ಸಬ್ಬಕ್ಕಿ ಸೊಪ್ಪಿನ ಚಪಾತಿ
ಬೇಕಿರುವ ಸಾಮಗ್ರಿ
ಗೋಧಿ ಹಿಟ್ಟು – 2 ಕಪ್, ಸಣ್ಣಗೆ ಕತ್ತರಿಸಿದ ಸಬ್ಬಕ್ಕಿ ಸೊಪ್ಪು – ½ ಕಪ್, ಎಣ್ಣೆ – 10 ಚಮಚ, ಉಪ್ಪು – ರುಚಿಗೆ ತಕ್ಕಂತೆ, ಸಕ್ಕರೆ – 2 ಚಮಚ.
ತಯಾರಿಸುವ ವಿಧಾನ
ಅಗಲ ಬಾಯಿಯ ಪಾತ್ರೆಯಲ್ಲಿ ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಮತ್ತು ಸಬ್ಬಕ್ಕಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ನೀರು ಹಾಕಿ ಚೆನ್ನಾಗಿ ಕಲೆಸಿ. ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ನಾದಿ ತಟ್ಟೆಯಿಂದ ಮುಚ್ಚಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿ ಚಪಾತಿ ಲಟ್ಟಿಸಿ ಬೇಯಿಸಿ. ಬಿಸಿ ಬಿಸಿ ಚಪಾತಿಯನ್ನು ಕಾಯಿ ಚಟ್ನಿಯೊಂದಿಗೆ ತಿನ್ನಲು ಬಲು ರುಚಿಯಾಗಿರುತ್ತದೆ.
Comments
ಶೋಭಾ ಅವರೆ,
ಶೋಭಾ ಅವರೆ,
ಬಿಸಿ ಬಿಸಿ, ರುಚಿ ರುಚಿ ಯಾಗಿರುವ ಚಪಾತಿಯ ಚಿತ್ರ ಹಾಕಬಹುದಿತ್ತು.... :-)
ಸುಮಾರವರೆ, ಚಿತ್ರ ಅಪ್ ಲೋಡ್
ಸುಮಾರವರೆ, ಚಿತ್ರ ಅಪ್ ಲೋಡ್ ಮಾಡಲು ಬರುತ್ತಿಲ್ಲ.
In reply to ಸುಮಾರವರೆ, ಚಿತ್ರ ಅಪ್ ಲೋಡ್ by Shobha Kaduvalli
ಸಬಸ್ಕೆ ಸೊಪ್ಪು, ಸಬ್ಬಕ್ಕಿ
ಸಬಸ್ಕೆ ಸೊಪ್ಪು, ಸಬ್ಬಕ್ಕಿ ಸೊಪ್ಪು ಎರಡೂ ಒಂದೇನಾ, ಶೋಭಾ ಮೇಡಂ? ನಾನು ತರಕಾರೀ ಕೊಳ್ಳುವ ಮಾರುಕಟ್ಟೆಯಲ್ಲಿ ಸಬಸ್ಕೆ ಸೊಪ್ಪು ಎಂದು ಕರೆಯುವುದನ್ನು ಕೇಳಿದ್ದೇನೆ.
In reply to ಸಬಸ್ಕೆ ಸೊಪ್ಪು, ಸಬ್ಬಕ್ಕಿ by abdul
ಅಬ್ದುಲ್ ರವರೆ, ಸಬ್ಬಕ್ಕಿ ಸೊಪ್ಪು
ಅಬ್ದುಲ್ ರವರೆ, ಸಬ್ಬಕ್ಕಿ ಸೊಪ್ಪು ಮತ್ತು ಸಬ್ಬಸ್ಕೆ ಸೊಪ್ಪು ಎರಡೂ ಒಂದೇ. ಇಲ್ಲಿ ಅಂದರೆ ಬೆಂಗಳೂರಿನಲ್ಲಿ..ಅಲ್ಲಲ್ಲ ತಲಘಟ್ಟ ಪುರದಲ್ಲಿ ಸಬಕ್ಕಿ ಸೊಪ್ಪು ಎನ್ನುತ್ತಾರೆ. ತಡ ಏಕೆ? ಸಬಸ್ಕೆ ಸೊಪ್ಪಿನ ಚಪಾತಿ ಮಾಡಿ ಸವಿಯಿರಿ.
In reply to ಅಬ್ದುಲ್ ರವರೆ, ಸಬ್ಬಕ್ಕಿ ಸೊಪ್ಪು by Shobha Kaduvalli
ನಿಜ ಹೇಳಬೇಕೆಂದರೆ ಸಬ್ಬಕ್ಕಿ
ನಿಜ ಹೇಳಬೇಕೆಂದರೆ ಸಬ್ಬಕ್ಕಿ ಸೊಪ್ಪಿನ ಚಪಾತಿ ಯನ್ನು ತಿಂದಿದ್ದೇನೆ, ಚಿಕ್ಕಂದಿನಲ್ಲಿ. ನನ್ನ ಅಜ್ಜಿ ಪಾಕ ಶಾಸ್ತ್ರ ಪ್ರವೀಣೆಯಾ ಗಿದ್ದರು. ಕನ್ನಡದ ವಾರಪತ್ರಿಕೆ, (ಸುಧಾ, ಮಯೂರ, ಕಸ್ತೂರಿ, ಮಲ್ಲಿಗೆ) ಮಾಸ ಪತ್ರಿಕೆಗಳನ್ನ ಓದುತ್ತಿದ್ದ ಅವರಿಗೆ ಪಾಕಶಾಸ್ತ್ರ, ಮನೆ ಔಷಧಿ, ಇವು ಕರಗತ. ನಿಮ್ಮ ಕೈಯ ಸಬ್ಬಕ್ಕಿ ಚಪಾತಿ ಚೆನ್ನಾಗಿರಲೇಬೇಕು. -)
In reply to ನಿಜ ಹೇಳಬೇಕೆಂದರೆ ಸಬ್ಬಕ್ಕಿ by abdul
ಹಾಂ ... ಹಾಂ... ನನ್ನ
ಹಾಂ ... ಹಾಂ... ನನ್ನ ಸ್ನೇಹಿತೆಯರು ಸವಿದು ಚೆನ್ನಾಗಿದೆ ಎಂದು ಹೇಳುತ್ತಾರೆ... ಮನೆಯವರಲ್ಲ..!
In reply to ಸುಮಾರವರೆ, ಚಿತ್ರ ಅಪ್ ಲೋಡ್ by Shobha Kaduvalli
ಕೆಲವು ಫೋಟೊಸ್ ಅಪ್ ಲೋಡ್ ಮಾಡಲು
ಕೆಲವು ಫೋಟೊಸ್ ಅಪ್ ಲೋಡ್ ಮಾಡಲು ಪ್ರಯತ್ನಿಸಿದೆ... ನನಗೆ ಗೊತ್ತಾಗಲಿಲ್ಲ.... .
In reply to ಕೆಲವು ಫೋಟೊಸ್ ಅಪ್ ಲೋಡ್ ಮಾಡಲು by Shobha Kaduvalli
ಫೋಟೋ ಅಪ್ಲೋಡ್ ಮೊದಲು ಇನ್ನೂ
ಫೋಟೋ ಅಪ್ಲೋಡ್ ಮೊದಲು ಇನ್ನೂ ಕಷ್ಟವಿತ್ತು. ಫೋಟೋ ಗಳನ್ನು "ಪಿಕಾಸವೆಬ್ ಗೆ ಅಪ್ಲೋಡ್ ಮಾಡಿ, ಅಲ್ಲಿಂದ ಒಂದಿಷ್ಟು ಸರ್ಕಸ್ ಮಾಡಿದ ನಂತರ ಸಂಪದದಲ್ಲಿ ಹಾಕಬೇಕಿತ್ತು. ಈಗ ಹಾಗಿಲ್ಲ. ನಿಮಗೆ ಆಗುತ್ತಿರುವ ತೊಂದರೆ ಎಲ್ಲಿ?
In reply to ಫೋಟೋ ಅಪ್ಲೋಡ್ ಮೊದಲು ಇನ್ನೂ by abdul
ಕ್ಯಾಮೆರಾದಿಂದ ಕಂಪ್ಯೂಟರ್ ಗೆ
ಕ್ಯಾಮೆರಾದಿಂದ ಕಂಪ್ಯೂಟರ್ ಗೆ ಲೋಡ್ ಮಾಡಿದ್ದೇನೆ. ನಂತರ ಕಂಪ್ಯೂಟರ್ ನಿಂದ ಸಂಪದಕ್ಕೆ ಅಪ್ ಲೋಡ್ ಮಾಡಲು ನನಗೆ ತಿಳಿಯುತ್ತಿಲ್ಲ.
In reply to ಕ್ಯಾಮೆರಾದಿಂದ ಕಂಪ್ಯೂಟರ್ ಗೆ by Shobha Kaduvalli
ಲೇಖನ ಸೇರಿಸುವಾಗ ಚಿತ್ರ ಸೇರಿಸಲು
ಲೇಖನ ಸೇರಿಸುವಾಗ ಚಿತ್ರ ಸೇರಿಸಲು ವ್ಯವಸ್ಥೆಯುಂಟು. ಲೇಖನ ಸೇರಿಸಿದ ನಂತರ ಅದನ್ನು ಎಡಿಟ್ ಮಾಡಲಾಗದು.
ಚಿತ್ರ ಬ್ಯಾಕೆಂಡ್ ತಂಡಕ್ಕೆ ಕಳುಹಿಸಿಕೊಡಿ. ಈ ಪುಟಕ್ಕೆ ಹಾಕುವಲ್ಲಿ ಸಹಾಯ ಮಾಡುವರು.
In reply to ಲೇಖನ ಸೇರಿಸುವಾಗ ಚಿತ್ರ ಸೇರಿಸಲು by hpn
>>ಚಿತ್ರ ಬ್ಯಾಕೆಂಡ್ ತಂಡಕ್ಕೆ
>>ಚಿತ್ರ ಬ್ಯಾಕೆಂಡ್ ತಂಡಕ್ಕೆ ಕಳುಹಿಸಿಕೊಡಿ.-ಬಿಸಿಬಿಸಿ ರುಚಿರುಚಿ ಚಪಾತಿ ಇತ್ಲಾಗೆ ಕಳುಹಿಸಿ..:)
In reply to >>ಚಿತ್ರ ಬ್ಯಾಕೆಂಡ್ ತಂಡಕ್ಕೆ by ಗಣೇಶ
:)
:)