವರು ! ಆಧುನಿಕ ಭಾರತದ ಶಿಲ್ಪಿ,ನೆಹರೂರವರ ಅತ್ಯುತ್ತಮ, ಅಪರೂಪದ ಭಿತ್ತಿ ಚಿತ್ರಗಳು ಮೂಲೆಯಲ್ಲಿ ಕೊಳೆಯುತ್ತಾ ಧೂಳುಹತ್ತಿ ಬಿದ್ದಿದ್ದವು. ಯಾವುದೋ ಮೊಹೆಂಜೋದಾರೋ ಸಂಸ್ಕೃತಿಯ ಚಿತ್ರಗಳನ್ನೂ ಪ್ರದರ್ಶನಕ್ಕೆ ಇಟ್ಟಿದ್ದಾರೆ ಸರಿ. ಆದರೆ ನೆಹರೂರವವರ ವ್ಯಕ್ತಿತ್ವವನ್ನೂ ಬೆಳಗಿಲ್ಲ ! ಅದರ ಬಗ್ಗೆ ಕಾಳಜಿಯೇ ಇಲ್ಲದ ತರಹ ಅಲ್ಲಿನ ವಾತಾವರಣ ಕಾಣಿಸುತ್ತಿತ್ತು !