ಬಲಿ ಪಾಡ್ಯಮಿ

ಬಲಿ ಪಾಡ್ಯಮಿ

ಕವನ

 

ಬಲಿಯನು ಬಲದಲಿ ಸಹಿಸದ ಇಂದ್ರನು |

ಮೊರೆಯಲು ಮುರಹರಿ ಯೋಜಿತ ಯಾಚನೆ |

ವಾಮನ ತ್ರಿಪದದ ಒಗಟಿನ ಭಿಕ್ಷೆಗೆ  |

ದಾನವ ಗುರುವಿನ ದಾನದ ಅಡ್ಡಿಗೆ  |

ಶುಕ್ರನ ಅಕ್ಷಿಗೆ ಧರ್ಭೆಯ ಮೋಕ್ಷ      || 1 ||

 

ಧೀರನ ಧಾರೆಯ ದಾನ ಪ್ರದಾನ   |

ವಾಮನ ಪದದಲಿ ಬಾನುವು ಭುವನ |

ಶಿರವನು ತೋರಿದ ಮೂರನೆ ಪದಕೆ |

ಪಾದುಕೆ ತಾಕಿತು ತೂಕದ ಶಿರಕೆ |

ಹರಿಶಿರ ತಗ್ಗಿತು ಭಕ್ತಿಯ ಶಕ್ತಿಗೆ |

ಹರಸಿದ ಬಲಿಯನು ಒಲವಿನ ಬಲೆಯಲಿ |

ಬಲಿಯನು ನೆನೆಯದೆ ಅವನಿಯೆ ಇರದು   || 2 ||

 

ದಶವಿಧ ರೂಪದ  ವಿಷ್ಣು ವಿಯೋಜಿತ |

ಸಂಕೋಚಿತ ಸಂಕುಚಿತದ ಕುಸಿತದ |

ಯಾಚಕ ವೇಷಕೆ ಕುಬ್ಜಿತ ವಾಮನ |

ಬಲೀಂದ್ರನ ಭಕ್ತಿಯ ಶಕ್ತಿಗೆ ನಮನ |

ಭಕ್ತರ ಕಾಯುವ ಸಂಚಿತ ಭಕ್ತಿಗೆ  |

ಜಯಪ್ರಕಾಶಿತ ಕವನದ ನಮನ   || 3 ||

Comments