ಬಲಿ ಪಾಡ್ಯಮಿ
ಕವನ
ಬಲಿಯನು ಬಲದಲಿ ಸಹಿಸದ ಇಂದ್ರನು |
ಮೊರೆಯಲು ಮುರಹರಿ ಯೋಜಿತ ಯಾಚನೆ |
ವಾಮನ ತ್ರಿಪದದ ಒಗಟಿನ ಭಿಕ್ಷೆಗೆ |
ದಾನವ ಗುರುವಿನ ದಾನದ ಅಡ್ಡಿಗೆ |
ಶುಕ್ರನ ಅಕ್ಷಿಗೆ ಧರ್ಭೆಯ ಮೋಕ್ಷ || 1 ||
ಧೀರನ ಧಾರೆಯ ದಾನ ಪ್ರದಾನ |
ವಾಮನ ಪದದಲಿ ಬಾನುವು ಭುವನ |
ಶಿರವನು ತೋರಿದ ಮೂರನೆ ಪದಕೆ |
ಪಾದುಕೆ ತಾಕಿತು ತೂಕದ ಶಿರಕೆ |
ಹರಿಶಿರ ತಗ್ಗಿತು ಭಕ್ತಿಯ ಶಕ್ತಿಗೆ |
ಹರಸಿದ ಬಲಿಯನು ಒಲವಿನ ಬಲೆಯಲಿ |
ಬಲಿಯನು ನೆನೆಯದೆ ಅವನಿಯೆ ಇರದು || 2 ||
ದಶವಿಧ ರೂಪದ ವಿಷ್ಣು ವಿಯೋಜಿತ |
ಸಂಕೋಚಿತ ಸಂಕುಚಿತದ ಕುಸಿತದ |
ಯಾಚಕ ವೇಷಕೆ ಕುಬ್ಜಿತ ವಾಮನ |
ಬಲೀಂದ್ರನ ಭಕ್ತಿಯ ಶಕ್ತಿಗೆ ನಮನ |
ಭಕ್ತರ ಕಾಯುವ ಸಂಚಿತ ಭಕ್ತಿಗೆ |
ಜಯಪ್ರಕಾಶಿತ ಕವನದ ನಮನ || 3 ||
Comments
ನಿಮ್ಮ ಕಾವ್ಯ ಧಾರೆ ಬಹು ಸುಂದರ.
ನಿಮ್ಮ ಕಾವ್ಯ ಧಾರೆ ಬಹು ಸುಂದರ.
ಮತ್ತಷ್ಟು ಬರೆಯಿರಿ.
ಶುಭವಾಗಲಿ.
In reply to ನಿಮ್ಮ ಕಾವ್ಯ ಧಾರೆ ಬಹು ಸುಂದರ. by Maalu
ತುಂಬಾ ಚೆನ್ನಾಗಿದೆ.....
ತುಂಬಾ ಚೆನ್ನಾಗಿದೆ.....
ಕಾವ್ಯ ರಚನೆ ಸಖತ್
ಶುಭವಾಗಲಿ..
ನನ್ನಿ
\|
In reply to ನಿಮ್ಮ ಕಾವ್ಯ ಧಾರೆ ಬಹು ಸುಂದರ. by Maalu
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು